ತನ್ನದೇ ಆದ ಛಾಪು ಮೂಡಿಸಿದ ರೋಹನ್‌ ಕಾರ್ಪೋರೇಶನ್‌: ಡಾ. ಎಂಎನ್‌ಆರ್‌

KannadaprabhaNewsNetwork | Published : Apr 13, 2025 2:02 AM

ಸಾರಾಂಶ

ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಿಯಲ್‌ಎಸ್ಟೇಟ್‌ ಸಂಸ್ಥೆ ರೋಹನ್‌ ಕಾರ್ಪೊರೇಶನ್‌ನಿಂದ ನಗರದ ಶಿವಭಾಗ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ವಸತಿ ಸಮುಚ್ಚಯ ರೋಹನ್‌ ಗಾರ್ಡನ್‌ ಇದರ ಭೂಮಿಪೂಜೆ ಶನಿವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಿಯಲ್‌ಎಸ್ಟೇಟ್‌ ಸಂಸ್ಥೆ ರೋಹನ್‌ ಕಾರ್ಪೊರೇಶನ್‌ನಿಂದ ನಗರದ ಶಿವಭಾಗ್‌ನಲ್ಲಿ ನಿರ್ಮಾಣವಾಗಲಿರುವ ಹೊಸ ವಸತಿ ಸಮುಚ್ಚಯ ರೋಹನ್‌ ಗಾರ್ಡನ್‌ ಇದರ ಭೂಮಿಪೂಜೆ ಶನಿವಾರ ನೆರವೇರಿತು.ಸೈಂಟ್‌ ಸೆಬಾಸ್ಟಿಯನ್‌ ಚಚ್‌ರ್ನ ಧರ್ಮಗುರು ಡಾ.ವಾಲ್ಟರ್‌ ಡಿಸೋಜಾ ಅವರು ಪ್ರಾರ್ಥನೆ ನೆರವೇರಿಸಿ ಆಶೀರ್ವಚನ ನೀಡಿದರು.ರೋಹನ್‌ ಮಿರಾಜ್‌ನ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಮಾತನಾಡಿ, ರೋಹನ್‌ ಕಾರ್ಪೊರೇಶನ್‌ ಸಂಸ್ಥೆ ಕೇವಲ 15 ದಿವಸಗಳಲ್ಲಿ ಮೂರು ಹೊಸ ಯೋಜನೆಗಳಿಗೆ ಭೂಮಿ ಪೂಜೆ ನಡೆಸಿದೆ.ಜನತೆಯ ಅಪೇಕ್ಷೆಗೆ ಅನುಗುಣವಾಗಿ ವಸತಿ ಸಮುಚ್ಚಯಗಳನ್ನು ನಿರ್ಮಿಸುವ ಮೂಲಕ ಡಾ.ರೋಹನ್‌ ಮೊಂತೆರೊ ಅವರು ರಿಯಲ್‌ ಎಸ್ಟೇಟ್‌ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ ಎಂದರು.

ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಕಿಯೊನಿಕ್ಸ್‌ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಮಾಜಿ ಕಾರ್ಪೋರೇಟರ್‌ ನವೀನ್‌ ಡಿಸೋಜಾ, ಎಸ್‌ಸಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ದೇವಿಪ್ರಸಾದ್‌ ಶೆಟ್ಟಿ ಬೆಳಪು, ಶಶಿಕುಮಾರ್‌ ರೈ ಬಾಲ್ಯೊಟ್ಟು, ದಾಯ್ಜಿವಲ್ಡ್‌ ನಿರ್ದೇಶಕ ವಾಲ್ಡರ್‌ ನಂದಳಿಕೆ, ಯುವ ಉದ್ಯಮಿ ಮೇಘರಾಜ್‌ ಜೈನ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರೋಹನ್‌ ಕಾರ್ಪೋರೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ರೋಹನ್‌ ಮೊಂತೆರೊ ಸ್ವಾಗತಿಸಿದರು. ಸಾಹಿಲ್‌ ಜಹೀರ್‌ ಕಾರ್ಯಕ್ರಮ ನಿರೂಪಿಸಿದರು.

ಬಾಕ್ಸ್-----

ಆಧುನಿಕ ವಸತಿ ಸಮುಚ್ಚಯ

ರೋಹನ್‌ ಗಾರ್ಡನ್‌ ಐಷಾರಾಮಿ, ಸುರಕ್ಷತೆ ಮತ್ತು ಪರಿಸರ ಸ್ನೇಹಿ ವಾಸಯೋಗ್ಯ ವ್ಯವಸ್ಥೆಯನ್ನು ಒದಗಿಸುವ ಆಧುನಿಕ ವಸತಿ ಸಮುಚ್ಚಯವಾಗಿದೆ. ಐದು ಅಂತಸ್ತುಗಳ ಈ ಕಟ್ಟಡದಲ್ಲಿ 28 ಸುಂದರವಾಗಿ ವಿನ್ಯಾಸಗೊಳಿಸಲಾದ ಅಪಾರ್ಟ್‌ಮೆಂಟ್‌ಗಳಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಜಿಮ್ನೇಶಿಯಂ, 24/7 ಸಿಸಿಟಿವಿ ಮತ್ತು ಸ್ಮಾರ್ಚ್‌ ಸೆನ್ಸಾರ್‌ ದೀಪಗಳಂತಹ ಪ್ರೀಮಿಯಂ ಸೌಲಭ್ಯಗಳಿವೆ. ರೋಹನ್‌ ಗಾರ್ಡನ್‌ ನಗರದ ಪ್ರಮುಖ ಸ್ಥಳಗಳಿಗೆ ಸುಲಭ ಸಂಪರ್ಕವನ್ನು ಹೊಂದಿರುವುದಲ್ಲದೆ, ಶಾಂತ ಮತ್ತು ಹಸಿರು ಪರಿಸರದ ಅನುಭವವನ್ನು ನೀಡಲಿದೆ.

ಈ ಯೋಜನೆಯು 1,105 ರಿಂದ 1,550 ಚದರ ಅಡಿಗಳ 2 ಮತ್ತು 3 ಬಿ.ಎಚ್‌.ಕೆ. ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಅಪಾರ್ಟ್‌ಮೆಂಟ್‌ ಪ್ರೀಮಿಯಂ ಸ್ಯಾನಿಟರಿ ವೇರ್‌ ಮತ್ತು ಯುಪಿವಿಸಿ/ಅಲ್ಯೂಮಿನಿಯಂ ಕಿಟಕಿಗಳೊಂದಿಗೆ ಉತ್ತಮ ಗುಣಮಟ್ಟದ ನಿರ್ಮಾಣವನ್ನು ಹೊಂದಿದೆ. ವಿಶಾಲವಾದ ಒಳಾಂಗಣ, ಸೊಗಸಾದ ಬಾಲ್ಕನಿಗಳು, ಮತ್ತು ಸಮಕಾಲೀನ ವಾಸ್ತುಶಿಲ್ಪವನ್ನು ಹೊಂದಿದೆ.ಹೆಚ್ಚಿನ ಮಾಹಿತಿಗಾಗಿ, ರೋಹನ್‌ ಕಾರ್ಪೊರೇಶನ್‌ ದೂರವಾಣಿ ಸಂಖ್ಯೆ: 98454 90100, ಇಮೇಲ್‌-: info@rohancorporation.in, ಜಾಲತಾಣ: www.rohancorporation.in ಅಥವಾ ರೋಹನ್‌ ಕಾರ್ಪೋರೇಶನ್‌ ರೋಹನ್‌ ಸಿಟಿ, ಬಿಜೈ, ಮಂಗಳೂರು 575004 ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಾಸ್ತಾವಿಕದಲ್ಲಿ ತಿಳಿಸಿದರು.

------------------

Share this article