ಅಯೋಧ್ಯೆಯ ಕನ್ಯಾಡಿ ಶ್ರೀರಾಮ ಮಠಕ್ಕೆ ಮಸ್ಕತ್ ಭಕ್ತರಿಂದ 10 ಲಕ್ಷ ರು. ಸಮರ್ಪಣೆ

KannadaprabhaNewsNetwork |  
Published : Oct 26, 2026, 04:00 AM IST
ಬೆಳ್ತಂಗಡಿ  | Kannada Prabha

ಸಾರಾಂಶ

ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಯಾದ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕನ್ಯಾಡಿ ಶ್ರೀರಾಮ ಶಾಖಾ ಮಠದ ಕನಸಿಗೆ ಮಸ್ಕತ್‌ನ ರಾಮಭಕ್ತರು ಭಕ್ತಿಯ ಸೇತುವೆ ಕಟ್ಟಿದ್ದಾರೆ. ಒಗ್ಗಟ್ಟಿನಿಂದ ಸಂಗ್ರಹಿಸಿದ ₹ 10 ಲಕ್ಷಕ್ಕೂ ಅಧಿಕ ಮೊತ್ತದ ಬೃಹತ್ ದೇಣಿಗೆಯನ್ನು ಶ್ರೀಕ್ಷೇತ್ರದಲ್ಲಿ ಶ್ರೀ ಮಂಡಲೇಶ್ವರ ಬ್ರಹ್ಮಾನಂದ ಸ್ವಾಮೀಜಿ ಮಹಾರಾಜ್ ಅವರಿಗೆ ಸಮರ್ಪಿಸಲಾಯಿತು.

ಬೆಳ್ತಂಗಡಿ : ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಯಾದ ಪುಣ್ಯಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಕನ್ಯಾಡಿ ಶ್ರೀರಾಮ ಶಾಖಾ ಮಠದ ಕನಸಿಗೆ ಮಸ್ಕತ್‌ನ ರಾಮಭಕ್ತರು ಭಕ್ತಿಯ ಸೇತುವೆ ಕಟ್ಟಿದ್ದಾರೆ. ಒಗ್ಗಟ್ಟಿನಿಂದ ಸಂಗ್ರಹಿಸಿದ ₹ 10 ಲಕ್ಷಕ್ಕೂ ಅಧಿಕ ಮೊತ್ತದ ಬೃಹತ್ ದೇಣಿಗೆಯನ್ನು ಶ್ರೀಕ್ಷೇತ್ರದಲ್ಲಿ ಶ್ರೀ ಮಂಡಲೇಶ್ವರ ಬ್ರಹ್ಮಾನಂದ ಸ್ವಾಮೀಜಿ ಮಹಾರಾಜ್ ಅವರಿಗೆ ಸಮರ್ಪಿಸಲಾಯಿತು.

ಈ ಪುಣ್ಯ ಕಾರ್ಯದ ರೂವಾರಿ, ಒಮಾನ್ ಬಿಲ್ಲವಾಸ್ ಮಸ್ಕತ್‌ನ ಮಾಜಿ ಅಧ್ಯಕ್ಷ ಹಾಗೂ ಮಹಾಸಂಸ್ಥಾನದ ಗಲ್ಫ್ ರಾಷ್ಟ್ರಗಳ ಉಪಾಧ್ಯಕ್ಷ ಸುಜಿತ್ ಅಂಚನ್ ಪಾಂಗಾಳ ಅವರು ಭಕ್ತರ ಪರವಾಗಿ ದೇಣಿಗೆ ಹಸ್ತಾಂತರಿಸಿದರು. ಅವರ ನೇತೃತ್ವ, ಸಂಘಟನಾ ಚತುರತೆ ಮತ್ತು ರಾಮಸೇವೆಯ ಕಳಕಳಿಗೆ ನೆರೆದಿದ್ದ ಗಣ್ಯರೆಲ್ಲರೂ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದರು.ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಶ್ರೀರಾಮ ಪೂಜಾರಿ ಕಲ್ಯಾಣಪುರ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಜಿಲ್ಲಾ ಬಿಲ್ಲವ ಮಹಾಮಂಡಲದ ಅಧ್ಯಕ್ಷೆ ಗೀತಾಂಜಲಿ ಸುವರ್ಣ, ಜಯಂತ್ ಕೋಟ್ಯಾನ್ , ರಂಜೀತ್ ಪೂಜಾರಿ ತೋಡಾರ್, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸಾಲ್ಯಾನ್, ಉದ್ಯಮಿ ಕಾಮರಾಜ್ ಸುವರ್ಣ, ಬಾಲಕೃಷ್ಣ ಕೋಟ್ಯಾನ್ , ಬಿರುವೆರ್ ಕಾಪು ಸಮಿತಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೋಟಿಯನ್, ಮಜೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಪೂಜಾರಿ, ರಿತೇಶ್ ಕೋಟ್ಯಾನ್, ಶುಭ ರಾಜೇಂದ್ರ ಚಿಲಿಂಬಿ, ಸುರೇಂದ್ರ ಅಂಚನ್, ಉಮೇಶ್ ಬಂಗೇರ ಹಾಗೂ ದೀಪಕ್‌ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ನೂರಾರು ಭಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.

ಸಭಿಕರನ್ನು ಸ್ವಾಗತಿಸಿದ ಸ್ವಾಮೀಜಿ, ‘ಸಮುದ್ರದಾಚೆ ಇದ್ದರೂ ಸಂಸ್ಕೃತಿಯನ್ನು ಮರೆತಿಲ್ಲ, ರಾಮನನ್ನು ಮರೆತಿಲ್ಲ ಎನ್ನುವುದಕ್ಕೆ ಮಸ್ಕತ್ ಭಕ್ತರ ಈ ಕೊಡುಗೆ ಜೀವಂತ ಉದಾಹರಣೆ. ಇದು ಕೇವಲ ಹಣವಲ್ಲ, ಇದು ಅಯೋಧ್ಯೆಯಲ್ಲಿ ತುಳಸಿ ಗಿಡವಾಗಿ, ಇಟ್ಟಿಗೆಯಾಗಿ, ಗೋಪುರವಾಗಿ ಬೆಳೆಯುವ ಭಕ್ತಿ’ ಎಂದು ಆಶೀರ್ವದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಆಗದಿರಲಿ
ಕಲೆ ಮನುಷ್ಯನ ಅಸ್ಮಿತೆಯ ಸೂಚಕ