ರೋಹನ್‌ ಸ್ಕ್ವೇರ್‌’ ಬಸ್‌ ತಂಗುದಾಣ ಉದ್ಘಾಟನೆ

KannadaprabhaNewsNetwork |  
Published : Sep 01, 2026, 03:15 AM IST
ರೋಹನ್‌ ಸ್ಕ್ವೇರ್‌ ಬಸ್‌ ತಂಗುದಾಣವನ್ನು ಶಾಸಕ ವೇದವ್ಯಾಸ ಕಾಮತ್‌ ಉದ್ಘಾಟಿಸಿದರು | Kannada Prabha

ಸಾರಾಂಶ

ಮಂಗಳೂರಿನ ಕಪಿತಾನಿಯೊದಲ್ಲಿ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ರೋಹನ್ ಸ್ಕ್ವೇರ್ ಬಸ್ ತಂಗುದಾಣ’ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಮಂಗಳೂರು: ಮಂಗಳೂರಿನ ಕಪಿತಾನಿಯೊದಲ್ಲಿ ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಲಾದ ‘ರೋಹನ್ ಸ್ಕ್ವೇರ್ ಬಸ್ ತಂಗುದಾಣ’ದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಶಾಸಕ ಡಿ.ವೇದವ್ಯಾಸ ಕಾಮತ್ ನೂತನ ಬಸ್ ತಂಗುದಾಣ ಉದ್ಘಾಟಿಸಿ ಮಾತನಾಡಿ, ಜನರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವ ಕೆಲಸವೇ ನಿಜವಾದ ಸೇವೆ. ಆ ನಿಟ್ಟಿನಲ್ಲಿ, ಸಾರ್ವಜನಿಕರ ದೈನಂದಿನ ಪ್ರಯಾಣಕ್ಕೆ ಅನುಕೂಲವಾಗುವಂತೆ ರೋಹನ್ ಕಾರ್ಪೊರೇಶನ್ ಕೈಗೊಂಡಿರುವ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ರೋಹನ್ ಕಾರ್ಪೊರೇಶನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ.ರೋಹನ್ ಮೊಂತೆರೊ ಮಾತನಾಡಿ, ಮಂಗಳೂರಿನೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ಸಂಸ್ಥೆಯಾಗಿ, ಸಾರ್ವಜನಿಕರ ದೈನಂದಿನ ಬದುಕಿಗೆ ಅನುಕೂಲವಾಗುವಂತಹ ಕಾರ್ಯಗಳ ಮೂಲಕ ನಗರಕ್ಕೆ ಕೊಡುಗೆ ನೀಡುವುದು ನಮ್ಮ ಬದ್ಧತೆಯ ಭಾಗವಾಗಿದೆ. ಈ ಬಸ್ ತಂಗುದಾಣ ಆ ನಿಟ್ಟಿನಲ್ಲಿ ನಮ್ಮ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ ಎಂದರು.

ಮಾಜಿ ಕಾರ್ಪೊರೇಟರ್ ಸಂದೀಪ್ ಗರೋಡಿ ಮಾತನಾಡಿ, ಮಂಗಳೂರಿನ ಬೆಳವಣಿಗೆಯಲ್ಲಿ ರೋಹನ್ ಕಾರ್ಪೊರೇಶನ್‌ನ ಕೊಡುಗೆ ಗಮನಾರ್ಹವಾಗಿದೆ. ತಮ್ಮ ಯೋಜನೆಗಳ ಜೊತೆಗೆ ನಗರದ ಜನಜೀವನಕ್ಕೂ ಉಪಯೋಗವಾಗುವ ಕೆಲಸಗಳಿಗೆ ಆದ್ಯತೆ ನೀಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಈ ರೀತಿಯ ಜನಪರ ಕಾರ್ಯಗಳು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ನಡೆಯಲಿ ಎಂದರು.

ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೊ, ರೋಹನ್ ಕಾರ್ಪೊರೇಶನ್ ಜನರಲ್ ಮ್ಯಾನೇಜರ್ ಸುಮನಾ, ಜೇಮ್ಸ್

ಮತ್ತಿತರರು ಇದ್ದರು.ಸೌಜನ್ಯ ಹೆಗ್ಡೆ ಅವರು ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐತಿಹಾಸಿಕ ಮೂಲನಂದೀಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ
ಅಜೆಕಾರು: ಸಾರಥಿ ಆಂಬುಲೆನ್ಸ್ ಲೋಕಾರ್ಪಣೆ