ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರ ಪಾತ್ರ ಹಿರಿದು: ಶಿವಾನಂದ ತಗಡೂರು

KannadaprabhaNewsNetwork |  
Published : Jul 11, 2024, 01:37 AM IST
10 ಬೀರೂರು 1ಬೀರೂರಿನಲ್ಲಿ ಬುಧವಾರ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಶಿವಾನಂದತಗಡೂರು ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀರೂರು ಎನ್. ಗಿರೀಶ್, ಬಿ. ಗುರುಪ್ರಸಾದ್, ಬಿ.ಜೆ,ಜಗದೀಶ್, ಎಚ್.ಆರ್.ದೇವರಾಜ್ , ಹುಲ್ಲೇಹಳ್ಳಿ ಲಕ್ಷö್ಮಣ್ ಇದ್ದರು. | Kannada Prabha

ಸಾರಾಂಶ

ಬೀರೂರು, ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಮತ್ತು ಜನ ಸಾಮಾನ್ಯರ ದನಿಯಾಗಿ ಪತ್ರಕರ್ತರು ಕೆಲಸ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

- ಬೀರೂರಿನ ಗುರುಭವನದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮ್ಮಿಲನ ಮತ್ತು ತಾಲೂಕು ಪತ್ರಿಕಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ಬೀರೂರು

ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು ಮತ್ತು ಜನ ಸಾಮಾನ್ಯರ ದನಿಯಾಗಿ ಪತ್ರಕರ್ತರು ಕೆಲಸ ನಿರ್ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.ಬೀರೂರು ಪಟ್ಟಣದ ಗುರುಭವನದಲ್ಲಿ ಬುಧವಾರ ಕಡೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸಮಾಜದ ಅಂಕು-ಡೊಂಕುಗಳ ತಿದ್ದುವ, ಜನ ಸಾಮಾನ್ಯರ ಸಂಕಟಗಳಿಗೆ ಸ್ಪಂದಿಸುವ ಮಹತ್ತರ ಕಾರ್ಯ ಪತ್ರಕರ್ತರದ್ದು, ಪರಿಹಾರ ದೊರಕುವ ವಿಶ್ವಾಸ ದಿಂದ ಸಮಾಜ ನಮ್ಮ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ನಾವು ನೆಪಮಾತ್ರಕ್ಕೆ ಪತ್ರಕರ್ತರಾಗದೆ ಮಾನವೀಯ ಮೌಲ್ಯ ಗಳನ್ನು ಉಳಿಸುವ, ಜನರಿಗೆ ಒಳಿತು ಮಾಡುವ ದೀಕ್ಷೆ ತೊಟ್ಟು ದುಡಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಡಿ.ವಿ.ಗುಂಡಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಶಾಸಕ ಕೆ.ಎಸ್. ಆನಂದ್ ಮಾತನಾಡಿ, ದೃಶ್ಯ ಮಾದ್ಯಮ ತಮ್ಮ ಟಿಆರ್‌ಪಿ ಹಿಂದೆ ಬಿದ್ದು ಒಂದೇ ವಿಷಯವನ್ನು ಬಿತ್ತರಿಸುತ್ತಾ ಪತ್ರಿಕಾ ಮೌಲ್ಯವನ್ನು ಗಾಳಿಗೆ ತೂರಿವೆ. ಇದರಿಂದ ಸಮಾಜಕ್ಕೆ ಏನು ಲಾಭವಿಲ್ಲ. ಇದ್ದುದರಲ್ಲಿ ಮುದ್ರಣ ಮಾದ್ಯಮ ನೈತಿಕತೆ ಉಳಿಸಿಕೊಂಡಿದೆ ಎಂದು ಶ್ಲಾಘಿಸಿದರು. ಪತ್ರಿಕೆಗಳು ನೈತಿಕತೆ ಮತ್ತು ಪತ್ರಿಕಾ ಧರ್ಮ ಮರೆಯಬಾರದು. ಆಡಳಿತದ ಚುಕ್ಕಾಣಿ ಹಿಡಿದವರನ್ನು ಎಚ್ಚರಿಸುವ ಮಾಧ್ಯಮ ಹಲವಾರು ಜನಾಂದೋಲನಗಳಿಗೆ ಕಾರಣವಾಗಿವೆ. ಪ್ರಚಲಿತ ವಿದ್ಯಮಾನಗಳ ವಿಶ್ವಾಸಾರ್ಹ ಮಾಹಿತಿ ಒದಗಿಸುವ ಪತ್ರಿಕೆ ತಮ್ಮ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿ ಜನರ ನಂಬಿಕೆಗೆ ಪಾತ್ರವಾಗಿವೆ ಎಂದರು.ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಮತ್ತು ತಾಲೂಕಿನಲ್ಲಿ ಪ್ರಗತಿಯಲ್ಲಿದ್ದ ಕೆರೆ ತುಂಬಿಸುವ ಕಾಮಗಾರಿಗೆ ವೇಗ ನೀಡುವ ಕುರಿತು ಪ್ರಯತ್ನಗಳು ನಡೆದಿವೆ. ಈಗಾಗಲೇ 2 ಹಂತದ ಟೆಂಡರ್ ಮತ್ತು ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು 3 ಮತ್ತು 4 ನೇ ಹಂತಕ್ಕೆ ಡಿಪಿಆರ್ ತಯಾರಿಸುವ, ಯೋಜನೆಯನ್ನು ನಬಾಡ್‌ ಸೇರಿಸಿ ಯಾವುದೇ ಅಡ್ಡಿ ಉಂಟಾಗದಂತೆ ಚಾಲನೆ ನೀಡಲೂ ಯತ್ನಿಸಲಾಗುತ್ತಿದೆ. ಪತ್ರಿಕೆಗಳು ನಮ್ಮ ನಡೆ ತಿದ್ದುವ, ಎಚ್ಚರಿಸುವ ಕೆಲಸ ಮಾಡುತ್ತಿದ್ದು, ಪತ್ರಕರ್ತರ ಭವನಕ್ಕೆ ಕಾನೂನು ಬದ್ಧವಾಗಿ ನಿವೇಶನ ಒದಗಿಸಲು ಕ್ರಮ ವಹಿಸುವುದಾಗಿ ತಿಳಿಸಿದ ಅವರು ಪತ್ರಕರ್ತರು ಒಗ್ಗಟ್ಟು ಮರೆಯಬಾರದು ಎಂದು ಎಚ್ಚರಿಸಿದರು.ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಬಿ. ಗುರುಪ್ರಸಾದ್ ಮಾತನಾಡಿ, ಒಳ್ಳೆಯದನ್ನು ಗುರುತಿಸಿ ಅದನ್ನು ಬೆಳಕಿಗೆ ತರುವ ಹೊಣೆಯೂ ಪತ್ರಕರ್ತರ ಮೇಲಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ವರದಿಗಾರಿಕೆಗೆ ಒತ್ತು ನೀಡಿರಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀರೂರು ಎನ್. ಗಿರೀಶ್ ರಾಜ್ಯ ಸಂಘ ಗ್ರಾಮೀಣ ಪತ್ರಕರ್ತರಿಗೂ ಮನ್ನಣೆ ನೀಡಿ ಜಿಲ್ಲಾದ್ಯಂತ ವರದಿಗಾಗಿ ಸಂಚರಿಸಲು ರಾಜ್ಯಾಧ್ಯಕ್ಷರ ಶ್ರಮದ ಫಲವಾಗಿ ಸದ್ಯದಲ್ಲಿಯೇ ಉಚಿತ ಬಸ್ ಪಾಸ್ ಸೌಲಭ್ಯ ಲಬಿಸಲಿದೆ. ತಾಲೂಕು ಪತ್ರಕರ್ತರ ಸಂಘ ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಹೆಸರುಗಳಿಸಿದೆ.ಇದಕ್ಕೆ ಸಂಘದ ಸರ್ವ ಸದಸ್ಯರ ಸಹಕಾರ ಮುಖ್ಯ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞನಾಗಿದ್ದೇನೆ ಎಂದರು.ವಿವಿಧ ರಂಗಗಳಲ್ಲಿ ಉತ್ತಮ ಸೇವೆಗಾಗಿ ವೈ.ಎಂ. ಲಕ್ಷ್ಮಣ್, ಬಿ.ಎಂ. ನಾಗರಾಜ್, ಶಂಕರ್, ಶ್ರೀನಿವಾಸ್, ಮಂಜುನಾಥ್, ಸಿ.ಕೆ. ಮೂರ್ತಿ, ಆರ್.ಟಿ.ಅಶೋಕ ಇವರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದರಾಜುನಾಯ್ಕ, ಬಿ.ಜೆ. ಜಗದೀಶ್, ಕೆ.ಬಿ. ಸೋಮೇಶ್, ಆರ್.ಟಿ. ಅಶೋಕ್ ಮಾತನಾಡಿದರು.ಬೀರೂರು ಪುರಸಭೆ ಮುಖ್ಯಾಧಿಕಾರಿ ಜಿ. ಪ್ರಕಾಶ್, ವೈದ್ಯಾಧಿಕಾರಿ ಕೆಂಚೇಗೌಡ, ಬೀರೂರು ಪಿಎಸ್‌ಐ ಜಿ.ಆರ್. ಸಜಿತ್‌ಕುಮಾರ್‌, ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲ ಪ್ರವೀಣ್, ಶಿಕ್ಷಕರ ಸಂಘದ ಯಮುನಾ, ಜೆಸಿಐ ಅಧ್ಯಕ್ಷ ಅಯ್ಯೂಬ್ ಅಹಮದ್, ರಾಜ್ಯ ಸಮಿತಿ ಸದಸ್ಯ ಸುರೇಶ್ಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಅಶೋಕ್ , ತಾಲೂಕು ಪತ್ರಕರ್ತರ ಸಂಘದ ಕೆ.ಜಿ.ಲೋಕೇಶ್ವರ್, ಎಚ್.ಆರ್. ದೇವರಾಜ್, ಹಿರೇನಲ್ಲೂರು ಶಿವು, ಹುಲ್ಲೇಹಳ್ಳಿ ಲಕ್ಷ್ಮಣ್, ಬಿ.ಟಿ. ಚಂದ್ರಶೇಖರ್, ಟಿ.ಆರ್.ಭೈರೇಶ್ , ಎಸ್.ಸುಬ್ರಮಣ್ಯ , ಕೃಷ್ಣರಾಮಪ್ಪ ಇದ್ದರು. 10 ಬೀರೂರು 1ಬೀರೂರಿನಲ್ಲಿ ಬುಧವಾರ ನಡೆದ ಪತ್ರಕರ್ತರ ಸಮ್ಮಿಲನ ಮತ್ತು ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಉದ್ಘಾಟಿಸಿದರು. ಶಾಸಕ ಕೆ.ಎಸ್.ಆನಂದ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬೀರೂರು ಎನ್. ಗಿರೀಶ್, ಬಿ. ಗುರುಪ್ರಸಾದ್, ಬಿ.ಜೆ,ಜಗದೀಶ್, ಎಚ್.ಆರ್.ದೇವರಾಜ್ , ಹುಲ್ಲೇಹಳ್ಳಿ ಲಕ್ಷ್ಮಣ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ