ಅಧಿವೇಶನ ವೀಕ್ಷಿಸಿದ ರಿಷಿಕುಲ್ ವಿದ್ಯಾಪೀಠ ಮಕ್ಕಳು

KannadaprabhaNewsNetwork |  
Published : Feb 05, 2026, 01:45 AM IST
ಸೂಲಿಬೆಲೆ ಸಮೀಪದ ರಿಷಿಕುಲ್ ವಿದ್ಯಾಪೀಠದ ವಿದ್ಯಾರ್ಥಿಗಳು ವಿಧಾನಸಭೆಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು, ಶಾಸಕ ಶರತ್ ಬಚ್ಚೇಗೌಡ ಅಭಿನಂದಿಸಿದರು, ಶಾಲಾ ಆಧ್ಯಕ್ಷ ದೇವರಾಜ್, ಕಾರ್ಯದರ್ಶಿ ಜಲಜಾಕ್ಷಿ ಇತರರು ಇದ್ದರು. | Kannada Prabha

ಸಾರಾಂಶ

ಸೂಲಿಬೆಲೆ: ಇಲ್ಲಿನ ರಿಷಿಕುಲ್ ವಿದ್ಯಾಪೀಠದ ಮಕ್ಕಳಿಗೆ ವಿಧಾನಸಭೆಯ ಅಧಿವೇಶನ ವೀಕ್ಷಿಸಲು ಶಾಸಕ ಶರತ್ ಬಚ್ಚೇಗೌಡರು ಅವಕಾಶ ಮಾಡಿಕೊಟ್ಟರು ಎಂದು ರಿಷಿಕುಲ್ ವಿದ್ಯಾಪೀಠದ ಅಧ್ಯಕ್ಷ ಕೆ.ಆರ್.ದೇವರಾಜ್ ಹೇಳಿದರು

ಸೂಲಿಬೆಲೆ: ಇಲ್ಲಿನ ರಿಷಿಕುಲ್ ವಿದ್ಯಾಪೀಠದ ಮಕ್ಕಳಿಗೆ ವಿಧಾನಸಭೆಯ ಅಧಿವೇಶನ ವೀಕ್ಷಿಸಲು ಶಾಸಕ ಶರತ್ ಬಚ್ಚೇಗೌಡರು ಅವಕಾಶ ಮಾಡಿಕೊಟ್ಟರು ಎಂದು ರಿಷಿಕುಲ್ ವಿದ್ಯಾಪೀಠದ ಅಧ್ಯಕ್ಷ ಕೆ.ಆರ್.ದೇವರಾಜ್ ಹೇಳಿದರು.

ಹೋಬಳಿಯ ಚಿಕ್ಕಹರಳಗೆರೆ ರಿಷಿಕುಲ್ ವಿದ್ಯಾಪೀಠದ ೧೦೦ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವರ್ಗಕ್ಕೆ ಅಧಿವೇಶನ ವೀಕ್ಷಿಸುವ ಅವಕಾಶ ಒದಗಿಸಿಕೊಟ್ಟರು. ಇದರಿಂದ ಮಕ್ಕಳಿಗೆ ವಿಧಾನಸೌಧ ಹಾಗೂ ಶಾಸನ ಸಭೆಯ ಕಾರ್ಯಕಲಾಪಗಳ ಬಗ್ಗೆ ಮಾಹಿತಿ ದೊರೆಯಿತು ಎಂದರು. ೭ನೇ ತರಗತಿಯಿಂದ ೧೦ನೇ ತರಗತಿವರೆಗಿನ ೧೦೦ ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಿಸಿದರು. ಇದರಿಂದ ವಿದ್ಯಾರ್ಥಿಗಳಲ್ಲಿ ಅಧಿವೇಶನದಲ್ಲಿ ನಡೆಯುವ ಅಭಿವೃದ್ಧಿ ಪರ ಚಿಂತನೆಗಳು, ಪ್ರಶ್ನೆಗಳು ಮತ್ತು ಉತ್ತರಗಳ ವಿವರಣೆ ವೀಕ್ಷಿಸಿದರು. ವಿದ್ಯಾರ್ಥಿ ದಿಸೆಯಲ್ಲಿ ಇದು ಮರೆಯಲಾಗದ ನೆನಪು ಎಂದರು. ಕಲಾಪ ವೀಕ್ಷಣೆ ಬಳಿಕ ವಿಧಾನಸೌಧದ ಮುಂದೆ ಶಾಸಕ ಶರತ್‌ ಬಚ್ಚೇಗೌಡರೊಂದಿಗೆ ಶಾಲಾ ಕಾರ್ಯದರ್ಶಿ ಜಲಜಾಕ್ಷಿ, ಶಿಕ್ಷಕಿ ಸೌಮ್ಯ, ಮಮತ, ಲಕ್ಷ್ಮೀಪ್ರಸನ್ನ, ಕಾವ್ಯ, ಸಂಗೀತಾ ಹಾಗೂ ವಿದ್ಯಾರ್ಥಿಗಳು ಭಾವಚಿತ್ರ ತೆಗೆದುಕೊಂಡರು.

(ಫೋಟೋ ಕ್ಯಾಫ್ಷನ್‌)

ರಿಷಿಕುಲ್ ವಿದ್ಯಾಪೀಠದ ಮಕ್ಕಳು ಅಧಿವೇಶನದ ಕಲಾಪ ವೀಕ್ಷಣೆ ಬಳಿಕ ವಿಧಾನಸೌಧದ ಮುಂದೆ ಶಾಸಕ ಶರತ್‌ ಬಚ್ಚೇಗೌಡರೊಂದಿಗೆ ಶಾಲಾ ಕಾರ್ಯದರ್ಶಿ ಜಲಜಾಕ್ಷಿ, ಶಿಕ್ಷಕಿ ಸೌಮ್ಯ, ಮಮತ, ಲಕ್ಷ್ಮೀಪ್ರಸನ್ನ, ಕಾವ್ಯ, ಸಂಗೀತಾ ಭಾವಚಿತ್ರ ತೆಗೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯ
ಔರಾದ್ ತಾಲೂಕು ಅದ್ಧೂರಿ ಕಸಾಪ ಸಮ್ಮೇಳನ