ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿವೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ರು. 631 ಕೋಟಿ ಹಣ ಮಹಿಳೆಯರ ಕೈಗೆ ತಲುಪುವ ಕೆಲಸವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ರಿಕವರಿ ಯೋಜನಾಧಿಕಾರಿ ಆನಂದ ಕೆ. ಮಾತನಾಡಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ಮಂಜೂರಾತಿ ಪತ್ರ ವಿತರಿಸಿದರು. ಪ್ರಗತಿಬಂಧು ಸ್ವಸಹಾಯ ಸಂಘದ ವಲಯ ಅಧ್ಯಕ್ಷ ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸತೀಶ್ ನಾÊಕ್, ಮಾಜಿ ಅಧ್ಯಕ್ಷ ಹಾಗೂ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಬಪ್ಪಳಿಗೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಪರ್ಲಡ್ಕ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಗೋಪಾಲ ಆಚಾರ್ಯ, ಸಾಮೆತ್ತಡ್ಕ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಅಹಲ್ಯ ಕೆ. ಹಾಜರಿದ್ದರು.ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಪುಸ್ತಕ ಹಸ್ತಾಂತರಿಸಲಾಯಿತು. ಬಪ್ಪಳಿಗೆ ಒಕ್ಕೂಟದ ನೂತನ ಅಧ್ಯಕ್ಷ ಕೆ. ಜಯರಾಮ ಕುಲಾಲ್, ಉಪಾಧ್ಯಕ್ಷ ಗಿರೀಶ್ ನಾಯ್ಕ್ ಸೊರಕೆ, ಕಾರ್ಯದರ್ಶಿ ಸಿಂಧೂರ ಕೆ., ಜೊತೆ ಕಾರ್ಯದರ್ಶಿ ನಳಿನಾಕ್ಷಿ ಕರ್ಕುಂಜ, ಕೋಶಾಧಿಕಾರಿ ವನಿತಾ ಆನಂದ್, ಪರ್ಲಡ್ಕ ಒಕ್ಕೂಟದ ನೂತನ ಅಧ್ಯಕ್ಷ ಪ್ರಸನ್ನ ಕುಮಾರ್, ಉಪಾಧ್ಯಕ್ಷೆ ಪವಿತ್ರ, ಕಾರ್ಯದರ್ಶಿ ರೇಷ್ಮಾ, ಜೊತೆ ಕಾರ್ಯದರ್ಶಿ ಚಂದನ, ಕೋಶಾಧಿಕಾರಿ ಪ್ರಶಾಂತ್, ಸಾಮೆತ್ತಡ್ಕ ಒಕ್ಕೂಟದ ನೂತನ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷ ಶುಭಲತಾ, ಕಾರ್ಯದರ್ಶಿ ಲತಾ, ಜೊತೆ ಕಾರ್ಯದರ್ಶಿ ಪುಷ್ಪಾವತಿ, ಕೋಶಾಧಿಕಾರಿ ಸುಪ್ರಿಯ ಅವರಿಗೆ ಪದ ಪ್ರದಾನ ಮಾಡಲಾಯಿತು.
ಸಾಮೆತ್ತಡ್ಕ ಒಕ್ಕೂಟದ ಕಾರ್ಯದರ್ಶಿ ನಳಿನಾಕ್ಷಿ ವರದಿ ವಾಚಿಸಿದರು. ಅಪೂರ್ವ ಬಪ್ಪಳಿಗೆ ಪ್ರಾರ್ಥಿಸಿದರು. ಪರ್ಲಡ್ಕ ಒಕ್ಕೂಟದ ನೂತನ ಅಧ್ಯಕ್ಷ ಪ್ರಸನ್ನ ಕುಮಾರ್ ಸ್ವಾಗತಿಸಿ, ಉಪಾಧ್ಯಕ್ಷೆ ಪವಿತ್ರ ಸಾಮೆತ್ತಡ್ಕ ವಂದಿಸಿದರು. ಬಪ್ಪಳಿಗೆ ಒಕ್ಕೂಟದ ಉಪಾಧ್ಯಕ್ಷ ಗಿರೀಶ್ ನಾಯ್ಕ್ ನಿರ್ವಹಿಸಿದರು.