ಕಡೂರಿನಲ್ಲಿ ಆರ್‌ಎಸ್ಎಸ್‌ ಪಥ ಸಂಚಲನ

KannadaprabhaNewsNetwork |  
Published : Oct 24, 2025, 01:00 AM IST
ಕಡೂರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಜನ್ಮ ಶತಾಬ್ದಿ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ಸ್ವಯಂಸೇವಕರು ಪಥಸಂಚಲನ ನಡೆಸಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಧ್ವಜವಂದನೆ ಸಲ್ಲಿಸಿದರು. | Kannada Prabha

ಸಾರಾಂಶ

ಕಡೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಜನ್ಮಶತಾಬ್ದಿ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ಸ್ವಯಂ ಸೇವಕರು ಭಾರತಮಾತೆ ಭಾವಚಿತ್ರ ಮತ್ತು ಭಗವಾಧ್ವಜದೊಂದಿಗೆ ಪಥಸಂಚಲನ ನಡೆಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಜನ್ಮಶತಾಬ್ದಿ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ಸ್ವಯಂ ಸೇವಕರು ಭಾರತಮಾತೆ ಭಾವಚಿತ್ರ ಮತ್ತು ಭಗವಾಧ್ವಜದೊಂದಿಗೆ ಪಥಸಂಚಲನ ನಡೆಸಿದರು.

ಪಟ್ಟಣದ ಎಂಆರ್‌ವಿ ಮಿಲ್ ಆವರಣದಿಂದ ಹೊರಟ ಪಥಸಂಚಲನ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಕೆಎಲ್ವಿ ವೃತ್ತ, ಗಣಪತಿ-ಆಂಜನೇಯಸ್ವಾಮಿ ಸರ್ಕಲ್, ಜೆಟಿ ರಸ್ತೆ, ಕದಂಬ ವೃತ್ತ, ಹಳೇಬಸ್ ನಿಲ್ದಾಣದ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಂತ್ಯಗೊಂಡಿತು. ಬಸ್ ನಿಲ್ದಾಣದ ಮುಂಭಾಗದಲ್ಲಿ ಸಮಾವೇಶಗೊಂಡ ಗಣವೇಷಧಾರಿಗಳು, ಸ್ವಯಂಸೇವಕರು ಭಗವಾಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಆರ್‌ಎಸ್‌ಎಸ್‌ ಧ್ಯೇಯಗೀತೆ ಹಾಡಿ, ಭಾರತಮಾತೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಭಗವಾಧ್ವಜವನ್ನು ಅವರೋಹಣಗೊಳಿಸಿದರು.ಪ್ರಮುಖ ರಸ್ತೆಗಳಲ್ಲಿ ಸಾಗಿದ ಗಣವೇಷಧಾರಿಗಳ ಮೇಲೆ ಸಾರ್ವಜನಿಕರು ಹಾಗೂ ಮಹಿಳೆಯರು ವಿವಿಧೆಡೆ ಪುಷ್ಪವೃಷ್ಟಿ ಸುರಿಸಿ ಸ್ವಾಗತಿಸಿ ಗೌರವ ಸಲ್ಲಿಸಿದರು. ಪಥಸಂಚಲನದಲ್ಲಿ ಸುಮಾರು 500ಕ್ಕು ಹೆಚ್ಚು ಗಣವೇಷಧಾರಿಗಳು ಭಾಗವಹಿಸಿದ್ದರು. ಜಿಲ್ಲಾ ಸಹ ಕಾರ್ಯವಾಹ ದಿನೇಶ್, ಸಂಚಾಲಕ ವಿಜಯಕುಮಾರ್, ಜಿಲ್ಲಾ ಪ್ರಚಾರಕ್ ಉಮೇಶ್ ನಂಜಿ, ಜಿಲ್ಲಾ ಕಾರ್ಯಕಾರಿಣಿಯ ಸೀತಾರಾಂ ಭರಣ್ಯ, ಹಿರಿಯ ಸ್ವಯಂ ಸೇವಕರಾದ ಕೆ.ಎಸ್.ಮಾಲತೀಶ್, ಎಚ್.ಎನ್.ಶಿವಶಂಕರ್, ಮಣಿ, ಶಾಮಿಯಾನಾ ಚಂದ್ರು, ಕೆ.ಎಚ್.ಎ.ಪ್ರಸನ್ನ, ಕಡೂರು ನಗರ ಕಾರ್ಯವಾಹ ಚೇತನ್, ಗ್ರಾಮಾಂತರ ಕಾರ್ಯವಾಹ ಸುಂದರೇಶ್ ಭಾಗವಹಿಸಿದ್ದರು. ಕಡೂರು ಪೊಲೀಸ್ ವೃತ್ತ ನಿರೀಕ್ಷಕ ಎಂ.ರಫೀಕ್ ನೇತೃತ್ವದಲ್ಲಿ ಪಿಎಸ್ಐ ಜಿ.ಆರ್.ಸಜಿತ್ಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

20 ಕೆಸಿಕೆಎಂ 2ಕಡೂರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆ ಜನ್ಮ ಶತಾಬ್ದಿ ಪ್ರಯುಕ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಘದ ಸ್ವಯಂಸೇವಕರು ಪಥಸಂಚಲನ ನಡೆಸಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಧ್ವಜವಂದನೆ ಸಲ್ಲಿಸಿದರು.

PREV

Recommended Stories

ಭವಿಷ್ಯದಲ್ಲಿ ಆನೇಕಲ್‌ ಭಾಗ ಜಿಬಿಎ ವ್ಯಾಪ್ತಿಗೆ: ಡಿ.ಕೆ.ಶಿವಕುಮಾರ್‌
ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ಸಂದೇಶ ರವಾನೆ!