- ಮೂರು ಮನೆಹಳ್ಳಿಯಲ್ಲಿ ದೊರೆತ ಗಂಗರ ಕಾಲದ ಗಂಗಕಲ್ಲು ಶಾಸನಕ್ಕೆ ಪೂಜೆ - - - ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ನಗರದ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಮನೆಹಳ್ಳಿಯಲ್ಲಿ ದೊರೆತ ಗಂಗರ ಕಾಲದ ಗಂಗಕಲ್ಲು ಶಾಸನವನ್ನು ವೀಕ್ಷಿಸಿ, ಪೂಜೆ ಸಲ್ಲಿಸಿ ಅವರು ಮಾತನಾಡಿದರು. ನಮ್ಮ ದೇಶದ, ನಮ್ಮ ನಾಡಿನ ಇತಿಹಾಸವನ್ನು ಕೇವಲ ಪಾಶ್ಚಾತ್ಯ ವಿದ್ವಾಂಸರು ರಚಿಸಿದ ಕೃತಿಗಳಿಂದ ನಾವು ಓದುತ್ತೇವೆ. ಅದು ಕೇವಲ ಕಾಲ್ಪನಿಕ ಸತ್ಯ ಎಂಬುದು ನಮ್ಮ ಶಾಸನಗಳ ಅಧ್ಯಯನದಿಂದ ಮಾತ್ರ ತಿಳಿಯಲು ಸಾಧ್ಯ. ಇತಿಹಾಸದ ಮೂಲಕ ನಮ್ಮ ಪೂರ್ವಜರ ಆಡಳಿತ, ಸಂಸ್ಕೃತಿ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಜೀವನಶೈಲಿಯನ್ನು ತಿಳಿಯಲು ಸಹಕಾರಿಯಾಗುತ್ತವೆ. ಇಂತಹ ಇತಿಹಾಸ ಹೊಂದಿರುವ ಶಾಸನಗಳನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ತೇಗೂರು ಗ್ರಾಮ ಪಂಚಾಯಿತಿಯ ಮೂರು ಮನೆಹಳ್ಳಿ ಗ್ರಾಮದಲ್ಲಿ ದೊರೆತಿರುವ ಗಂಗರ ಕಾಲದ ಗಂಗಕಲ್ಲು ಶಾಸನ ನಮ್ಮ ಜಿಲ್ಲೆಯಲ್ಲಿ ಸಿಕ್ಕಿರುವುದು ನಮ್ಮ ಪುಣ್ಯ. ಇಂತಹ ಯಾವುದೇ ಇತಿಹಾಸ ತಿಳಿಸುವ ಶಾಸನಗಳು, ಶಿಲೆಗಳು, ವೀರಗಲ್ಲುಗಳು ದೊರೆತಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ತಿಳಿಸಿದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಪ್ರತಿಯೊಂದು ಶಾಸನಗಳ ಅಧ್ಯಯನ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ಪ್ರಸ್ತುತ ದೊರಕಿರುವ ಶಾಸನದ ಮೂಲಕ ಗಂಗರ ಆಳ್ವಿಕೆಯ ನಿಖರ ಮಾಹಿತಿ ತಿಳಿಯಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭ ಈ ಶಾಸನವನ್ನು ಗುರುತಿಸಿ ಇಲಾಖೆಗೆ ಒಪ್ಪಿಸಿದ ಮೂರು ಮನೆಹಳ್ಳಿ ಗ್ರಾಮದ ನಿವಾಸಿ ದಾಕ್ಷಾಯಣಮ್ಮ ಹಾಗೂ ಶಾಸನದ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿ ಇದರ ಸಂರಕ್ಷಣೆಗೆ ಸಹಕರಿಸಿದ ಜಾನ್ ಸಚಿನ್ ಅವರನ್ನು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಗೌರವಿಸಿ ಸನ್ಮಾನಿಸಿದರು.
- - - -7ಕೆಸಿಕೆಎಂ2: