ಗ್ರಾಮೀಣ ಮಕ್ಕಳೂ ಚೆನ್ನಾಗಿ ಬ್ಯಾಡ್ಮಿಂಟನ್ ಆಡ್ತಾರೆ:ಶಾಂತಲಿಂಗ ಶ್ರೀಗಳು

KannadaprabhaNewsNetwork |  
Published : Oct 07, 2026, 02:30 AM IST
(6ಎನ್.ಆರ್.ಡಿ3 ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು ಆರ್ಶೀವಚನ ನೀಡಿದರು.)  | Kannada Prabha

ಸಾರಾಂಶ

ಬನಶ್ರೀ ಲಾಂಜ್‌ನವರು ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ಮಾಡಿ ಸಾಕಷ್ಟು ಜನ ಬ್ಯಾಡ್ಮಿಂಟನ್ ಆಡಲು ಕೋರ್ಟ್ ಒದಗಿಸಿದ್ದಾರೆ ಹಾಗಾಗಿ ಹೆಚ್ಚು ಜನ ಯುವಕರು ಆಸಕ್ತಿಯಿಂದ ಆಟ ಆಡುತ್ತಿದ್ದಾರೆ

ನರಗುಂದ: ಬ್ಯಾಡ್ಮಿಂಟನ್ ಕೇವಲ ನಗರ ಪ್ರದೇಶದಲ್ಲಿ ಆಡುವ ಕ್ರೀಡೆ ಅಲ್ಲ, ಗ್ರಾಮೀಣ ಪ್ರದೇಶದಲ್ಲೂ ಕೂಡ ಮಕ್ಕಳು ಚೆನ್ನಾಗಿ ಆಡುತ್ತಿದ್ದಾರೆ ಎಂದು ಭೈರನಹಟ್ಟಿ-ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮದ ಬನಶ್ರೀ ಲಾನ್ಸ್ ಹಾಗೂ ಬ್ಯಾಡ್ಮಿಂಟನ್ ಗೆಳೆಯರ ಬಳಗದವರು ಗಣೀಶ ಚತುರ್ಥಿ ಅಂಗವಾಗಿ ಏರ್ಪಡಿಸಿದ ರಾಜ್ಯ ಮಟ್ಟದ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಕ್ರೀಡಾಂಗಣ ಹಾಗೂ ಕೋಚ್‌ ಲಭ್ಯವಾದರೆ ಭಾರತ ದೇಶದಲ್ಲಿ ಅತಿ ಹೆಚ್ಚು ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಹೊರಹೊಮ್ಮುತ್ತಾರೆ ಎಂದರು.

ಯಚ್ಚರಮಹಾಸ್ವಾಮಿಗಳ ಗವಿಮಠದ ಅಭಿನವ ಯಚ್ಚರ ಶ್ರೀಗಳು ಮಾತನಾಡಿ ಬ್ಯಾಡ್ಮಿಂಟನ್ ಆಟ ಮನುಷ್ಯನ ದೇಹದ ಸರ್ವ ಅಂಗಗಳಿಗೂ ಚೆನ್ನಾಗಿ ವ್ಯಾಯಾಮವನ್ನು ಒದಗಿಸುತ್ತದೆ ಹಾಗಾಗಿ ಇದು ವ್ಯಾಯಾಮದ ಜೊತೆಗೆ ಸಂತೋಷವನ್ನು ಕೂಡ ನೀಡುತ್ತದೆ ಎಂದರು.

ವೇದಮೂರ್ತಿ ವೀರಯ್ಯ ಶಾಸ್ತ್ರಿಗಳು ಮಾತನಾಡಿ, ಬನಶ್ರೀ ಲಾಂಜ್‌ನವರು ಗ್ರಾಮದಲ್ಲಿ ಒಳಾಂಗಣ ಕ್ರೀಡಾಂಗಣ ಮಾಡಿ ಸಾಕಷ್ಟು ಜನ ಬ್ಯಾಡ್ಮಿಂಟನ್ ಆಡಲು ಕೋರ್ಟ್ ಒದಗಿಸಿದ್ದಾರೆ ಹಾಗಾಗಿ ಹೆಚ್ಚು ಜನ ಯುವಕರು ಆಸಕ್ತಿಯಿಂದ ಆಟ ಆಡುತ್ತಿದ್ದಾರೆ ಎಂದರು.

ಮಾಜಿ ತಾಪಂ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಮೊಟ್ಟ ಮೊದಲು ಗ್ರಾಮದಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಗಳು ಪ್ರಾರಂಭವಾಗಿದ್ದು, ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚು ಜನ ಕ್ರೀಡಾಪಟುಗಳು ಗ್ರಾಮದಿಂದ ತಯಾರಾಗಲಿ ಎಂದು ಶುಭ ಹಾರೈಸಿದರು.

ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ನರಗುಂದದ ಪ್ರವೀಣ ಹಾಗೂ ಉಜೆರ, ದ್ವಿತೀಯ ಸ್ಥಾನವನ್ನು ಪ್ರಜ್ವಲ ಹಾಗೂ ಕುಬೇರ್, ತೃತೀಯ ಸ್ಥಾನವನ್ನು ಶ್ರೇಯಸ ಹಾಗೂ ರಾಜು ಪಡೆದುಕೊಂಡರು

ಕಾರ್ಯಕ್ರಮದಲ್ಲಿ ವರ್ತಕರಾದ ಲಾಲಸಾಬ ಅರಗಂಜಿ, ಬನಶ್ರೀ ಲಾನ್ಸ ಮಾಲೀಕರಾದ ದೇವರಾಜ ಗಾಣಿಗೇರ, ದೈಹಿಕ ಶಿಕ್ಷಕ ಬೆಳಕೊಪ್ಪ, ಬ್ಯಾಡ್ಮಿಂಟನ್ ಗೆಳೆಯರ ಬಳಗದ ಸರ್ವ ಸದಸ್ಯರು, ವೀರಣ್ಣ ಕತ್ತಿಕೈ, ನಿರಂಜನ ಕಲಹಾಳ, ಸುರೇಶ ಬನ್ನಿಗಿಡದ, ಮನೋಜ, ಇದ್ದರು.

ಸುನೀಲ ತಿಮ್ಮಾಪೂರ ಸ್ವಾಗತಿಸಿದರು, ಸುನೀಲ ಕಳಸದ ನಿರೂಪಿಸಿದರು. ಶಿಕ್ಷಕ ಕಣವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ತಾರತಮ್ಯ ಆರೋಪ, ರೈತರ ಪ್ರತಿಭಟನೆ
ಪಕ್ಷದ ಸಂಘಟನೆ ತಳಮಟ್ಟದಿಂದ ಬಲಪಡಿಸಿ: ಜಿ.ಟಿ. ನಾಯ್ಕ