ಎಸ್.ಕೆ. ಗೋಲ್ಡ್‌ಸ್ಮಿತ್‌ ಇಂಡಸ್ಟ್ರಿಯಲ್‌ ಸೊಸೈಟಿ ಗ್ರಾಹಕರ ಸಮಾವೇಶ

KannadaprabhaNewsNetwork |  
Published : Nov 02, 2025, 04:00 AM IST
ಸ್.ಕೆ. ಗೋಲ್ಡ್‌ಸ್ಮಿತ್‌ ಇಂಡಸ್ಟ್ರಿಯಲ್‌ ಕೋ. ಆಪರೇಟಿವ್ ಸೊಸೈಟಿ ಸದಸ್ಯ-ಗ್ರಾಹಕರ ಸಮಾವೇಶ ನಡೆಯಿತು. | Kannada Prabha

ಸಾರಾಂಶ

ಎಸ್.ಕೆ. ಗೋಲ್ಡ್‌ಸ್ಮಿತ್‌ ಇಂಡಸ್ಟ್ರಿಯಲ್‌ ಕೋ. ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರಮಹೋತ್ಸವದ ಪ್ರಯುಕ್ತ ಕೋಟೇಶ್ವರ ಮತ್ತು ಕುಂದಾಪುರ ಶಾಖೆಯ ಸದಸ್ಯ-ಗ್ರಾಹಕರ ಸಮಾವೇಶವು ಅ.೨೫ರಂದು ಕೋಟೇಶ್ವರ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಎಸ್.ಕೆ. ಗೋಲ್ಡ್‌ಸ್ಮಿತ್‌ ಇಂಡಸ್ಟ್ರಿಯಲ್‌ ಕೋ. ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ವಜ್ರಮಹೋತ್ಸವದ ಪ್ರಯುಕ್ತ ಕೋಟೇಶ್ವರ ಮತ್ತು ಕುಂದಾಪುರ ಶಾಖೆಯ ಸದಸ್ಯ-ಗ್ರಾಹಕರ ಸಮಾವೇಶವು ಅ.೨೫ರಂದು ಕೋಟೇಶ್ವರ ಶ್ರೀ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ, ಸದಸ್ಯರು ಸಂಪಾದನೆ ಮಾಡುವುದು ಎಷ್ಟು ಮುಖ್ಯವೋ ಉಳಿತಾಯ ಕೂಡ ಅಷ್ಟೇ ಮುಖ್ಯ. ತಮ್ಮ ಮಕ್ಕಳಿಗೆ ಈಗಿನಿಂದಲೇ ಉಳಿತಾಯ ಮಾಡುವ ಪ್ರಜ್ಞೆ ಬೆಳೆಸಬೇಕೆಂದೂ, ಉಳಿತಾಯದ ಹಣವೇ ಕಷ್ಟ ಕಾಲಕ್ಕೆ ಬರುವುದಾಗಿ ತಿಳಿಸಿದರು.

ಸಂಘದ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ಸಂಸ್ಥೆಯ ಹುಟ್ಟು ಬೆಳವಣಿಗೆಯ ಬಗ್ಗೆ ತಿಳಿಸಿದರು.ರಾಷ್ಟ್ರಪ್ರಶಸ್ತಿ ವಿಜೇತ ರಥಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ಉಡುಪಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಸದಾನಂದ ನಾಯ್ಕ್ ಮಾತನಾಡಿ, ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದರು.

ಅತಿಥಿಗಳಾಗಿ ಬಾರ್ಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ವಿ. ಶ್ರೀಧರ್ ಆಚಾರ್ಯ, ವಿಶ್ವಕರ್ಮ ಬ್ರಾಹ್ಮಣ ಯುವಕ ಸಮಾಜ ಸೇವಾ ಸಂಘ ಕೋಟೇಶ್ವರದ ಅಧ್ಯಕ್ಷ ಟಿ. ಸತ್ಯನಾರಾಯಣ ಆಚಾರ್ಯ, ವಿರಾಡ್ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಂಘ ಚೇಂಪಿ ಇದರ ಅಧ್ಯಕ್ಷ ಎಂ. ಸುಬ್ರಾಯ ಆಚಾರ್ಯ, ನಿವೃತ್ತ ಶಿಕ್ಷಕಿ ಸೂರ್ಯಕಾಂತಿ, ವೈದ್ಯ ಡಾ. ಅಶೋಕ್ ಎಂ.ಡಿ., ಹಿರಿಯ ಅಂಚೆಪಾಲಕರಾದ ಸುರೇಖಾ ಉಪಸ್ಥಿತರಿದ್ದರು.

ಎರಡೂ ಶಾಖೆಯ ವತಿಯಿಂದ ೧೨ ಸದಸ್ಯ ಗ್ರಾಹಕರನ್ನು ಗೌರವಿಸಲಾಯಿತು. ಸಮಾವೇಶದ ಅಂಗವಾಗಿ ಅದೃಷ್ಟ ಕೂಪನ್ ಮೂಲಕ ೫ ಜನ ಗ್ರಾಹಕರಿಗೆ ಅದೃಷ್ಟ ಬಹುಮಾನ ನೀಡಲಾಯಿತು.ಕೋಟೇಶ್ವರ ಶಾಖಾ ವ್ಯವಸ್ಥಾಪಕಿ ಪೂರ್ಣಿಮಾ ಎಸ್. ಆಚಾರ್ಯ ಸ್ವಾಗತಿಸಿದರು. ಕುಂದಾಪುರ ಶಾಖಾ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಾಕ್ಷ ಎ. ಆನಂದ ಆಚಾರ್ಯ, ನಿರ್ದೇಶಕರಾದ ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ. ಜಯ ಆಚಾರ್, ಕೆ. ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್. ಪತ್ತಾರ್, ರೋಹಿಣಿ ಎಂ.ಪಿ., ರಮೇಶ್ ರಾವ್ ಯು., ಚಂದ್ರಶೇಖರ್ ಎ.ಎಸ್. ಹಾಗೂ ಶಾಖೆಗಳ ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಉಪಸ್ಥಿತರಿದ್ದರು. ಅಂಬಿಕಾ ರಾಜ್ ಗೋಪಾಲ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌