ಕನ್ನಡಪ್ರಭ ವಾರ್ತೆ, ಚನ್ನಗಿರಿ
ಜೂಜಾಟ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯ ಕುಮಾರ್ ಎಂ.ಸಂತೋಷ್, ಮಂಜುನಾಥ್ ಮಾರ್ಗದರ್ಶದಲ್ಲಿ ದಾಳಿ ನಡೆಸಿ, 15 ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯನ್ನು ನಡೆಸುವಲ್ಲಿ ಸಿಪಿಐ ಇಮ್ರಾನ್ ಬೇಗ್ ಜಿಲ್ಲಾ ಪೊಲೀಸ್ ಕಚೇರಿ ಸಿಬ್ಬಂದಿ ಮಜೀದ್, ರಮೇಶ್ ನಾಯ್ಕ್, ಆಂಜನೇಯ, ಪ್ರಭಾಕರ್, ಮುಸ್ತಾಕ್ ಆಹ್ಮದ್, ಸೈಪುಲ್ಲಾ, ಶಶಿಕುಮಾರ್, ನರೇಂದ್ರ ಭಾಗವಹಿಸಿದ್ದರು.- - - (ಸಾಂದರ್ಭಿಕ ಚಿತ್ರ)