ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದಿಂದ ತಾಳಿಕೋಟಿಗೆ ಹೋಗುವ ರಸ್ತೆ ಮಧ್ಯೆ ದೇವೂರ ಗ್ರಾಮದ (23.36) ಹತ್ತಿರವಿರುವ ಹಳೆಯದಾದ ಕಲ್ಲಿನ ಸೇತುವೆ ಅರ್ಧ ಶುಕ್ರವಾರ ಕುಸಿತ ಕಂಡ ಪರಿಣಾಮ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.ಪ್ರತಿದಿನ ಈ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು, ದ್ವಿಚಕ್ರ ವಾಹನ ಹಾಗೇ ಇತರೆ ವಾಹನಗಳು ಸಂಚರಿಸುತ್ತವೆ. ಏಕಾಏಕಿ ರಸ್ತೆ ಸೇತುವೆ ಕುಸಿತ ಕಂಡ ಪರಿಣಾಮ ರಸ್ತೆ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಲು ವಾಹನ ಸವಾರರು ಆಗ್ರಹಿಸಿದ್ದಾರೆ.ಹಳೆ ಕಲ್ಲಿನ ರಸ್ತೆ ಸೇತುವೆ ಕುಸಿತಃ
ಈ ಭಾಗದ ಜನರ ದಶಕಗಳ ಕನಸು ನನಸು ಮಾಡಲು ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರ ಅವಧಿಯಲ್ಲಿ ತಾಳಿಕೋಟಿ-ದೇವರಹಿಪ್ಪರಗಿ ರಸ್ತೆ ನಿರ್ಮಾಣಕ್ಕೆ ಸುಮಾರು ₹30 ಕೋಟಿ ಅನುದಾನ ತಂದು 5 ಪ್ಯಾಕೇಜ್‌ಗಳ ಮೂಲಕ ಕಾಮುಗಾರಿಗಳಿಗೆ ಚಾಲನೆ ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಹಳ್ಳಕ್ಕೆ ರಸ್ತೆಯ ಮಧ್ಯೆ(23.36) ದೇವರಹಿಪ್ಪರಗಿ-ಬಿ.ಬಿ.ಇಂಗಳಗಿ ರಸ್ತೆ, ಸುಮಾರು 30 ವರ್ಷಗಳ ಹಳೆಯದಾದ ಕಲ್ಲಿನ ಸೇತುವೆ ಮರು ನಿರ್ಮಾಣ ಮಾಡದೇ ಇರುವುದು ಇಂದಿನ ಸ್ಥಿತಿಗೆ ಕಾರಣವಾಗಿದೆ. ರಸ್ತೆ ಮಧ್ಯೆ ಹಲವಾರು ಸಿಮೆಂಟ್ ಸೇತುವೆಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಆದರೆ, ಈ ಹಳೆಯದಾದ ಕಲ್ಲಿನ ಸೇತುವೆ ಮರು ನಿರ್ಮಾಣ ಮಾಡದೇ ಇರುವುದಕ್ಕೆ ಅಧಿಕಾರಿಗಳು ಮೇಲೆ ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ವಾಹನ ಸವಾರರ ಆಗ್ರಹ:ಮಳೆಗಾಲದಲ್ಲಿ ಕಲ್ಲಿನ ಸೇತುವೆ ಕುಸಿತ ಕಂಡ ಪರಿಣಾಮ ತಾತ್ಕಾಲಿಕವಾಗಿ ವಾಹನ ಸಂಚಾರ ಮಾಡಲು ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾದ ರಹೀಮಾನ್ ಕನಕಾಲ್, ಮಣೂರ, ದೇವೂರ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ವಾಹನ ಸವಾರರ ಆಗ್ರಹಿಸಿದ್ದಾರೆ.
ಹಳೆಯದಾದ ಕಲ್ಲಿನ ಸೇತುವೆ ರಸ್ತೆ ಹಾಳವಾದ ಕಾರಣ ಹಳ್ಳದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ. ಹಳೆಯದಾದ ಕಲ್ಲಿನ ಸೇತುವೆ ಕುಸಿತದಿಂದಾಗಿ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸ್ಥಳಕ್ಕೆ ಶುಕ್ರವಾರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಪಿಎಸೈ ಬಸವರಾಜ ತಿಪ್ಪರಡ್ಡಿ, ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಿಗೇರಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ್ದೇನೆ ಸುಮಾರು 30 ವರ್ಷಕ್ಕೂ ಹೆಚ್ಚು ಹಳೆಯದಾದ ಕಲ್ಲಿನಿಂದ ನಿರ್ಮಾಣವಾದ ಸೇತುವೆ ಕುಸಿತ ಕಂಡಿದೆ. ಸೇತುವೆ ಸುತ್ತಲೂ ನೀರು ಹಾಗೂ ಕಪ್ಪು ಮಿಶ್ರಿತ ಮಣ್ಣು ಇರುವ ಕಾರಣ ಒಂದು ಭಾಗ ಕಲ್ಲಿನ ಸೇತುವೆ ಕುಸಿತವಾಗಿದೆ. ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ತಿರುಗಾಡುತ್ತವೆ. ವಾಹನ ಸವಾರರ ಅನುಕೂಲಕ್ಕಾಗಿ ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಸಿಮೆಂಟ್ ಕಾಂಕ್ರೀಟ್ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ.-ಅರುಣಕುಮಾರ ವಡಿಗೇರಿ,
ಎಇಇ. ಪಿಡಬ್ಲ್ಯೂಡಿ ಅಧಿಕಾರಿ ಸಿಂದಗಿ.