ಗೋವುಗಳಿಗೆ ಮೇವು ನೀಡಿ ರಾಯಲ್ ರೈಡರ್ಸ್ ಬ್ಯಾನರ್ ಲೋಕಾರ್ಪಣೆ

KannadaprabhaNewsNetwork |  
Published : Dec 22, 2025, 01:45 AM IST
21ಎಚ್ಎಸ್ಎನ್9 :  | Kannada Prabha

ಸಾರಾಂಶ

ಅರಸೀಕೆರೆ ತಾಲೂಕಿನ ವಿವಿಧ ಪ್ರೇಕ್ಷಣೀಯ ಪ್ರವಾಸಿ ತಾಣಗಳು, ಸ್ಮಾರಕಗಳ ಸಂರಕ್ಷಣೆಗಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ‘ರಾಯಲ್ ಬೈಕ್ ರೈಡರ್ಸ್’ ತಂಡದವರು ನಗರದ ಹೊರವಲಯದಲ್ಲಿರುವ ಕಸ್ತೂರಬಾ ಗೋಶಾಲೆಯ ಗೋವುಗಳಿಗೆ ಹುಲ್ಲಿನ ಮೇವು ನೀಡಿ ತಮ್ಮ ತಂಡದ ಬ್ಯಾನರ್ ಅನ್ನು ಲೋಕಾರ್ಪಣೆ ಮಾಡಿದರು. ರಾಯಲ್ ಎನ್‌ಫೀಲ್ಡ್‌ ಬೈಕ್ ಮೂಲಕ ಅರಸೀಕೆರೆ ತಾಲೂಕು ಸೇರಿದಂತೆ ದೂರದೂರಿನ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಲಾಗುತ್ತಿದೆ. ಸ್ಮಾರಕಗಳು, ಪ್ರವಾಸಿ ತಾಣಗಳು, ಅಂತರ್ಜಲ ಹಾಗೂ ಪರಿಸರ ಸಂರಕ್ಷಣೆ ನಮ್ಮ ತಂಡದ ಮೂಲ ಉದ್ದೇಶವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ವಿವಿಧ ಪ್ರೇಕ್ಷಣೀಯ ಪ್ರವಾಸಿ ತಾಣಗಳು, ಸ್ಮಾರಕಗಳು ಹಾಗೂ ಹಳೆಯ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳ ಜೊತೆಗೆ ಪರಿಸರ ಮತ್ತು ಅಂತರ್ಜಲ ಸಂರಕ್ಷಣೆಗಾಗಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿರುವ ‘ರಾಯಲ್ ಬೈಕ್ ರೈಡರ್ಸ್’ ತಂಡದವರು ನಗರದ ಹೊರವಲಯದಲ್ಲಿರುವ ಕಸ್ತೂರಬಾ ಗೋಶಾಲೆಯ ಗೋವುಗಳಿಗೆ ಹುಲ್ಲಿನ ಮೇವು ನೀಡಿ ತಮ್ಮ ತಂಡದ ಬ್ಯಾನರ್ ಅನ್ನು ಲೋಕಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಎಲ್. ದರ್ಶನ್ ಮಾತನಾಡಿ, “ನಮ್ಮ ತಂಡವು ವಾರದಲ್ಲಿ ಒಮ್ಮೆ ಸೈಕ್ಲಿಂಗ್ ಮೂಲಕ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸೇವಾ ಕಾರ್ಯಗಳನ್ನು ಹಮ್ಮಿಕೊಂಡುಬರುತ್ತಿದೆ. ನಂತರದ ದಿನಗಳಲ್ಲಿ ರಾಯಲ್ ಎನ್‌ಫೀಲ್ಡ್‌ ಬೈಕ್ ಮೂಲಕ ಅರಸೀಕೆರೆ ತಾಲೂಕು ಸೇರಿದಂತೆ ದೂರದೂರಿನ ಪ್ರೇಕ್ಷಣೀಯ ತಾಣಗಳಿಗೆ ಭೇಟಿ ನೀಡಲಾಗುತ್ತಿದೆ. ಸ್ಮಾರಕಗಳು, ಪ್ರವಾಸಿ ತಾಣಗಳು, ಅಂತರ್ಜಲ ಹಾಗೂ ಪರಿಸರ ಸಂರಕ್ಷಣೆ ನಮ್ಮ ತಂಡದ ಮೂಲ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಮಾನ ಮನಸ್ಕ ಸದಸ್ಯರನ್ನು ಒಳಗೊಂಡ ‘ಅರಸೀಕೆರೆ ರಾಯಲ್ ರೈಡರ್ಸ್’ ತಂಡವು ತಾಲೂಕಿನ ಪ್ರಮುಖ ಪ್ರವಾಸಿತಾಣಗಳ ಚಿತ್ರಗಳನ್ನು ಒಳಗೊಂಡ ಬ್ಯಾನರ್‌ ಅನ್ನು ರಚಿಸಿ ಲೋಕಾರ್ಪಣೆ ಮಾಡಲಾಗಿದೆ, ಅನಾವರಣಗೊಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ