ಮಿಮ್ಸ್ ಅಭಿವೃದ್ಧಿ ಕಾಮಗಾರಿಗಳಿಗೆ ೩೯ ಕೋಟಿ ರು. ಪ್ರಸ್ತಾವನೆ

KannadaprabhaNewsNetwork |  
Published : Mar 07, 2025, 12:45 AM IST
ಮಿಮ್ಸ್‌ ಆಸ್ಪತ್ರೆ | Kannada Prabha

ಸಾರಾಂಶ

ತುರ್ತು ಚಿಕಿತ್ಸಾ ವಿಭಾಗ ಮತ್ತು ಆಪರೇಷನ್ ಕೊಠಡಿಗಳ ಮೇಲ್ದರ್ಜೆಗೇರಿಸಲು ೮.೫೦ ಕೋಟಿ ರು., ಪ್ರಸ್ತುತ ಇರುವ ಒಳಚರಂಡಿ ಆಸ್ಪತ್ರೆ ನಿರ್ಮಾಣವಾದ ವೇಳೆ ನಿರ್ಮಿಸಿದ್ದು, ರೋಗಿಗಳು ಮತ್ತು ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ಮತ್ತು ಆಂತರಿಕ ರಸ್ತೆಯನ್ನು ೩ ಕಿ.ಮೀ. ದೂರದವರೆಗೆ ನವೀಕರಿಸಬೇಕಿದೆ. ಮಳೆ ನೀರು ಸರಾಗವಾಗಿ ಹೋಗಲು ಹೊರಚರಂಡಿ ವ್ಯವಸ್ಥೆ ಮಾಡಬೇಕಿದೆ. ಅದಕ್ಕಾಗಿ ೫ ಕೋಟಿ ರು. ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ೯ ಕೋಟಿ ರು. ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ.

ತುರ್ತು ಚಿಕಿತ್ಸಾ ವಿಭಾಗ ಮತ್ತು ಆಪರೇಷನ್ ಕೊಠಡಿಗಳ ಮೇಲ್ದರ್ಜೆಗೇರಿಸಲು ೮.೫೦ ಕೋಟಿ ರು., ಪ್ರಸ್ತುತ ಇರುವ ಒಳಚರಂಡಿ ಆಸ್ಪತ್ರೆ ನಿರ್ಮಾಣವಾದ ವೇಳೆ ನಿರ್ಮಿಸಿದ್ದು, ರೋಗಿಗಳು ಮತ್ತು ಸಾರ್ವಜನಿಕರ ಸಂಖ್ಯೆಗೆ ಅನುಗುಣವಾಗಿ ಒಳಚರಂಡಿ ಮತ್ತು ಆಂತರಿಕ ರಸ್ತೆಯನ್ನು ೩ ಕಿ.ಮೀ. ದೂರದವರೆಗೆ ನವೀಕರಿಸಬೇಕಿದೆ. ಮಳೆ ನೀರು ಸರಾಗವಾಗಿ ಹೋಗಲು ಹೊರಚರಂಡಿ ವ್ಯವಸ್ಥೆ ಮಾಡಬೇಕಿದೆ. ಅದಕ್ಕಾಗಿ ೫ ಕೋಟಿ ರು. ಅಗತ್ಯವಿದೆ ಎಂದು ತಿಳಿಸಿದೆ.

ಮಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಪ್ರಸ್ತುತ ಇರುವ ಸಿಎಸ್‌ಎಸ್‌ಡಿ ಘಕವು ತುಂಬಾ ಹಳೆಯದಾಗಿದೆ. ಈ ಘಟಕವನ್ನು ಶಸ್ತ್ರಚಿಕಿತ್ಸಾ ಕೊಠಡಿಗಳಿಗೆ ಅನುಸಾಗ ಮೇಲ್ದರ್ಜೆಗೇರಿಸಬೇಕಿದೆ. ಯಂತ್ರೋಪಕರಣಗಳು, ಪೀಠೋಪಕರಣಗಳು, ಸಿವಿಲ್ ಕಾಮಗಾರಿಗೆ ೧೨.೨೦ ಕೋಟಿ ರು. ವೆಚ್ಚದಲ್ಲಿ ಅಂದಾಜುಪಟ್ಟಿ ಸಲ್ಲಿಸಿದೆ.

ಹೆಚ್ಚು ಸಾಮರ್ಥ್ಯದ ಆಧುನಿಕ ಅಡುಗೆ ಯಂತ್ರಗಳು ಮತ್ತು ಎಲೆಕ್ಟ್ರಿಕಲ್ ಮತ್ತು ಸಿವಿಲ್ ಕಾಮಗಾರಿಗೆ ೮೦ ಲಕ್ಷ ರು., ಲಾಂಡ್ರಿಗೆ ಅವಶ್ಯಕತೆ ಇರುವ ವಾಷಿಂಗ್ ಮೆಷಿನ್, ಟಂಬಲ್ ಡ್ರೈಯರ್, ಹೈಡ್ರೋ ಎಕ್ಸಾಕ್ಟರ್ ಖರೀದಿ, ಎಲೆಕ್ಟ್ರಿಕ್ ಮತ್ತು ಸಿವಿಲ್‌ಕಾಮಗಾರಿಗೆ ೯೪ ಲಕ್ಷ ರು. ಅಗತ್ಯವಿದೆ. ಸಂಸ್ಥೆಯ ಕಾಲೇಜು, ಬೋಧಕ ಆಸ್ಪತ್ರೆಯಲ್ಲಿ ವಿದ್ಯುತ್ ಬಿಲ್, ಜನರೇಟರ್‌ಗಳಿಗೆ ಡೀಸೆಲ್ ಖರೀದಿಗೆ ವಾರ್ಷಿಕ ೧.೯೦ ಕೋಟಿ ಖರ್ಚಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡಗಳ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ವ್ಯವಸ್ಥೆಯಿಂದ ವಿದ್ಯುತ್‌ಸೌಲಭ್ಯ ಪಡೆಯಲು ೯ ಕೋಟಿ ರು. ಅಗತ್ಯವಿರುವುದಾಗಿ ತಿಳಿಸಿದೆ.

ಎರಡನೇ ಮಹಡಿಯಲ್ಲಿರುವ ಇಎನ್‌ಟಿ, ಡೆರ್ಮಟಾಲಜಿ, ಆಪ್ತಲ್‌ಮೋಲಜಿ ವಿಭಾಗದ ವಾರ್ಡ್‌ಗಳನ್ನು ಹೊಸದಾಗಿ ನಿರ್ಮಾಣ ಮಾಡಲು ೧.೫೦ ಕೋಟಿ ರು. ಬೇಕಿದೆ. ಮಿಮ್ಸ್ ಬೋಧಕ ಆಸ್ಪತ್ರೆಯ ಹೆರಿಗೆ ವಾರ್ಡ್‌ಗಳನ್ನು ನವೀಕರಣಗೊಳಿಸಲು ೭೨.೫೦ ಲಕ್ಷ ರು. ಅಗತ್ಯವಿರುವುದಾಗಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ