ಗ್ರಾಮೀಣರು ಶಿಕ್ಷಣಕ್ಕೆ ಆದ್ಯತೆ ನೀಡಲಿ: ಶಾಸಕ ಶಿವಣ್ಣನವರ

KannadaprabhaNewsNetwork |  
Published : Aug 30, 2025, 01:01 AM IST
ಮ | Kannada Prabha

ಸಾರಾಂಶ

ಸಾಮಾಜಿಕ ಪ್ರಗತಿ, ಬಡತನ ನಿವಾರಣೆ ಸೇರಿದಂತೆ ಶಿಕ್ಷಣವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಸಮಸ್ಯೆಗಳ ಚಕ್ರದಿಂದ ಹಳ್ಳಿಗಳು ಮುಕ್ತವಾಗಲು ಸಾಧ್ಯವಾಗುತ್ತದೆ.

ಬ್ಯಾಡಗಿ: ಗ್ರಾಮೀಣ ಪ್ರದೇಶದ ಜನರು ಶೈಕ್ಷಣಿಕವಾಗಿ ಅಭಿವೃದ್ಧಿಯಾಗದ ಹೊರತು ದೇಶದ ಸಮೃದ್ಧ ಭವಿಷ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಪಾಲಕರ ನಿರ್ಲಕ್ಷ್ಯ ಮನೋಭಾವದಿಂದ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ. ಯಾವುದೇ ವೃತ್ತಿಗೆ ಹೊಂದಿಕೊಳ್ಳುವ ಮುನ್ನವೇ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪಾಲಕರು ಆಸಕ್ತಿ ವಹಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಸಲಹೆ ನೀಡಿದರು.

ತಾಲೂಕಿನ ಬಿಸಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ದುರಸ್ತಿ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಪ್ರಗತಿ, ಬಡತನ ನಿವಾರಣೆ ಸೇರಿದಂತೆ ಶಿಕ್ಷಣವು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಸಮಸ್ಯೆಗಳ ಚಕ್ರದಿಂದ ಹಳ್ಳಿಗಳು ಮುಕ್ತವಾಗಲು ಸಾಧ್ಯವಾಗುತ್ತದೆ. ಆದರೆ ಕೃಷಿಕರು ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಪ್ರದೇಶದ ಜನರು ಅತಿ ಚಿಕ್ಕಚಿಕ್ಕ ಕಾರಣಗಳಿಗೆ ಪರಿಹಾರ ಕಂಡುಕೊಳ್ಳದೇ ಮಕ್ಕಳನ್ನು ಶಿಕ್ಷಣದಿಂದ ವಿಮುಖರಾಗುವಂತೆ ಮಾಡುತ್ತಿದ್ದಾರೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಶಂಭಣ್ಣ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಚಿನ್ನಪ್ಪ ಹೊಸ್ಮನಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನಬಸಪ್ಪ ಹುಲ್ಲತ್ತಿ, ಮುಖಂಡರಾದ ದಾನಪ್ಪ ಚೂರಿ, ಬೀರಪ್ಪ ಬಣಕಾರ, ಶಂಕರಗೌಡ ಪಾಟೀಲ, ದಾನಪ್ಪ ಹರಿಹರ, ಡಿ.ಎಚ್. ಬುಡ್ಡನಗೌಡ್ರ, ವಿಜಯ ಯಲಿಗಾರ, ವಾಸು ಬೆಳಕೇರಿ, ಸಿದ್ದನಗೌಡ ಪಾಟೀಲ, ದುಂಡೆಪ್ಪ ಜ್ಯೋತಿ, ಹೊನ್ನಪ್ಪ ಕೊತನೇರ, ನೀಲಪ್ಪ ಗಟ್ಟಿಮನಿ, ಬಿಇಒ ಎಸ್.ಜಿ. ಕೋಟಿ, ಕಾಲೇಜು ಪ್ರಾಚಾರ್ಯ ರಾಜಶೇಖರಮೂರ್ತಿ, ಪಿಡಿಒ ಶಿವಾನಂದ ಕುಬಟೂರ, ಪ್ರೌಢಶಾಲೆ ಮುಖ್ಯಶಿಕ್ಷಕ ಜೀವರಾಜ ಛತ್ರದ, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಐ.ಬಿ. ಜ್ಯೋತಿ, ಶಿಕ್ಷಕರಾದ ಎಸ್.ಆರ್. ಬಡ್ಡಿ, ಅಂಬಿಕಾ ಪವಾರ, ವೀರಮ್ಮ ಮಠದ, ಎ.ಸಿ. ರೂಪಾ, ಮಂಜುಳ ಸೆದಿಯಣ್ಣನವರ, ಹೇಮಲತಾ ಕೊರವರ ಇತರರಿದ್ದರು. ಶಂಕರ ಕಿಚಡಿ ಸ್ವಾಗತಿಸಿದರು. ವಿಜಯ ಶಿಡಗನಾಳ ನಿರೂಪಿಸಿದರು. ರಾಜು ದೇವಗಿರಿಮಠ ವಂದಿಸಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ