ದೇಶದ ಸಿದ್ಧಾಂತವೇ ಆರ್‌ಎಸ್‌ಎಸ್ ಸಿದ್ಧಾಂತ: ಸಂಸದ ಬೊಮ್ಮಾಯಿ

KannadaprabhaNewsNetwork |  
Published : Oct 25, 2025, 01:00 AM IST
ಫೋಟೊ ಶೀರ್ಷಿಕೆ: 24 ಹೆಎಚ್‌ವಿಆರ್12 ರಾಣೆಬೆನ್ನೂರ ತಾಲೂಕಿನ ಹೊನ್ನತ್ತಿ ಗ್ರಾಮದಲ್ಲಿ ಶ್ರೀ ಹೊನ್ನನಾಗದೇವತಾ ಹಾಗೂ ಶ್ರೀ ಹೇಮಾವತಿ ಮೂರ್ತಿ ಪ್ರಾಣ ಪ್ರತಿಷ್ಠಾನ ಹಾಗೂ ನೂತನ ದೇವಸ್ಥಾನದ ಉದ್ಘಾಟನೆ ಸಮಾರಂಭದಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿರವರು ಭಾಗವಹಿಸಿ, ದೇವಿಯ ದರ್ಶನ ಪಡೆದರು.  | Kannada Prabha

ಸಾರಾಂಶ

ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ಸಂಘಟನೆಯನ್ನು ಏನೂ ಮಾಡಲು ಆಗುವುದಿಲ್ಲ. ಈ ದೇಶದ ಸಿದ್ಧಾಂತವೇ ಆರ್‌ಎಸ್‌ಎಸ್ ಸಿದ್ಧಾಂತವಾಗಿದೆ. ಇದು ಹಿಂದೂಗಳಿಗೆ ರಾಷ್ಟ್ರ ವಿರೋಧಿ ಸರ್ಕಾರವಾಗಿ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ:ರಾಜ್ಯ ಸರ್ಕಾರಕ್ಕೆ ಆರ್‌ಎಸ್‌ಎಸ್ ಸಂಘಟನೆಯನ್ನು ಏನೂ ಮಾಡಲು ಆಗುವುದಿಲ್ಲ. ಈ ದೇಶದ ಸಿದ್ಧಾಂತವೇ ಆರ್‌ಎಸ್‌ಎಸ್ ಸಿದ್ಧಾಂತವಾಗಿದೆ. ಇದು ಹಿಂದೂಗಳಿಗೆ ರಾಷ್ಟ್ರ ವಿರೋಧಿ ಸರ್ಕಾರವಾಗಿ ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.ನಗರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಸರ್ಕಾರ ನಾಗರಿಕರ ಹಕ್ಕನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ. ಆರ್‌ಎಸ್‌ಎಸ್ ಸಂಘಟನೆ ಯಾವುದೇ ರಾಜಕೀಯ ಚಟುವಟಿಕೆಯ ಸಂಘಟನೆಯಲ್ಲ. ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆರ್‌ಎಸ್‌ಎಸ್‌ನ ಸದಸ್ಯರು. ಯಾವ ಕೋರ್ಟ್ ಆದೇಶದಲ್ಲಿ ಸಂಘ ಸಂಸ್ಥೆ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದಂತಿದೆ ಎಂದು ಪ್ರಶ್ನಿಸಿದರು.ಜನಶಕ್ತಿ-ರಾಜ್ಯಶಕ್ತಿ ಸಂಘರ್ಷ: ಕನ್ಹೇರಿ ಮಠದ ಸ್ವಾಮಿಗಳ ಸಾಧನೆ ಬಹಳ ದೊಡ್ಡದಿದೆ, ಅವರ ಸಾಧನೆ ನೋಡಬೇಕು ಅಂದರೆ, ಕನ್ಹೇರಿ ಮಠಕ್ಕೆ ಹೋಗಬೇಕು. ನಡೆಯುತ್ತಿರುವ ಇವತ್ತಿನ ಗೊಂದಲಕ್ಕೆ ಸ್ವಾಮೀಜಿ ಕೆಲವು ಶಬ್ದಗಳನ್ನು ಬಳಸಿದ್ದಾರೆ. ಅವರು ಸಾರ್ವಜನಿಕರಿಗೆ ಯಾವಾಗಲೂ ಬಹಳ ಪ್ರೀತಿಗೆ ಪಾತ್ರರಾದವರು. ಅಂತವರು ಬಂದರೆ ಕಾನೂನು ಸುವ್ಯವಸ್ಥೆಗೆ ಭಂಗವಾಗುತ್ತದೆ ಅಂದರೆ ಏನು? ಉತ್ತರ ಪ್ರದೇಶ, ಬಿಹಾರದಿಂದ ಬಹಳಷ್ಟು ಜನ ಧರ್ಮಗುರುಗಳು ಬರುತ್ತಾರೆ. ಇಲ್ಲಿ ಮೈಕ್‌ನಲ್ಲಿ ಪ್ರಚೋದನಕಾರಿಯಾಗಿ ಭಾಷಣ ಮಾಡುತ್ತಾರೆ. ಒಬ್ಬರನ್ನು ಆದ್ರೂ ನಿರ್ಬಂಧ ಮಾಡಿದ್ದಾರಾ? ಅದಕ್ಕೆ ಈ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಬರುವಂತಹ ದಿನಗಳಲ್ಲಿ ಜನಶಕ್ತಿ, ರಾಜ್ಯಶಕ್ತಿ ನಡುವೆ ಸಂಘರ್ಷ ಆಗುತ್ತದೆ ಎಂದರು.ಕಮಿಷನ್‌ನಿಂದ ಕಗ್ಗಂಟು: ರಾಜ್ಯ ಸರ್ಕಾರದಿಂದ ಗುತ್ತಿಗೆದಾರ ಬಿಲ್ ಬಾಕಿ ನೀಡಲು ಗಡುವು ಹಾಕಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ಸಚಿವರು ಅಭಿವೃದ್ಧಿ ಮಾಡಿದ್ದೇವೆ, ಗ್ಯಾರಂಟಿ ಕೊಟ್ಟಿದ್ದೇವೆ ಅನ್ನುತ್ತಾರೆ. ಮೂರು ವರ್ಷ ಆದರೂ ಅನುದಾನ ಬಿಡುಗಡೆ ಮಾಡಲಿಕ್ಕೆ ಏನಾಗಿದೆ. ಇದರಲ್ಲಿ ಇವರೆಲ್ಲ ಕಮಿಷನ್ ಹೆಚ್ಚು ಕೇಳುತ್ತಿದ್ದಾರೆ. ಗುತ್ತಿಗೆದಾರರು ಮನೆ,ಮಠ ಮಾರಾಟ ಮಾಡಿ ಕಮಿಷನ್ ಕೊಡುವ ಪರಿಸ್ಥಿತಿ ಬಂದಿದೆ. ಅದಕ್ಕಾಗಿಯೇ ಕಗ್ಗಂಟಾಗಿ ನಿಂತಿದೆ ಎಂದು ಹೇಳಿದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ