ಕನ್ನಡಪ್ರಭ ವಾರ್ತೆ ಬೆಂಗಳೂರು
ಷರತ್ತುಗಳು
*ಕಾಮಗಾರಿಗಳನ್ನು 10 ಕೋಟಿ ರು.ಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ, ಕೆಟಿಪಿಪಿ ಪೋರ್ಟಲ್ ಮುಖಾಂತರ ಅಲ್ಪಾವಧಿ ಟೆಂಡರ್ ಕರೆಯಬೇಕು. ಸರ್ಕಾರದ ಆದೇಶದ ಅನ್ವಯ ತಾಂತ್ರಿಕ ಮತ್ತು ಆರ್ಥಿಕ ಪರಿಶೀಲನೆ ನಡೆಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕಾಮಗಾರಿ ಅನುಷ್ಠಾನಗೊಳಿಸಬೇಕು.* ಈ ಕಾಮಗಾರಿಗಳು ದೀರ್ಘಾವಧಿ ಬಾಳಿಕೆಯುಳ್ಳ ಆಸ್ತಿ ಸೃಜನೆ ಸ್ವರೂಪದ್ದಾಗಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಂಡು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು. ಈ ಕಾಮಗಾರಿಗಳನ್ನು 10 ಕೋಟಿ ರು.ಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ ಇ-ಟೆಂಡರ್ ಮುಖಾಂತರ ಅನುಷ್ಠಾನಗೊಳಿಸಬೇಕು.
* ಜಿಬಿಎ ಮುಖ್ಯ ಆಯುಕ್ತರು ಅನುಮೋದಿತ ಕ್ರಿಯಾ ಯೋಜನೆಯಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಪ್ರಕಾರ ಕಾಮಗಾರಿಗಳನ್ನು ಗುರುತಿಸಿ ಅನುಷ್ಠಾನಗೊಳಿಸಬೇಕು.* ಕ್ರಿಯಾ ಯೋಜನೆಯ ಕಾಮಗಾರಿ ಬದಲಿಸಿ ಅನುಷ್ಠಾನಗೊಳಿಸುವಾಗ ಜಿಬಿಎ ಮುಖ್ಯ ಆಯುಕ್ತರ ಶಿಫಾರಸ್ಸಿನ ಮೇರೆಗೆ ಇಲಾಖಾ ಸಚಿವರ ಅನುಮೋದನೆ ಪಡೆಯಬೇಕು.
* ಸರ್ಕಾರದ ಆಡಳಿತಾತ್ಮಕ ಅನುಮೋದನೆ ನಿರೀಕ್ಷಿಸಿ ಕೂಡಲೇ ಅಲ್ಪಾವಧಿ ಟೆಂಡರ್ ಕರೆದು, ಟೆಂಡರ್ ಅನುಮೋದನೆ ಮತ್ತು ಆಡಳಿತಾತ್ಮಕ ಅನುಮೋದನೆಗೆ ಒಂದೇ ಬಾರಿಗೆ ಪ್ರಸ್ತಾವನೆ ಸಲ್ಲಿಸಬೇಕು.