ಉತ್ತರಾದಿ ಮಠದಲ್ಲಿ ಧಾರ್ಮಿಕ ಕೈಂಕರ್ಯ

KannadaprabhaNewsNetwork |  
Published : Nov 17, 2024, 01:23 AM IST
೧೬ಬಿಎಸ್ವಿ೦೧- ಬಸವನಬಾಗೇವಾಡಿಯ ಉತ್ತರಾದಿ ಮಠದಲ್ಲಿ ಶುಕ್ರವಾರ ಸಂಜೆ ಹುಣ್ಣಿಮೆಯಂಗವಾಗಿ ಕಾರ್ತಿಕ ದೀಪೋತ್ಸವ, ಪಂಚರತ್ನ ಸುಳಾದಿ, ತುಳಸಿ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾ-ಭಕ್ತಿಯಿಂದ ಜರುಗಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಗೌರಿ ಹುಣ್ಣಿಮೆಯಂಗವಾಗಿ ಪಂಚರತ್ನ ಸುಳಾದಿ, ಕಾರ್ತಿಕ ದೀಪೋತ್ಸವ, ಪುರಾಣ, ಗಮನ ಕಾರ್ಯಕ್ರಮ ಹಾಗೂ ತುಳಸಿ ವಿವಾಹಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ಪಟ್ಟಣದ ಉತ್ತರಾದಿ ಮಠದಲ್ಲಿ ಗೌರಿ ಹುಣ್ಣಿಮೆಯಂಗವಾಗಿ ಪಂಚರತ್ನ ಸುಳಾದಿ, ಕಾರ್ತಿಕ ದೀಪೋತ್ಸವ, ಪುರಾಣ, ಗಮನ ಕಾರ್ಯಕ್ರಮ ಹಾಗೂ ತುಳಸಿ ವಿವಾಹಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ-ಭಕ್ತಿಯಿಂದ ನೆರವೇರಿದವು.ಮೊದಲಿಗೆ ಭಕ್ತರಿಂದ ಪಂಚರತ್ನ ಸುಳಾದಿ ಹಾಗೂ ದೀಪೋತ್ಸವ ಸೇವೆ ಜರುಗಿತು. ನಂತರ ಮುತ್ತಗಿಯ ನರಹರಿ ಆಚಾರ್ಯ ಜೋಶಿ ಅವರಿಂದ ತುಳಸಿ ವಿವಾಹದ ಮಹತ್ವ ಕುರಿತು ಪ್ರವಚನ, ಮನಗೂಳಿಯ ಜಿ.ವ್ಹಿ.ಕುಲಕರ್ಣಿ, ಜಿ.ಎಚ್.ಕುಲಕರ್ಣಿ ಅವರಿಂದ ಕುಮಾರವ್ಯಾಸ ಮಹಾಭಾರತದಲ್ಲಿನ ಅರ್ಜುನನ ವಿಜಯೋತ್ಸವ ಕುರಿತು ಗಮಕ ವಾಚನ ಮತ್ತು ವ್ಯಾಖ್ಯಾನ ನಡೆಯಿತು. ಕೊನೆಯಲ್ಲಿ ತುಳಸಿ ವಿವಾಹ ವಿಜೃಂಭಣೆಯಿಂದ ನೆರವೇರಿತು. ವಿಠ್ಠಲಾಚಾರ್ಯ ಜೋಶಿ, ಮುತ್ತಗಿಯ ಶ್ರೀನಿವಾಸಾಚಾರ್ಯ ಜೋಶಿ, ಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ, ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ, ಕಾರ್ಯದರ್ಶಿ ವಸಂತರಾವ ಕುಲಕರ್ಣಿ, ಪ್ರಲ್ಹಾದ ಕುಲಕರ್ಣಿ, ವಿಠ್ಠಲರಾವ ವೈದ್ಯ, ರಾಮಾಚಾರ್ಯ ಯಜುರ್ವೇದಿ, ಯಲಗೂರೇಶ ಯಜುರ್ವೇದ, ವಿಠ್ಠಲರಾವ ದೇಶಪಾಂಡೆ, ಅನಿಲ ದೇಶಪಾಂಡೆ, ಜಯತೀರ್ಥ ಇಂಗಳೇಶ್ವರ, ವಿಲಾಸ ಪುರೋಹಿತ, ರಮೇಶ ಇನಾಮದಾರ, ಸುನೀಲ ಕುಲಕರ್ಣಿ, ಶಂಕರ ಜೋಶಿ, ಅಜಿತ ಉಮರ್ಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ