ಪಿಎಂ ವಿಶ್ವಕರ್ಮ ಯೋಜನೆಯಡಿ 34 ಕೋಟಿ ರು. ಬಿಡುಗಡೆ: ಸಂಸದ ಕೋಟ

KannadaprabhaNewsNetwork |  
Published : Aug 30, 2025, 01:01 AM IST
29ಪಿಎಂ | Kannada Prabha

ಸಾರಾಂಶ

ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ೬,೪೪೮ ಫಲಾನುಭವಿಗಳು ತರಬೇತಿ ಪಡೆದುಕೊಂಡಿದ್ದು, ೩,೪೯೫ ಫಲಾನುಭವಿಗಳಿಗೆ ಒಟ್ಟು ೩೪ ಕೋಟಿ ರು. ಸಹಾಯಧನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಉಡುಪಿ: ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಒಟ್ಟು ೧೯,೮೫೪ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗಳ ಪೈಕಿ ರಾಜ್ಯ ಮಟ್ಟದಲ್ಲಿ ೭,೯೦೯ ಅರ್ಜಿಗಳು ಪುರಸ್ಕೃತಗೊಂಡಿದೆ. ಪುರಸ್ಕೃತಗೊಂಡ ಅರ್ಜಿಗಳಲ್ಲಿ ೬,೪೪೮ ಫಲಾನುಭವಿಗಳು ತರಬೇತಿ ಪಡೆದುಕೊಂಡಿದ್ದು, ೩,೪೯೫ ಫಲಾನುಭವಿಗಳಿಗೆ ಒಟ್ಟು ೩೪ ಕೋಟಿ ರು. ಸಹಾಯಧನ ಬಿಡುಗಡೆಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಅವರು ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದರು. ಈಗಾಗಲೇ ಈ ಯೋಜನೆಯಲ್ಲಿ ೧,೨೬೪ ಫಲಾನುಭವಿಗಳಿಗೆ ತರಬೇತಿ ಕಿಟ್ ವಿತರಣೆಯಾಗಿದ್ದು, ಮುಂದಿನ ಹಂತದಲ್ಲಿ ತರಬೇತಿ ಪಡೆದ ಫಲಾನುಭವಿಗಳಿಗೆ ಅಂಚೆ ಮೂಲಕ ತರಬೇತಿ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು ಎಂದರು.

ಇನ್ನು ಮುಂದೆ ವಿಶ್ವಕರ್ಮ ಯೋಜನೆಯ ಕಿಟ್‌ಗಳನ್ನು ಸ್ಥಳೀಯ ಶಾಸಕರು ಮತ್ತು ದಿಶಾ ಸಮಿತಿಯ ಸದಸ್ಯರ ಸಮಕ್ಷಮ ಅಂಚೆ ಕಚೇರಿಯಲ್ಲಿ ವಿತರಿಸುವಂತೆ ಸಂಸದ ಕೋಟ ಅಧಿಕಾರಿಗಳಿದೆ ಸಲಹೆ ನೀಡಿದರು.

೨೦೨೫-೨೬ ನೇ ಸಾಲಿನಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನ್ ಯೋಜನೆಯಡಿ ೧೮೪ ಮಂದಿ ಅರ್ಜಿ ಸಲ್ಲಿಸಿದ್ದು, ೬ ಕೋಟಿ ಸಹಾಯಧನ ಸಂಬಂಧಪಟ್ಟ ಬ್ಯಾಂಕುಗಳಿಗೆ ಮಂಜೂರಾಗಿದ್ದು, ಇಲ್ಲಿಯವರೆಗೆ ೨೦೨೨ ರಿಂದ ೫೭೮ ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ೩೭೩ ಮಂದಿ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆಯಾಗಿದೆ ಎಂದವರು ಹೇಳಿದರು.ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್ ನಾಯಕ್, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್, ಅಂಚೆ ಇಲಾಖೆ ಅಧಿಕಾರಿ ಜೀವನ್ ಹಾಗೂ ದಿಶಾ ಸಮಿತಿ ಸದಸ್ಯರಾದ ಮುರುಳಿಧರ ಕಡೆಕಾರ್, ಚಂದ್ರ ಪಂಚವಟಿ, ವೀಣಾ ಎಸ್. ಶೆಟ್ಟಿ, ರಮೇಶ್ ಪೂಜಾರಿ ಯಳಜಿತ್, ಪ್ರಿಯದರ್ಶಿನಿ ದೇವಾಡಿಗ, ಸಂತೆಕಟ್ಟೆ ನರಸಿಂಹ ನಾಯ್ಕ, ದೇವೇಂದ್ರ ಪ್ರಭು ಮಣಿಪಾಲ, ಆಶಾ ಇಡೂರು ಕುಂಜ್ಞಾಡಿ ಉಪಸ್ಥಿತರಿದ್ದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ