ಮಳೆಗೆ ಕೆಸರು ಗದ್ದೆಯಂತಾದ ರಸ್ತೆಗಳು

KannadaprabhaNewsNetwork |  
Published : Oct 19, 2024, 12:15 AM IST
ಸಿಕೆಬಿ-1  ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಗೆ ಸಂಪರ್ಕ ಕಲ್ಪಿಸುವ ಜಡಲ ತಿಮ್ಮನಹಳ್ಳಿ, ಮುದ್ದೇನಹಳ್ಳಿ, ನಂದಿ ಮಾರ್ಗದ  ಸಂಪರ್ಕ ರಸ್ತೆಸಿಕೆಬಿ-2 ಅಂದಾರ್ಲಹಳ್ಳಿಯಿಂದ ಪಟ್ರೇನಹಳ್ಲೀಗೆ ಸಂಪರ್ಕಿಸುವ ರಸ್ | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಬದಿಯಲ್ಲಿರುವ ಜಡಲ ತಿಮ್ಮನಹಳ್ಳಿ ಸಂಪರ್ಕ ರಸ್ತೆ, ನಗರ ಪ್ರದೇಶ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಕಂದವಾರಕ್ಕೆ ಹೋಗುವ ಹೋಗುವ ರಸ್ತೆ, ಮುಸ್ಟೂರು ರಸ್ತೆ,ಅಂದಾರ್ಲಹಳ್ಳಿ ಪಟ್ರೇನಹಳ್ಳಿ ರಸ್ತೆ, ನಗರ ವ್ಯಾಪ್ತಿ ತಗುಪ್ರದೇಶ ಹೀಗೆ ಅನೇಕ ಕಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯಲ್ಲಿ ಸುರಿದ ನಿಂತರ ಮಳೆಯ ಪರಿಣಾಮ ನಗರ ಪ್ರದೇಶವು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಗಳು ಹಾಳಾಗಿದ್ದು, ಗುಂಡಿ ಬಿದ್ದಿರುವ ರಸ್ತೆಯಲ್ಲಿ ಕೆರೆಯಂತೆ ನೀರು ತುಂಬಿಕೊಂಡಿರುವುದು ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸಲು ಅವಾಂತರ ಪಡುವಂತಾಗಿದೆಗಿದೆ.

ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಬದಿಯಲ್ಲಿರುವ ಜಡಲ ತಿಮ್ಮನಹಳ್ಳಿ ಸಂಪರ್ಕ ರಸ್ತೆ, ನಗರ ಪ್ರದೇಶ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದಿಂದ ಕಂದವಾರಕ್ಕೆ ಹೋಗುವ ಹೋಗುವ ರಸ್ತೆ, ಮುಸ್ಟೂರು ರಸ್ತೆ,ಅಂದಾರ್ಲಹಳ್ಳಿ ಪಟ್ರೇನಹಳ್ಳಿ ರಸ್ತೆ, ನಗರ ವ್ಯಾಪ್ತಿ ತಗುಪ್ರದೇಶ ಹೀಗೆ ಅನೇಕ ಕಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಇದೀಗ ಮಳೆಯ ಪರಿಣಾಮ ಗುಂಡಿಗಳಲ್ಲಿ ವ್ಯಾಪಕವಾಗಿ ನೀರು ತುಂಬಿ ಕೆರೆ ಗದ್ದೆಗಳಾಗಿ ಪರಿಣಮಿಸಿದೆ.

ರಸ್ತೆಗಳ ದುರಸ್ತಿಗೆ ಒತ್ತಾಯ

ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ ಬಿಬಿ ರಸ್ತೆ ಬದಿಯಲ್ಲಿರುವ ಜಡಲ ತಿಮ್ಮನಹಳ್ಳಿ ಸಂಪರ್ಕ ರಸ್ತೆಯು ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮ ಸ್ಥಳ ಮುದ್ದೇನಹಳ್ಳಿ, ಸತ್ಯಸಾಯಿ ಗ್ರಾಮದ ಉಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ,ನಂದಿಯ ಐತಿಹಾಸಿಕ ಭೋಗ ನಂದಿಶ್ವರ ದೇವಾಲಯ, ನಂದಿಗಿರಿಧಾಮ ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಪ್ರತಿನಿತ್ಯ ರೋಗಿಗಳು, ದೇಶ-ವಿದೇಶಗಳ ಪ್ರವಾಸಿಗರು ಪ್ರಯಾಣಿಸುತ್ತಾರೆ. ಈ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳ ನಿರ್ಲಕ್ಷ್ಯ

ಇಷ್ಟೆಲ್ಲ ಅದ್ವಾನವಾಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲಾ ಮತ್ತು ಸ್ಥಳೀಯ ಆಡಳಿತ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುಂತೆ ವರ್ತಿಸುತ್ತಿದ್ದಾರೆಂದು ನಾಗರಿಕರು ಆರೋಪಿಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ