ನಿತ್ಯ 200 ಸ್ಕೂಟರ್ ಉತ್ಪಾದಿಸುವ ರಿವರ್ ಫ್ಯಾಕ್ಟರಿ

KannadaprabhaNewsNetwork |  
Published : Feb 08, 2026, 02:15 AM IST
ಹೊಸಕೋಟೆಯ ಹೊರವಲಯದಲ್ಲಿರುವ ರಿವರ್ ಇಂಡಿ ಸ್ಕೂಟರ್ ಉತ್ಪಾದನಾ ಘಟಕದ  ಉದ್ಯೋಗಿಗಳು. | Kannada Prabha

ಸಾರಾಂಶ

2021ರಲ್ಲಿ ಬೆಂಗಳೂರಿನ ಅರವಿಂದ್ ಮಣಿ ಹಾಗೂ ವಿಪಿನ್ ಜಾರ್ಜ್ ಕಟ್ಟಿದ್ದ ರಿವರ್ ಇಂಡಿ ಕಂಪನಿಯು ವಾರ್ಷಿಕ 20 ಸಾವಿರಕ್ಕೂ ಹೆಚ್ಚು ಸ್ಕೂಟರ್ ಮಾರಾಟ ಮಾಡಿ ಇಂದು ದೇಶದ 7ನೇ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿ ಹೊರಹೊಮ್ಮಿದೆ.

ರಾಜಗುರು

ಕನ್ನಡಪ್ರಭ ವಾರ್ತೆ ಹೊಸಕೋಟೆ

2021ರಲ್ಲಿ ಬೆಂಗಳೂರಿನ ಅರವಿಂದ್ ಮಣಿ ಹಾಗೂ ವಿಪಿನ್ ಜಾರ್ಜ್ ಕಟ್ಟಿದ್ದ ರಿವರ್ ಇಂಡಿ ಕಂಪನಿಯು ವಾರ್ಷಿಕ 20 ಸಾವಿರಕ್ಕೂ ಹೆಚ್ಚು ಸ್ಕೂಟರ್ ಮಾರಾಟ ಮಾಡಿ ಇಂದು ದೇಶದ 7ನೇ ಅತಿದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿ ಹೊರಹೊಮ್ಮಿದೆ.

2026 ಮಾರ್ಚ್‌ಗೆ ರಿವರ್ ಮೊಬೈಲಿಟಿ 5 ವರ್ಷ ಪೂರೈಸುತ್ತಿರುವ ಹಿನ್ನೆಲೆ ಹೊಸಕೋಟೆಯ ರಿವರ್ ಉತ್ಪಾದನಾ ಘಟಕದಲ್ಲಿ ಪತ್ರಕರ್ತರಿಗೆ ಏರ್ಪಡಿಸಿದ್ದ ಫ್ಯಾಮ್ ಟ್ರಿಪ್ ಸರಣಿ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅರವಿಂದ್ ತಮ್ಮ ರಿವರ್ ಉದ್ಯಮದ ಸಾಹಸಗಾಥೆ ತಿಳಿಸಿದರು.

ಗೆಳೆಯ ವಿಪಿನ್ ಜಾರ್ಜ್ ಜೊತೆ ಸೇರಿ ₹18 ಕೋಟಿ ಬಂಡವಾಳ ಹೂಡಿ ಉದ್ಯಮ ಸ್ಥಾಪಿಸಿದ್ದು, ಇಂದು ವಾರ್ಷಿಕ ₹575 ಕೋಟಿ ವಹಿವಾಟು ನಡೆಯುತ್ತಿದೆ. ದೇಶಾದ್ಯಂತ 60ಕ್ಕೂ ಹೆಚ್ಚಿನ ಶೋ ರೂಮ್‌ಗಳನ್ನು ಹೊಂದಿದ್ದು, ತಿಂಗಳಿಗೆ 2,500ಕ್ಕೂ ಅಧಿಕ ಸ್ಕೂಟರ್ ಮಾರಾಟ ಮಾಡಿ ಮೈಲುಗಲ್ಲು ಸ್ಥಾಪಿಸಿದೆ ಎಂದು ತಿಳಿಸಿದರು.

ರೈತರು, ಕಾರ್ಮಿಕರು, ಸಣ್ಣ ಪುಟ್ಟ ಅಂಗಡಿ ವ್ಯಾಪಾರಿಗಳು ಸೇರಿ ಮಧ್ಯಮ ವರ್ಗದ ಜನರ ದೈನಂದಿನ ಬಳಕೆಗೆ ಪೂರಕ ಸೌಲಭ್ಯವನ್ನು ರಿವರ್ ಸ್ಕೂಟರ್ ಹೊಂದಿರುವುದಾಗಿ ಹೇಳಿದರು.

ದಿನಕ್ಕೆ 150- 200 ಸ್ಕೂಟರ್ ಉತ್ಪಾದನೆ:

ಹೊಸಕೋಟೆಯ ಹೊರವಲಯದಲ್ಲಿ 2.75 ಎಕರೆ ವಿಶಾಲ ಜಾಗದಲ್ಲಿ ಅಕ್ಟೋಬರ್ 2023ರಲ್ಲಿ ಆರಂಭವಾದ ಉತ್ಪಾದನಾ ಘಟಕವು ಇಂದು ದಿನಕ್ಕೆ 200ರ ಸರಾಸರಿಯಂತೆ ತಿಂಗಳಿಗೆ 6- 8 ಸಾವಿರಕ್ಕೂ ಹೆಚ್ಚು ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ 467 ನುರಿತ ತಂತ್ರಜ್ಞ/ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಬ್ಯಾಟರಿ, ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್ ಸೇರಿ ಸ್ಕೂಟರ್‌ನ ಬಹುತೇಕ ಬಿಡಿ ಭಾಗಗಳೆಲ್ಲ ಇಲ್ಲೇ ತಯಾರಾಗುತ್ತವೆ ಎಂದು ತಮ್ಮ ಫ್ಯಾಕ್ಟರಿ ಬಗ್ಗೆ ತಿಳಿಸಿದರು.

ಯಮಹಾದೊಂದಿಗೆ ಪಾಲುದಾರಿಕೆ:

2024ರಲ್ಲಿ ದೈತ್ಯ ಆಟೋ ಮೊಬೈಲ್ ಸಂಸ್ಥೆ ಯಮಹಾ 40 ಮಿಲಿಯನ್ ಹೂಡಿಕೆಯೊಂದಿಗೆ ರಿವರ್ ಇಂಡಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದು ರಿವರ್ ಸಂಸ್ಥೆಯ ಜಾಗತಿಕ ಬೆಳವಣಿಗೆಗೆ ಉತ್ತೇಜನ ನೀಡಿದೆ, ಕಳೆದ ಜನವರಿಯಲ್ಲಿ ಹೊಸಕೋಟೆಯ ಉತ್ಪಾದನಾ ಘಟಕದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಯಮಹಾ (ಇಸಿ - 06) ಮೊದಲ ಆವೃತ್ತಿಯ ಎಲೆಕ್ಟ್ರಿಕ್ ಸ್ಕೂಟರನ್ನು ಯಮಹಾ ಅಧ್ಯಕ್ಷ ಹೆಜಿಮೆ ಔಟಾ ಅವರಿಗೆ ಹಸ್ತಾಂತರಿಸುವ ಮೂಲಕ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಿರುವುದಾಗಿ ಹೇಳಿದರು.

----

ಯಮಹಾ ಇಸಿ- 06 ವಿಶೇಷತೆಗಳು:

*ಎಲ್‌ಇಡಿ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್, ಪ್ಲ್ಯಾಟ್ ಫುಟ್ ಬೋರ್ಡ್, ಸಿಂಗಲ್ ಪೀಸ್ ಸೀಟ್, ಕಲರ್ ಎಲ್ಸಿಡಿ ಡಿಸ್ಪ್ಲೇ

*ಸದ್ಯ ಬ್ಲ್ಯೂ ಮಿಕ್ಸ್ ವೈಟ್‌ನಲ್ಲಿ ಮಾತ್ರ ಲಭ್ಯ

*ಇಕೋ, ಸ್ಟ್ಯಾಂಡರ್ಡ್, ಪವರ್ ಮತ್ತು ರಿವರ್ಸ್ ರೈಡಿಂಗ್ ಮೂಡ್, ಬ್ಲ್ಯೂ ಟೂತ್, ಆ್ಯಂಟಿ ಥೆಪ್ಟ್ ಅಲಾರಂ

*4 kwh ಬ್ಯಾಟರಿ ಸಾಮರ್ಥ್ಯ, 3 ವರ್ಷ, 30,000 ಕಿ.ಮೀ. ವಾರಂಟಿ

*ಐಪಿ 67 ರೇಟಿಂಗ್- ಡಸ್ಟ್, ರೈನ್ ಪ್ರೊಟೆಕ್ಷನ್

*8 ಗಂಟೆ ಚಾರ್ಜಿಂಗ್ ಸಮಯ, 169 ಕಿ.ಮೀ. ಮೈಲೇಜ್‌

*4.5 Kw, 6.5 Kw ಗರಿಷ್ಠ ಮೋಟಾರ್ ಪವರ್, 132 ಕೇಜಿ ತೂಕ

*ಗರಿಷ್ಠ ವೇಗ 79 ಕಿ.ಮೀ.

*200mm ಡಿಸ್ಕ್ ಬ್ರೇಕ್, ಕಾಂಬಿ ಬ್ರೇಕ್ ಸಿಸ್ಟಂ

*ಪ್ರಸ್ತುತ ಮಾರುಕಟ್ಟೆಯ ಬೆಲೆ ₹1.68 ಲಕ್ಷ (ಬೆಂಗಳೂರು, ಮುಂಬೈ, ಚೆನ್ನೈ, ಪುಣೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ
ರೈಲ್ವೆ ಯೋಜನೆಗೆ ಭೂಮಿ ನೀಡಲು ರಾಜ್ಯ ಹಿಂದೇಟು