ಕನ್ನಡಪ್ರಭ ವಾರ್ತೆ ಬೀದರ್
ಕಲಬುರಗಿಯಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮಕ್ಕೆ ತೆರಳಲು ಶನಿವಾರ ಬೆಳಿಗ್ಗೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಬಿಕೆ ಹರಿಪ್ರಸಾದ ಅವರು ಮಾಧ್ಯಮದವರಿಗೆ ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಪದೇಪದೇ ಹೇಳಿಕೆ ನೀಡುತ್ತಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ,
ಆರ್‌ಎಸ್‌ಎಸ್‌ನವರು ಸ್ವಾತಂತ್ರ‍್ಯ ಹೋರಾಟದ ಆಶಯಗಳನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನ, ರಾಷ್ಟ್ರಗೀತೆ, ತ್ರಿವರ್ಣ ಧ್ವಜದ ವಿರೋಧಿಗಳನ್ನ ಪೂಜಿಸೋಕೆ ಆಗುತ್ತಾ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿ ದೇಶ ವಿರೋಧಿ ಚಟುವಟಿಕೆ ಮಾಡಿದಾಗ ಆರ್‌ಎಸ್‌ಎಸ್ ವಿರುದ್ಧ ಮಾತನಾಡಬೇಕಾಗುತ್ತೆ ಎಂದು ಖರ್ಗೆ ಅವರ ಸತತ ದಾಳಿಯನ್ನು ಸಮರ್ಥಿಸಿಕೊಂಡರು.ಒಟ್ಟಾರೆ ರಾಜ್ಯದ ಬಿಜೆಪಿಯವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿಕ್ ಶಾ ಅವರನ್ನ ರಕ್ಷಿಸುತ್ತಿದ್ದಾರೆ ಹೊರತು ಬೇರೇನು ಇಲ್ಲ. ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆಗೆ ಸಜ್ಜಾಗಿರುವ ಬಿಜೆಪಿಯವರ ಕುರಿತು ಪ್ರತಿಕ್ರಿಯಿಸಿ ಪಾದಯಾತ್ರೆ ಮಾಡಲಿ ತೊಂದರೆ ಇಲ್ಲ ಎಂದರು. ಈ ಸಂದರ್ಭದಲ್ಲಿ ಸಂಸದ ಸಾಗರ ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತಿತರರು ಇದ್ದಕೇಂದ್ರ ವೈಫಲ್ಯ ಮುಚ್ಚಲು ನಾಗೇಂದ್ರ ಹೆಸರಿನಲ್ಲಿ ಬಿಜೆಪಿಯವರ ಹೋರಾಟ: ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗಾಗಿ ಬಿಜೆಪಿಯ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ನಾಗೇಂದ್ರನ ಬಗ್ಗೆ ಕಾಳಜಿ ಇಲ್ಲ. ದೆಹಲಿಯಲ್ಲಿ ಸಂಸದರ ಜೊತೆ ಸಿಎಂ ಸಭೆ ನಡೆಸಿದ್ದರು, ಕರ್ನಾಟಕ ರಾಜ್ಯದ 18 ಜಿಲ್ಲೆಗಳಲ್ಲಿ ಬರ ಇದ್ದು ಗಂಭೀರ ಪರಿಸ್ಥಿತಿಯಿದೆ, ಹೀಗಾಗಿ, ₹10 ಸಾವಿರ ಕೋಟಿ ಪರಿಹಾರ ಜೊತೆಗೆ ರಾಜ್ಯಕ್ಕೆ ಬರ ಅಧ್ಯಯನಕ್ಕೆ ತಂಡ ಕಳುಹಿಸಿಕೊಡಲು ಕೇಂದ್ರದ ಮೇಲೆ ಸಂಸದರ ಮೂಲಕವೂ ಒತ್ತಡವನ್ನು ಮುಖ್ಯಮಂತ್ರಿ ಹೇರಿದ್ದರು ಆದರೆ ಕೇಂದ್ರ ಸರ್ಕಾರ ಇವೆರಡೂ ಮಾಡದಿರುವುದು ಚರ್ಚೆಗೆ ಬರುತ್ತೆ ಎಂಬ ಕಾರಣಕ್ಕೆ ನಾಗೇಂದ್ರನ ಹೆಸರಿಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.