ಆರೋಗ್ಯ, ಶಿಕ್ಷಣ, ಪರಿಸರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದೇ ರೋಟರಿ ಉದ್ದೇಶ: ಪಾಲಾಕ್ಷ

KannadaprabhaNewsNetwork |  
Published : Mar 01, 2026, 01:15 AM IST
ಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಹಾಗೂ ಪರಿಸರ ಸಂರಕ್ಷಣೆ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಮುಂದೆ ಸಾಗುವುದೇ ರೋಟರಿ ಕ್ಲಬ್ ಮೂಲ ಉದ್ದೇಶ ಎಂದು ಏಕತಾ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಟಿ.ಎನ್. ಪಾಲಾಕ್ಷ ಹೇಳಿದರು.

ಏಕತಾ ರೋಟರಿ ಪ್ರಾರಂಭ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಮಾಜದಲ್ಲಿ ಆರೋಗ್ಯ, ಶಿಕ್ಷಣ, ಶುದ್ಧ ಕುಡಿಯುವ ನೀರು ಹಾಗೂ ಪರಿಸರ ಸಂರಕ್ಷಣೆ ಕಾರ್ಯ ಕ್ಷೇತ್ರಗಳಲ್ಲಿ ತೊಡಗಿಸಿ ಕೊಂಡು ಮುಂದೆ ಸಾಗುವುದೇ ರೋಟರಿ ಕ್ಲಬ್ ಮೂಲ ಉದ್ದೇಶ ಎಂದು ಏಕತಾ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಟಿ.ಎನ್. ಪಾಲಾಕ್ಷ ಹೇಳಿದರು.

ಜ್ಯೋತಿನಗರ ಸಮೀಪದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ಧ ನೂತನ ಏಕತಾ ರೋಟರಿ ಕ್ಲಬ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಮಾಜದ ಹಿತಚಿಂತನೆಯಡಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಿ ಭಾಗವಹಿಸಿದರೆ ಮಾತ್ರ ಮೂಲಧ್ಯೇಯ ಈಡೇರಲು ಸಾಧ್ಯ. ಆ ನಿಟ್ಟಿನಲ್ಲಿ ಸಮಾಜಕ್ಕೆ ಪೂರಕವಾದ ಸವಲತ್ತು ಒದಗಿಸುವುದು ಪ್ರತಿ ರೋಟರಿ ಸದಸ್ಯನ ಕರ್ತವ್ಯ ಎಂದು ತಿಳಿಸಿದರು.

ಅನುಸ್ಥಾಪನ ಅಧಿಕಾರಿ ಬಿ.ಸಿ.ಗೀತಾ ಮಾತನಾಡಿ, ಸಾರ್ವಜನಿಕ ಸೇವೆಯಲ್ಲಿ ಕ್ಲಬ್ ತೊಡಗಿಸಿಕೊಂಡು ಅತ್ಯುತ್ತಮ ಸಂಸ್ಥೆ ಯಾಗಿ ಹೊರಹೊಮ್ಮಬೇಕು. ಪ್ರಸ್ತುತ ಉಳಿದಿರುವ ಅವಧಿಯಲ್ಲಿ ನೂತನ ಅಧ್ಯಕ್ಷರು ಎಲ್ಲಾ ರೋಟರಿ ಸದಸ್ಯರನ್ನು ಒಂಗ್ಗೂಡಿಸಿಕೊಂಡು ಸಾಗಬೇಕು. ಇದು ಸಂಸ್ಥೆ ಆರೋಗ್ಯಕಾರಿ ಬೆಳವಣಿಗೆಗೆ ಸಹಕಾರಿ ಎಂದು ತಿಳಿಸಿದರು.

ರೋಟರಿ ಸ್ಥಾಪಕ ಸದಸ್ಯ ತನೋಜ್‌ನಾಯ್ಡು, ರೋಟರಿ ಕ್ಲಬ್ ನೂತನ ಅಧ್ಯಕ್ಷೆ ಪ್ರಿಯಾಂಕಾ ಆನಂದ್ ಮಾತನಾಡಿದರು. ಏಕತ ರೋಟರಿ ಕ್ಲಬ್ ಕಾರ್ಯದರ್ಶಿ ದಿವ್ಯಾ ವಿಕ್ರಮ್, ರೋಟರಿ ಜಿಲ್ಲಾ ಪಿಡಿಜಿ ಡಿ.ಎಸ್.ರವಿ, ಸದಸ್ಯತ್ವ ನೋಂದಣಿ ಅಧಿಕಾರಿ ಕೆ.ಬಿ.ಪ್ರಸನ್ನ, ಬಾಳೆಹೊನ್ನೂರು ಅಧ್ಯಕ್ಷ ತಿಮ್ಮಯ್ಯಗೌಡ, ಪ್ರಾಯೋಜಕ ಸಿ.ಪಿ.ರಮೇಶ್, ಸದಸ್ಯರಾದ ಆನಂದ್, ರುದ್ರೇಶ್, ಕೃಷ್ಣ ಮೂ ರ್ತಿ, ದಯಾನಂದ್, ಸುಪ್ರೀತಾ, ಜಯ, ವಿವೇಕ್, ಪಲ್ಲವಿ ಉಪಸ್ಥಿತರಿದ್ದರು.- ಫೋಟೋ

ಜ್ಯೋತಿನಗರ ಸಮೀಪದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ಧ ನೂತನ ಏಕತ ರೋಟರಿ ಕ್ಲಬ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಕಾರ್ಯಕ್ರಮವನ್ನುಏಕತ ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಟಿ.ಎನ್.ಪಾಲಾಕ್ಷ ಉದ್ಘಾಟಿಸಿದರು. ಅನುಸ್ಥಾಪನ ಅಧಿಕಾರಿ ಬಿ.ಸಿ.ಗೀತಾ, ತನೋಜ್‌ನಾಯ್ಡು, ಪ್ರಿಯಾಂಕಾ ಆನಂದ್ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡನ ಬಿಟ್ಟು ತೊರೆದು ಬಂದ ಪ್ರೇಯಿಸಿಗೆ ಇರಿದ ಪ್ರಿಯಕರ
ಕಷ್ಟ, ಸುಖ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ