ದರೋಡೆ ಪ್ರಕರಣ, ೫ ಆರೋಪಿಗಳ ಬಂಧನ

KannadaprabhaNewsNetwork | Published : Nov 21, 2023 12:45 AM

ಸಾರಾಂಶ

ಪಟ್ಟಣ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ದರೋಡೆ ನಡೆದ ಪ್ರಕರಣ ಭೇದಿಸಿದ ಹಾನಗಲ್ಲ ಪೊಲೀಸರು ೮ ತಾಸುಗಳಲ್ಲಿ ೫ ಜನ ಆರೋಪಿತರನ್ನು ಬಂಧಿಸಿದ್ದಾರೆ.ಇರ್ಷಾದ್‌ಅಹ್ಮದ್ ಆಲದಕಟ್ಟಿ ಎಂಬ ತರಕಾರಿ ವ್ಯಾಪಾರಿ ತನ್ನ ಸ್ನೇಹಿತ ಗೌಸ ಮೋಹದ್ದೀನ ಉಪ್ಪಣಸಿ ಎಂಬವರೊಂದಿಗೆ ನ. ೧೮ ರಂದು ರಾತ್ರಿ ೧೨ ಗಂಟೆಗೆ ಅಕ್ಕಿಆಲೂರಿನಿಂದ ಹಾನಗಲ್ಲಿಗೆ ಬರುವ ಸಂದರ್ಭದಲ್ಲಿ ಗೆಜ್ಜಿಹಳ್ಳಿ ಹಾಗೂ ಹಾನಗಲ್ಲ ನಡುವಿರುವ ಧರ್ಮಾ ನದಿ ಸೇತುವೆ ಬಳಿ ಅಪರಿಚಿತ ತಂಡ ಏಕಾಏಕಿ ಹೊಡೆದು ಹೆದರಿಸಿ ₹೨೪ ಸಾವಿರ ಹಾಗೂ ಎರಡು ಮೊಬೈಲ್‌ಗಳನ್ನು ದರೋಡೆ ಮಾಡಿರುವುದಾಗಿ ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಪಟ್ಟಣ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ದರೋಡೆ ನಡೆದ ಪ್ರಕರಣ ಭೇದಿಸಿದ ಹಾನಗಲ್ಲ ಪೊಲೀಸರು ೮ ತಾಸುಗಳಲ್ಲಿ ೫ ಜನ ಆರೋಪಿತರನ್ನು ಬಂಧಿಸಿದ್ದಾರೆ.

ಇರ್ಷಾದ್‌ಅಹ್ಮದ್ ಆಲದಕಟ್ಟಿ ಎಂಬ ತರಕಾರಿ ವ್ಯಾಪಾರಿ ತನ್ನ ಸ್ನೇಹಿತ ಗೌಸ ಮೋಹದ್ದೀನ ಉಪ್ಪಣಸಿ ಎಂಬವರೊಂದಿಗೆ ನ. ೧೮ ರಂದು ರಾತ್ರಿ ೧೨ ಗಂಟೆಗೆ ಅಕ್ಕಿಆಲೂರಿನಿಂದ ಹಾನಗಲ್ಲಿಗೆ ಬರುವ ಸಂದರ್ಭದಲ್ಲಿ ಗೆಜ್ಜಿಹಳ್ಳಿ ಹಾಗೂ ಹಾನಗಲ್ಲ ನಡುವಿರುವ ಧರ್ಮಾ ನದಿ ಸೇತುವೆ ಬಳಿ ಅಪರಿಚಿತ ತಂಡ ಏಕಾಏಕಿ ಹೊಡೆದು ಹೆದರಿಸಿ ₹೨೪ ಸಾವಿರ ಹಾಗೂ ಎರಡು ಮೊಬೈಲ್‌ಗಳನ್ನು ದರೋಡೆ ಮಾಡಿರುವುದಾಗಿ ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣ ಭೇದಿಸಲು ಮುಂದಾದ ಹಾನಗಲ್ಲ ಸಿಪಿಐ ನೇತೃತ್ವದ ತಂಡ ೮ ಗಂಟೆಗಳಲ್ಲಿ ಆರೋಪಿತ ೫ ಜನರನ್ನು ದಸ್ತಗಿರಿ ಮಾಡಿದೆ. ಈ ಐವರಲ್ಲಿ ಪ್ರವೀಣ ಸಾತಪತಿ, ರಾಕೇಶ ಬಾರ್ಕಿ, ಜಗದೀಶ ಬಂಡಿವಾಡ ಇದಕ್ಕೂ ಮೊದಲಿನ ಪ್ರಕರಣದಲ್ಲಿ ಭಾಗಿಯಾದ ಆರೋಪಿತರು. ಇದರಲ್ಲಿ ಇಬ್ಬರು ಬಾಲಕರಿದ್ದು ಇವರ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಆರೋಪಿತರಿಂದ ₹೨ ಸಾವಿರ, ಕೃತ್ಯಕ್ಕೆ ಉಪಯೋಗಿಸಿದ ಒಂದು ಮೊಬೈಲ್, 3 ಮೋಟಾರ್ ಸೈಕಲ್, ೨ ಮೊಬೈಲ್‌ ಜಪ್ತಿ ಮಾಡಲಾಗಿದೆ. ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಸಿಪಿಐ ಎಸ್.ಆರ್. ಶ್ರೀಧರ, ಪಿಎಸ್‌ಐ ಯಲ್ಲಪ್ಪ ಹಿರಗಣ್ಣನವರ, ಸಂಪತ್ ಆನಿಕಿವಿ, ಕೆ.ಎನ್. ಹಳ್ಳಿಯವರ, ಮಲ್ಲಿಕಾರ್ಜುನ ತಹಶೀಲ್ದಾರ ಹಾಗೂ ಸಿಬ್ಬಂದಿ ಆರ್.ಬಿ. ಮೇದಾರ, ಎನ್.ಬಿ. ಅಲ್ಲಪುರ, ಸುರೇಶ ಕೂಸನೂರು, ನಾಗರಾಜ ಬೆಟಗೇರಿ, ಸುನೀಲ ಕಿಳ್ಳೀಕ್ಯಾತರ, ಐ.ಪಿ. ಪೊಲೀಸಪಾಟೀಲ, ಎಸ್.ಎಫ್. ದೊಡ್ಡಮನಿ, ರಮೇಶ ಬಾರ್ಕಿ, ಸುಧೀರ ಬೇಂದ್ರೆ, ಕಿರಣ ಸಣ್ಣಗೌಡರ, ಆನಂದ ಪಾಟೀಲ, ಬಾಹುಬಲಿ ಉಪಾಧ್ಯಾಯ, ಈರಣ್ಣ ಲಂಗೋಟಿ, ಶಿವಾನಂದ ತವರಿ, ಸಂತೋಷ ಮ್ಯಾಗೇರಿ, ಶಿಲ್ಪಾ ಕಾಮನಹಳ್ಳಿ, ವಸುಮತಿ, ಸಾವಿತ್ರಿ ಜನಗೇರಿ, ಭಾರತಿ ಬೆಟಗೇರಿ, ಗುತ್ತೆಪ್ಪ ಬಾಸೂರ, ಚನ್ನವೀರಸ್ವಾಮಿ ಹಿರೇಮಠ, ಆನಂದ ಪಾಟೀಲ, ಬಂಗಾರೆಪ್ಪ ಹುರಕಡ್ಲಿ, ಮಾರುತಿ ಹಾಲಭಾವಿ, ಸತೀಶ ಮಾರಕಟ್ಟಿ ಕಾರ್ಯಾಚರಣೆಯಲ್ಲಿದ್ದರು.

Share this article