ಆರ್‌ಎಸ್‌ಎಸ್‌ ಶತಾಬ್ಧಿ ವರ್ಷ: ಇಂದು ಪಥಸಂಚಲನ

KannadaprabhaNewsNetwork |  
Published : Oct 05, 2025, 01:01 AM IST
4ಎಚ್‌ಯುಬಿ28ಪೊಲೀಸ್ ಆಯುಕ್ತ  ಎನ್. ಶಶಿಕುಮಾ‌ರ್ ನೇತೃತ್ವದಲ್ಲಿ, ನಗರದಲ್ಲಿ ರೂಟ್ ಮಾರ್ಚ್ ನಡೆಯಿತು. | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ಅ. 5ರಂದು ಮಧ್ಯಾಹ್ನ ‌3ಕ್ಕೆ ಹುಬ್ಬಳ್ಳಿ ನೆಹರು ಮೈದಾನದಿಂದ ಪಥಸಂಚಲನ ನಡೆಯಲಿದೆ. 7000 ಗಣವೇಷಧಾರಿಗಳು ಪಾಲ್ಗೊಳ್ಳಲಿದ್ದಾರೆ.

ಹುಬ್ಬಳ್ಳಿ:

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ಅ. 5ರಂದು ಮಧ್ಯಾಹ್ನ ‌3ಕ್ಕೆ ನಗರದ ನೆಹರು ಮೈದಾನದಿಂದ ಪಥಸಂಚಲನ ನಡೆಯಲಿದೆ. 7000 ಗಣವೇಷಧಾರಿಗಳು ಪಾಲ್ಗೊಳ್ಳಲಿದ್ದಾರೆ.

ಎರಡು ಮಾರ್ಗಗಳಲ್ಲಿ ಪಥಸಂಚಲನ ನಡೆಯಲಿದ್ದು, ಮೊದಲ ಮಾರ್ಗ ನೆಹರು ಮೈದಾನದಿಂದ ಕೃಷ್ಣ ಭವನ, ಸರ್‌ ಸಿದ್ದಪ್ಪ ಕಂಬಳಿ ಮಾರ್ಗ,

ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನ ಪೇಟೆಯ ಶ್ರೀತುಳಜಾಭವಾನಿ ವೃತ್ತ, ಪೆಂಡಾರ ಗಲ್ಲಿ ಶ್ರೀಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟೆ ಸರಾಫ್ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ದುರ್ಗದ ಬೈಲ್ ವೃತ್ತ.

ಎರಡನೇ ಪಥಸಂಚಲನ ನೆಹರು ಮೈದಾನ, ಟೌನ್ ಹಾಲ್, ಜೆ.ಸಿ. ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟೆ ವೃತ್ತ, ಸಿಬಿಟಿ ಮಕಾನದಾರ ಗಲ್ಲಿ, ಮಂಗಳವಾರ ಪೇಟೆ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ್ ವರೆಗೆ ನಡೆದು ಎರಡೂ ಸಂಚಲನಗಳು ಸೇರಲಿವೆ. ಬಳಿಕ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ ಮೂಲಕ ಕೃಷ್ಣ ಭವನ ಮಾರ್ಗವಾಗಿ ನೆಹರು ಮೈದಾನದಲ್ಲಿ ಸಂಚಲನ ಮುಕ್ತಾಯವಾಗಲಿದೆ.

ಸಂಜೆ 5.45ಕ್ಕೆ ನೆಹರು ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಸಿದ್ದಾರೂಢ ಮಠದ ಚೇರ್ಮನ್‌ ಸಿ.ಎ. ಚೆನ್ನವೀರ ಮುಂಗರವಾಡಿ, ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹಕರಾದ ಕೃಷ್ಣಗೋಪಾಲ ಭಾಗವಹಿಸುವರು. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬರುವವರು ತಮ್ಮ ವಾಹನಗಳ ನಿಲ್ಲಿಸಲು ಐದು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಕಚೇರಿ ಆವರಣ, ಚಿಟಗುಪ್ಪಿ ಆಸ್ಪತ್ರೆಯ ಆವರಣ, ಲ್ಯಾಮಿಂಗ್ಟನ್ ಶಾಲೆ, ಸೆಟ್‌ಲೈಟ್ ಕಾಂಪ್ಲೆಕ್ಸ್ ಬೇಸ್ಮೆಂಟ್ ಮತ್ತು ಯು ಮಾಲ್ ಹಿಂದುಗಡೆ ಇರುವ ಖಾಲಿ ಜಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಕೃಷ್ಣ ಭವನ, ಚೇಂಬರ್ ಆಫ್ ಕಾಮರ್ಸ್, ಟೌನ್ ಹಾಲ್ ಮತ್ತು ಮೈದಾನದ ಸುತ್ತಮುತ್ತ ಎಲ್ಲೂ ವಾಹನ ನಿಲುಗಡೆ ಇರುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಪೊಲೀಸರಿಂದ ರೂಟ್‌ ಮಾರ್ಚ್‌

ಆರ್‌ಎಸ್‌ಎಸ್‌ ಪಥಸಂಚಲನ ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಶನಿವಾರ ಪೊಲೀಸ್ ಆಯುಕ್ತ ಎನ್. ಶಶಿಕುಮಾ‌ರ ನೇತೃತ್ವದಲ್ಲಿ, ನಗರದಲ್ಲಿ ರೂಟ್ ಮಾರ್ಚ್ ನಡೆಯಿತು. ನೆಹರು ಮೈದಾನದಿಂದ ಆರಂಭವಾದ ಪೊಲೀಸ್ ಪರೇಡ್ ಕೊಪ್ಪಿಕರ ರಸ್ತೆ, ದುರ್ಗದಬೈಲ್‌, ಸಿಬಿಟಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯಿತು.

PREV

Recommended Stories

ಚಲನಚಿತ್ರ ಪ್ರಶಸ್ತಿ ಪಡೆದ ನಟ, ನಟಿ, ನಿರ್ದೇಶಕರ ಅಭಿಮತ
‘ಅಗತ್ಯ ಬಂದಾಗ ಸೂಕ್ತ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯ ಪಕ್ಷಕ್ಕಿದೆ’