ರಸ್ತೆ ಕಾಮಗಾರಿಗೆ ಐದು ತಿಂಗಳಿಂದ ಗ್ರಹಣ!

KannadaprabhaNewsNetwork |  
Published : Apr 17, 2025, 12:11 AM IST
3 ಕೋಟಿ ಅನುದಾನದ ಕಾಮಗಾರಿಗೆ ಐದು ತಿಂಗಳಿಂದ ಗ್ರಹಣ । | Kannada Prabha

ಸಾರಾಂಶ

ಶಾಸಕರು ಚಾಕವೇಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ದಾಗ ಗ್ರಾಮಸ್ಥರು ಸಂತಸ ಪಟ್ಟರು. ಆದರೆ ಕಾಮಗಾರಿ ಪ್ರಾರಂಭ ವಾಗದೆ ಗುದ್ದಲಿ ಪೂಜೆ ಮಾಡಿದ ಗುಂಡಿಗಳು ಹಾಗೆಯೇ ಇವೆ. ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಕಷ್ಟವಾಗಿದೆ

ಕನ್ನಡಪ್ರಭ ವಾರ್ತೆ ಚೇಳೂರು

ಟೆಂಡರ್ ಆಗಿ ಚಾಲನೆ ನೀಡಿರುವ ಕಾಮಗಾರಿಯೊಂದನ್ನು ಕಳೆದ ಐದು ತಿಂಗಳಿನಿಂದ ಆರಂಭಿಸದೆ ಇರುವುದು ಚಾಕವೇಲು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲೂಕಿನ ಚಾಕವೇಲು ಗ್ರಾಮದಿಂದ ಚೇಳೂರು ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 3 ಕೋಟಿ ರು.ಗಳ ಅನುದಾನ ಮಂಜೂರಾಗಿದೆ. ಈ ಕಾಮಗಾರಿಗೆ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ರವರು ಕಳೆದ ನವೆಂಬರ್‌ ೩೦ಚಾಲನೆ ನೀಡಿದ್ದರು. ಆದರೆ ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿ ಅಪೂರ್ಣಗೊಳಿಸಿದೆ.

ಮುಖ್ಯರಸ್ತೆ ಮೇಲೆ ಕೊಳಚೆ ನೀರು

ಚಾಕ ವೇಲು ಗ್ರಾಮದಿಂದ ಚೇಳೂರು ಸಂಪರ್ಕ ಕಲ್ಪಿಸುವ ರಸ್ತೆ ಡಾಂಬರೀಕರಣವಾದರೆ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಸದ್ಯ ಗ್ರಾಮದಲ್ಲಿ ರಸ್ತೆ ತಗ್ಗು ಗುಂಡಿಗಳಿಂದ ಕೂಡಿದ್ದು, ಗ್ರಾಮ ಪಂಚಾಯತಿಯಿಂದ ಕೂಡ ಗ್ರಾಮದಲ್ಲಿ ಸರಿಯಾಗಿ ಚರಂಡಿ ನಿರ್ಮಿಸದ ಕಾರಣದಿಂದ ಕೋಳಚೆ ನೀರು ಮುಖ್ಯ ರಸ್ತೆಯಲ್ಲಿ ಹರಿಯುತ್ತಿದೆ, ಇದರಿಂದ ನಿತ್ಯ ದ್ವಿಚಕ್ರ ವಾಹನಗಳು ಹಾಗೂ ಸಾರ್ವಜನಿಕರು ಕೆಸರಿನ ರಸ್ತೆಯಲ್ಲೇ ಓಡಾಡುವ ಪರಿಸ್ಥಿತಿ ಎದುರಾಗಿದೆ.

ಈ ಕುರಿತು ಶಾಸಕರು ಚಾಕವೇಲು ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ದಾಗ ಗ್ರಾಮಸ್ಥರು ಸಂತಸ ಪಟ್ಟರು. ಆದರೆ ಕಾಮಗಾರಿ ಪ್ರಾರಂಭ ವಾಗದೆ ಗುದ್ದಲಿ ಪೂಜೆ ಮಾಡಿದ ಗುಂಡಿಗಳು ಹಾಗೆಯೇ ಇವೆ. ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರ ಕಷ್ಟವಾಗಿದೆ. ಗ್ರಾಮೀಣ ರಸ್ತೆ ಸಂಪರ್ಕ ಸುಧಾರಣೆ ದೃಷ್ಟಿಯಿಂದ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದರೂ, ಗುತ್ತಿಗೆದಾರರು ಇದುವರೆಗೆ ಕಾಮಗಾರಿ ಆರಂಭಕ್ಕೆ ಮುಂದಾಗಿಲ್ಲ,

ರಸ್ತೆ ಡಾಂಬರಿಕರಣ ವಿಳಂಬವಾಗುತ್ತಿದ್ದರೂ ಲೋಕೋಪಯೋಗಿ ಇಲಾಖೆಯ ಆಧಿಕಾರಿಗಳು ಗುತ್ತಿಗೆದಾರರ ವಿರುದ್ದ ಯಾವುದೆ ಕ್ರಮ ಕೈಗೊಳ್ಳುತ್ತಿಲ್ಲ. ಇದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಳೆಗಾಲ ಶುರುವಾದರೆ ರಸ್ತೆಯಲ್ಲಿ ಮತ್ತಷ್ಟು ಕೆಸರು ಮಯ ವಾಗುತ್ತದೆ,ಹಾಗೂ ಕಾಮಗಾರಿಯೂ ಮತ್ತಷ್ಟು ನಿಧಾನವಾಗುತ್ತದೆ ಇದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನನುಕೂಲವಾಗಲಿದೆ,

ಚಾಕವೇಲು ಗ್ರಾಮದಿಂದ ಚೇಳೂರು ಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಐದು ತಿಂಗಳ ಹಿಂದೆಯೇ ಶಾಸಕರು ಚಾಲನೆ ನೀಡಿದ್ದಾರೆ. ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ಸಾಧ್ಯವಿಲ್ಲ. ರಸ್ತೆ ಕಾಮಗಾರಿ ಮಾಡಿದರೆ ಸಂಚಾರಕ್ಕೆ ತುಂಬಾ ಅನುಕೂಲವಾಗುತ್ತದೆ ಎಂದು ಚಾಕವೇಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕೋಟ್...................

ಚಾಕವೇಲು ಗ್ರಾಮದಿಂದ ಚೇಳೂರು ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ 3 ಕೋಟಿ ಅನುದಾನವಿದೆ. ಗುತ್ತಿಗೆದಾರರಿಗೆ ಕಾಮಗಾರಿ ಮಾಡಲು ಅನುಮೋದನೆ ಕೊಡಲಾಗಿದೆ. ಆದರೆ ಅವರಿಗೆ ಸಂಬಂಧಪಟ್ಟ ಬ್ಯಾಂಕ್‌ನಿಂದ ಗ್ಯಾರಂಟಿ ನೀಡಬೇಕಾಗಿದೆ. ಇದ ಆದ ತಕ್ಷಣವೇ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಲಿದ್ದಾರೆ.

_ ಪ್ರದೀಪ್, ಎಇಇ, ಪಂಚಾಯತ್ ರಾಜ್ ಇಲಾಖೆ, ಬಾಗೇಪಲ್ಲಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!