ರೋಣ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆ

KannadaprabhaNewsNetwork |  
Published : Oct 15, 2026, 02:15 AM IST
14 ರೋಣ 1. ಲೋಕಾಯುಕ್ತ ಬಲೆಗೆ ಬಿದ್ದಿರುವ ರೋಣ  ಹೆಸ್ಕಾಂ ಶಾಖಾಧಿಕಾರಿ‌ ಮಾಬುಸಾಬ ಆಡಿನ .14 ರೋಣ 1ಎ. ಲೋಕಾಯುಕ್ತ ಬಲೆಗೆ ಬಿದ್ದಿರುವ ರೋಣ  ಹೆಸ್ಕಾಂ ಗುತ್ತಿಗೆದಾರ ಮಹಾದೇವ ಸಜ್ಜನರ. | Kannada Prabha

ಸಾರಾಂಶ

ರೋಣ ಹೆಸ್ಕಾಂ ಶಾಖಾಧಿಕಾರಿ ಮಾಬುಸಾಬ ಆಡಿನ ಮತ್ತು ಗುತ್ತಿಗೆದಾರ ಮಹಾದೇವ ಸಜ್ಜನರ ಅವರು ಕೊತಬಾಳ ಗ್ರಾಮದ ರೈತನಿಂದ ದನದ ಕೊಟ್ಟಿಗೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ₹10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ರೋಣ

ರೋಣ ಹೆಸ್ಕಾಂ ಶಾಖಾಧಿಕಾರಿ ಮಾಬುಸಾಬ ಆಡಿನ ಮತ್ತು ಗುತ್ತಿಗೆದಾರ ಮಹಾದೇವ ಸಜ್ಜನರ ಅವರು ಕೊತಬಾಳ ಗ್ರಾಮದ ರೈತನಿಂದ ದನದ ಕೊಟ್ಟಿಗೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ₹10 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ತಾಲೂಕಿನ ಕೊತಬಾಳ ಗ್ರಾಮದ ರೈತ ಮೇಘಯ್ಯಸ್ವಾಮಿ ಹಿರೇಮಠ ಅವರು ತಮ್ಮ ಹೊಲದಲ್ಲಿನ ದನದ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರೋಣ ಹೆಸ್ಕಾಂ ಶಾಖಾಧಿಕಾರಿ ಹಾಗೂ ಗುತ್ತಿಗೆದಾರ ಅವರು ₹20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ₹15 ಸಾವಿರ ನೀಡುವಂತೆ ಹೇಳಿದ್ದಾರೆ. ಅ.1 ರಂದು ಮೇಘಯ್ಯ ಸ್ವಾಮಿ ₹5 ಸಾವಿರ ಫೋನ್‌ ಪೇ ಮೂಲಕ ನೀಡಿದ್ದು, ಉಳಿದ ₹10 ಸಾವಿರ ನೀಡುವಂತೆ ಒತ್ತಡ ಹೇರಿದ್ದಾರೆ. ಮೇಘಯ್ಯಸ್ವಾಮಿ ಈ ವಿಷಯವನ್ನು ಅ.13 ರಂದು ಗದಗ ಲೋಕಾಯುಕ್ತರ ಗಮನಕ್ಕೆ ತಂದು ದೂರು ದಾಖಲಿಸಿದ್ದಾರೆ.

ಈ ಹಿನ್ನೆಲೆ ತಂಡ ರಚಿಸಿಕೊಂಡು ದಾಳಿ ನೆಡೆಸಿದ ಲೋಕಾಯುಕ್ತ ಅಧಿಕಾರಿಗಳು ಹೆಸ್ಕಾಂ ಶಾಖಾಧಿಕಾರಿ ಮಾಬುಸಾಬ ಆಡಿನ, ಗುತ್ತಿಗೆದಾರ ಮಹಾದೇವ ಸಜ್ಜನರ ಅವರು ರೈತ ಮೇಘಯ್ಯಸ್ವಾಮಿಯಿಂದ ₹10 ಸಾವಿರ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಲೊಕೇಶ ನೇತೃತ್ವದಲ್ಲಿ ನಡೆದ ದಾಳಿಯ ತಂಡದಲ್ಲಿ ಪಿ.ಎಸ್.ಐ ಎಸ್.ಎಸ್. ತೇಲಿ, ಸಿಬ್ಬಂದಿ ನೀಲಕಂಠ ಅಂಬಿಗೇರ, ತನುಜಾ ಜವಳಿ, ಹಸನ ದೇಪುರವಾಲ, ಪ್ರಸಾದ ಪಿರಮಳ, ಇರ್ಪಾನ್ ಸೈಪನ್ನವರ, ಬಾರಡ್ಡಿ, ನೈನಾಪೂರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ
ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ