ರಕ್ಷಾಬಂಧನ ಪಾವಿತ್ರ್ಯತೆಯ ಆಚರಣೆ: ರಂಭಾಪುರಿ ಶ್ರೀ

KannadaprabhaNewsNetwork | Published : Aug 20, 2024 12:45 AM

ಸಾರಾಂಶ

ಬಾಳೆಹೊನ್ನೂರು, ರಕ್ಷಾ ಬಂಧನ ಅತ್ಯಂತ ಪವಿತ್ರ ಹಬ್ಬವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ನಡೆದ ರಕ್ಷಾಬಂಧನ ಆಚರಣೆಯಲ್ಲಿ ಆಶೀರ್ವಚನ ನೀಡಿದರು. ಅಣ್ಣ-ತಂಗಿ ಸಂಬಂಧದ ಪರಿಕಲ್ಪನೆಯೇ ರಕ್ಷಾಬಂಧನ. ಪ್ರತೀ ವರ್ಷ ಶ್ರಾವಣ ಮಾಸದ ಪೌರ್ಣಿಮೆ ದಿನ ಇದರ ಆಚರಣೆ ಅತ್ಯಂತ ಮಹತ್ವಹೊಂದಿದೆ. ತಂಗಿ ಅಣ್ಣನಿಗೆ ರಕ್ಷೆ ಕಟ್ಟಿ ತನ್ನನ್ನು ಜೀವನವೀಡಿ ಪ್ರತಿ ಘಟನೆಗಳಲ್ಲೂ ರಕ್ಷಿಸುವ ಜವಾಬ್ದಾರಿ ನೀಡುತ್ತಾಳೆ ಎಂದರು.

ರಂಭಾಪುರಿ ಪೀಠದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ನಡೆದ ರಕ್ಷಾಬಂಧ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಕ್ಷಾ ಬಂಧನ ಅತ್ಯಂತ ಪವಿತ್ರ ಹಬ್ಬವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಸೋಮವಾರ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದಿಂದ ನಡೆದ ರಕ್ಷಾಬಂಧನ ಆಚರಣೆಯಲ್ಲಿ ಆಶೀರ್ವಚನ ನೀಡಿದರು. ಅಣ್ಣ-ತಂಗಿ ಸಂಬಂಧದ ಪರಿಕಲ್ಪನೆಯೇ ರಕ್ಷಾಬಂಧನ. ಪ್ರತೀ ವರ್ಷ ಶ್ರಾವಣ ಮಾಸದ ಪೌರ್ಣಿಮೆ ದಿನ ಇದರ ಆಚರಣೆ ಅತ್ಯಂತ ಮಹತ್ವಹೊಂದಿದೆ. ತಂಗಿ ಅಣ್ಣನಿಗೆ ರಕ್ಷೆ ಕಟ್ಟಿ ತನ್ನನ್ನು ಜೀವನವೀಡಿ ಪ್ರತಿ ಘಟನೆಗಳಲ್ಲೂ ರಕ್ಷಿಸುವ ಜವಾಬ್ದಾರಿ ನೀಡುತ್ತಾಳೆ.

ಪುರಾಣ ಕಾಲದಲ್ಲಿಯೂ ಸಹ ರಕ್ಷಾಬಂಧನ ಆಚರಣೆ ಚಾಲ್ತಿಯಲ್ಲಿದ್ದು, ಪೌರಾಣಿಕ ಕಥೆಗಳಲ್ಲಿ ಕೃಷ್ಣ-ದ್ರೌಪದಿ, ರಾಣಿ ಕರ್ಣವತಿ-ಹುಮಾಯೂನ್, ಯಮ-ಯಮುನಾ, ಗಣಪತಿ-ಮಾನಸ, ಲಕ್ಷ್ಮಿ-ಬಾಲಿ ಮುಂತಾದವರು ರಕ್ಷೆ ಕಟ್ಟಿಕೊಂಡು ಪವಿತ್ರ ಸಂಬಂಧ ಹೊಂದಿರುವ ಬಗ್ಗೆ ಉಲ್ಲೇಖವಿದೆ. ರಕ್ಷೆ ಕಟ್ಟಿಕೊಂಡ ಅಣ್ಣ ತನ್ನ ತಂಗಿ ಏನಾದರೂ ಉಡುಗೊರೆ ನೀಡಿ ಸುಮ್ಮನಿದ್ದರೆ ಸಾಲದು, ಅದರ ಹಿಂದಿರುವ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಜೀವನದಲ್ಲಿ ನಡೆದುಕೊಳ್ಳಬೇಕು. ರಕ್ಷಾಬಂಧನ ಹಬ್ಬದಿಂದ ಸಹೋದರತೆ, ಸ್ನೇಹತ್ವ, ಬಾಂಧವ್ಯತೆ ಬೆಳೆಯಲಿದೆ ಎಂದ ಅವರು, ಕಲಿಯುಗದಲ್ಲಿ ಅಣ್ಣ-ತಂಗಿಯರ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಆಶಿಸಿದ ಅವರು, ಇಂದಿನ ಯುವಕರು ಪ್ರತಿ ಹೆಣ್ಣುಮಕ್ಕಳನ್ನು ಸಹೋದರಿ ಭಾವನೆಯಿಂದ ನೋಡಿ ಅವರ ರಕ್ಷಣೆಗೆ ಕಂಕಣಬದ್ಧರಾಬೇಕು ಎಂದರು.ಈಶ್ವರೀಯ ವಿದ್ಯಾಲಯದ ಬಿ.ಕೆ.ದೇವಿಯಕ್ಕ ಮಾತನಾಡಿ, ಪವಿತ್ರ ರಕ್ಷಾಬಂಧನ ದಿನದಂದು ರಂಭಾಪುರಿ ಜಗದ್ಗುರುಗಳಿಗೆ ರಕ್ಷೆ ಕಟ್ಟಿ ಆಶೀರ್ವಾದ ಹಾಗೂ ಅಭಯ ಪಡೆಯಲಾಗಿದೆ. ಇದೊಂದು ಅಪೂರ್ವ ಸಂಭ್ರಮದ ದಿನ ಎಂದರು.ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದ ಚಂದ್ರೇಗೌಡ, ಸಂಜೀವಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.೧೯ಬಿಹೆಚ್‌ಆರ್ ೪:

ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ರಕ್ಷಾಬಂಧನ ಆಚರಣೆಯ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳಿಗೆ ಬಿ.ಕೆ.ದೇವಿ ರಕ್ಷೆ ಕಟ್ಟಿ ಆಶೀರ್ವಾದ ಪಡೆದರು.

Share this article