ಬಾಣಾವರದಲ್ಲಿ ರುದ್ರೇಶ್ವರ ಅಗ್ನಿ ಜ್ವಾಲಾ ಮಹಾಕುಂಡ ಮಹೋತ್ಸವ

KannadaprabhaNewsNetwork |  
Published : Mar 11, 2026, 01:15 AM IST
 ರುದ್ರೇಶ್ವರ ಸ್ವಾಮಿಯವರ ಅಗ್ನಿ ಜ್ವಾಲಾ ಮಹಾಕುಂಡ ಮಹೋತ್ಸವ | Kannada Prabha

ಸಾರಾಂಶ

ಮಹೋತ್ಸವದ ಪ್ರಯುಕ್ತ ಪ್ರತಿದಿನ ಪ್ರಾತಃಕಾಲದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಧ್ವಜಾರೋಹಣ, ಸ್ವಸ್ತಿ ಪುಣ್ಯಾಹ, ನಾಂದಿ, ರಕ್ಷಾ ಬಂಧನ, ಪಂಚಕಲಶ ಪೂಜೆ, ಆದಿತ್ಯಾದಿ ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ಏಕಾದಶ ರುದ್ರ ಕಲಶ ಪೂಜೆ ಹಾಗೂ ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ಮಹಾಗಣಪತಿ ಹೋಮ, ಪೂರ್ಣಫಲ ಸಮರ್ಪಣೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.ಅನಂತರ ಮಹಾ ರುದ್ರಾಭಿಷೇಕ, ಬಿಲ್ವ ಅಷ್ಟೋತ್ತರ ಅರ್ಚನೆ ಹಾಗೂ ರುದ್ರ ಹೋಮಗಳನ್ನು ನಡೆಸಿ ಪೂರ್ಣಾಹುತಿ ಸಲ್ಲಿಸಲಾಯಿತು. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಮಹಾ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದಲ್ಲಿ ಶ್ರೀ ರುದ್ರೇಶ್ವರ ಮಹಾ ಸ್ವಾಮಿಯವರ ಅಗ್ನಿ ಜ್ವಾಲಾ ಮಹಾಕುಂಡ ಮಹೋತ್ಸವ ಮೂರು ದಿನಗಳ ಕಾಲ ಭಕ್ತಿಭಾವದಿಂದ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಮಹೋತ್ಸವದ ಅಂಗವಾಗಿ ವಿವಿಧ ಪೂಜೆಗಳು, ಹೋಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತರ ಅಪಾರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು.ಮಹೋತ್ಸವದ ಪ್ರಯುಕ್ತ ಪ್ರತಿದಿನ ಪ್ರಾತಃಕಾಲದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಧ್ವಜಾರೋಹಣ, ಸ್ವಸ್ತಿ ಪುಣ್ಯಾಹ, ನಾಂದಿ, ರಕ್ಷಾ ಬಂಧನ, ಪಂಚಕಲಶ ಪೂಜೆ, ಆದಿತ್ಯಾದಿ ನವಗ್ರಹ ಪೂಜೆ, ಮೃತ್ಯುಂಜಯ ಪೂಜೆ, ಏಕಾದಶ ರುದ್ರ ಕಲಶ ಪೂಜೆ ಹಾಗೂ ಪಂಚಾಮೃತ ಅಭಿಷೇಕಗಳನ್ನು ನೆರವೇರಿಸಲಾಯಿತು. ಬಳಿಕ ಮಹಾಗಣಪತಿ ಹೋಮ, ಪೂರ್ಣಫಲ ಸಮರ್ಪಣೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು.ಅನಂತರ ಮಹಾ ರುದ್ರಾಭಿಷೇಕ, ಬಿಲ್ವ ಅಷ್ಟೋತ್ತರ ಅರ್ಚನೆ ಹಾಗೂ ರುದ್ರ ಹೋಮಗಳನ್ನು ನಡೆಸಿ ಪೂರ್ಣಾಹುತಿ ಸಲ್ಲಿಸಲಾಯಿತು. ಕಾರ್ಯಕ್ರಮದ ಬಳಿಕ ಭಕ್ತಾದಿಗಳಿಗೆ ಮಹಾ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ಮೇಷ ಲಗ್ನದ ಶುಭ ಸಮಯದಲ್ಲಿ ಗುರುಲಿಂಗ ಜಂಗಮರ ನೇತೃತ್ವದಲ್ಲಿ ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆ ನೆರವೇರಿಸಿ ಪರಂಪರೆಯಂತೆ ಕೆಂಡ ಮಹೋತ್ಸವವನ್ನು ಆಚರಿಸಲಾಯಿತು. ಕೆಂಡದ ಮೇಲೆ ನಡೆದು ಭಕ್ತರು ತಮ್ಮ ಭಕ್ತಿ ವ್ಯಕ್ತಪಡಿಸಿದರು.ಈ ಧಾರ್ಮಿಕ ಮಹೋತ್ಸವದಲ್ಲಿ ಬಾಣಾವರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೆಂಡ ಮಹೋತ್ಸವವನ್ನು ಕಣ್ತುಂಬಿಕೊಂಡು ಪುನೀತರಾದರು. ಕಾರ್ಯಕ್ರಮದ ಅವಧಿಯಲ್ಲಿ ಭಕ್ತರಿಗೆ ವಿಶೇಷವಾಗಿ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆ್ಯಸಿಡ್‌ ದಾಳಿ ಸಂತ್ರಸ್ತರಿಗೆ ಮಾಸಿಕ 50 ಸಾವಿರ ಪಿಂಚಣಿ : ಪರಂ ಭರವಸೆ
5 ಪಾಲಿಕೆಗೆ ಜಿಎಸ್‌ಟಿಯಲ್ಲಿ ಪಾಲು ಕೊಡಲು ಆಯೋಗ ಶಿಫಾರಸು