- ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಅನ್ವಯ: ಜಿಲ್ಲಾ ಎಸ್‌ಪಿ ಸೂಚನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಆರ್‌ಎಂಸಿ ಲಿಂಕ್ ರಸ್ತೆಯ ಶ್ರೀ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಡಿ.26ರ ಶುಕ್ರವಾರ ನಡೆಯುವ ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ, ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು, ರಾಷ್ಟ್ರೀಯ ಅಧ್ಯಕ್ಷರು, ಮಠಾಧೀಶರು, ವಿವಿಧ ಗಣ್ಯಾತಿ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆ ವಾಹನಗಳು ಹಾಗೂ ಜನರ ಸುಗಮ ಸಂಚಾರ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗಿದ್ದು, ತಪ್ಪದೇ ಪಾಲಿಸಿ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.ಅಂದು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಭಾರಿ ಮತ್ತು ಲಘು ವಾಹನಗಳ ಮಾರ್ಗ ಬದಲಾವಣೆ, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬದಲಾದ ಮಾರ್ಗಗಳು, ಪಾರ್ಕಿಂಗ್ ಜಾಗಗಳ ವಿವರ ಇಂತಿದೆ.
2) ಜಗಳೂರು ಕಡೆಯಿಂದ ದಾವಣಗೆರೆ ಕಡೆಗೆ ವಾಹನಗಳು ಅಣಜಿ ಆನಗೋಡು ಮಾರ್ಗ ಎನ್.ಎಚ್-48 ರಸ್ತೆಯಲ್ಲಿ ಸಂಚರಿಸಬೇಕು. ದಾವಣಗೆರೆಯಿಂದ ಜಗಳೂರು ಕಡೆಗೆ ಸಂಚರಿಸುವ ವಾಹನಗಳು ಬಾಡಾ ಕ್ರಾಸ್ ಮೂಲಕ ಹೊಸ ಎನ್.ಎಚ್-48 ರಸ್ತೆ, ಆನಗೋಡು-ಅಣಜಿ ಮಾರ್ಗ ಬಳಸಬೇಕು.
4) ಕಾರ್ಯಕ್ರಮಕ್ಕೆ ಚನ್ನಗಿರಿ, ಸಂತೆಬೆನ್ನೂರು ಬೆಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮೂಲಕ ಬರುವ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನದ ಹತ್ತಿರ ಬಲ ತಿರುವು ಪಡೆದುಕೊಂಡು ಹೊಸ ಚಿಕ್ಕನಹಳ್ಳಿ ಕಾಸ್, ಬಸಾಪುರ ಗ್ರಾಮದಲ್ಲಿ ಆಯ್ದು ಬಸಾಪುರ ರಸ್ತೆಯ ವಿನಾಯಕ ಗೋಡೌನ್ ಪಕ್ಕದ ಕ್ರಾಸ್ ಮುಖಾಂತರ ಬಸ್ ಗಳು ಪಾರ್ಕಿಂಗ್ ಜಾಗಕ್ಕೆ ತೆರಳಬೇಕು. ಬೈಕ್ ಮತ್ತು ಕಾರುಗಳು ವಿನಾಯಕ ಗೋಡೌನ್ ಹಿಂದೆ ಇರುವ ರಿಂಗ್ ರಸ್ತೆ ಮುಖಾಂತರ ಕಾರು, ಬೈಕ್ ಪಾರ್ಕಿಂಗ್ ಜಾಗಕ್ಕೆ ತೆರಳಬೇಕು.
6) ಚನ್ನಗಿರಿ, ಸಂತೆಬೆನ್ನೂರು, ಬೆಂಗಳೂರು ಕಡೆಯಿಂದ ಬಾಡಾ ಕ್ರಾಸ್ ಮುಖಾಂತರ ಕಾರ್ಯಕ್ರಮಕ್ಕೆ ಬರುವ ವಿಐಪಿ ವಾಹನಗಳು ಡಿಸಿಎಂ ಅಂಡರ್ ಪಾಸ್, ದನದ ಮಾರುಕಟ್ಟೆ ಕ್ರಾಸ್, ಎಪಿಎಂಸಿ ಬಸವೇಶ್ವರ ದೇವಸ್ಥಾನ, ಗಣೇಶ ಹೋಟೆಲ್ ಸರ್ಕಲ್, ಆರ್‌ಎಂಸಿ ರಸ್ತೆ ಮುಖಾಂತರ ಬಸಾಪುರ ಕ್ರಾಸ್‌ನಲ್ಲಿ ಬಲ ತಿರುವು ಪಡೆದುಕೊಂಡು ಕಲ್ಲೇಶ್ವರ ಮಿಲ್ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಜಾಗಕ್ಕೆ ತೆರಳಬೇಕು.
8) ಹರಿಹರ ಹರಪನಹಳ್ಳಿ, ಕಡೆಯಿಂದ ಸಮಾರಂಭಕ್ಕೆ ಬರುವ ವಿಐಪಿ ವಾಹನಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಆರ್‌ಟಿಒ ಸರ್ಕಲ್, ಅಖ್ತರ್ ರಜಾ ಸರ್ಕಲ್, ಟಿಪ್ಪು ಸರ್ಕಲ್, ಬೇತೂರು ಹಳ್ಳದ ಹತ್ತಿರ ಬಲ ತಿರುವು ಪಡೆದು ವೆಂಕಟೇಶ್ವರ ಸರ್ಕಲ್, ಮಟ್ಟಿಕಲ್ ಮುಂಭಾಗದಿಂದ ಬಸಾಪುರ ಕ್ರಾಸ್ ಎಡತಿರವು ಪಡೆದುಕೊಂಡು ಕಲ್ಲೇಶ್ವರ ಹಿಂಭಾಗದ ಲೇಔಟ್ ರಸ್ತೆ ಮುಖಾಂತರ ವಿಐಪಿ ಪಾರ್ಕಿಂಗ್ ಸ್ಥಳಕ್ಕೆ ತಲುಪಬೇಕು ಎಂದು ಅವರು ತಿಳಿಸಿದ್ದಾರೆ.
(ಫೋಟೋ: ಉಮಾ ಪ್ರಶಾಂತ್, ಜಿಲ್ಲಾ ಎಸ್‌ಪಿ)