ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪಟ್ಟಣದ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ವಿದ್ಯಾರ್ಥಿಗಳಾದ ಗಣೇಶ ಮಾನುಟಗಿ ಮತ್ತು ವಿಷ್ಣು ಕುಮಾರ್ ಹೊಸಮನಿ ಭಾರತೀಯ ಸೈನ್ಯದ ಅಗ್ನಿವೀರ ಸೈನಿಕರಾಗಿ ತರಬೇತಿ ಮುಗಿಸಿ ಆಗಮಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದು. ನಮ್ಮ ಮಹಾವಿದ್ಯಾಲಯ ಕಳೆದ ಐವತ್ತು ವರ್ಷಗಳಿಂದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಎನ್‌ಸಿಸಿ ಮೂಲಕ ಕೊಡುಗೆ ನೀಡುತ್ತ ಬಂದಿದೆ. ಇದರ ಸದುಪಯೋಗ ಪಡೆದು ಛಲದಿಂದ ಮನೋಬಲ ಹೆಚ್ಚಿಸಿಕೊಂಡು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚಿಸಬೇಕು ಎಂದರು.
ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಾದ ಗಣೇಶ ಮಾನುಟಗಿ ಮತ್ತು ವಿಷ್ಣುಕುಮಾರ ಹೊಸಮನಿ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ.ಎನ್.ವೈ.ಬಡಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಕ್ಯಾಪ್ಟನ್ ಅನೀಲ ಉಣಚಗಿ ಮಾತನಾಡಿದರು. ಅತಿಥಿಗಳಾಗಿ ಸಿದ್ದರಾಮಯ್ಯ ಪುರಾಣಿಕಮಠ, ಡಾ.ಎಂ.ಎಸ್.ಪಾಟೀಲ್, ಡಾ.ಸುರೇಖಾ ಯಂಡಿಗೇರಿ, ಡಾ.ಸಣ್ಣವೀರಣ್ಣ ದೊಡ್ಡಮನಿ, ಡಾ.ಐ.ಜೆ.ಬೆಳ್ಳೆನ್ನವರ, ಡಾ.ಗಿರೀಶ್ ಕುಮಾರ್, ಡಾ.ಚಿದಾನಂದ ನಂದಾರ ಉಪಸ್ಥಿತರಿದ್ದರು. ಕಮಲಾಕ್ಷಿ ಅಳಗುಂಡಿ ಪ್ರಾರ್ಥಿಸಿದರು. ಅಂಜಲಿ ಮುಂಡಾಸ ನಿರೂಪಿಸಿ, ವಂದಿಸಿದರು.