ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಈ ಹಿಂದಿನ ಅಧ್ಯಕ್ಷ ಸಿ.ಚನ್ನೇಗೌಡರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಎಸ್.ಮರಿಸ್ವಾಮಿಗೌಡ ರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಸಂಘದ ಮುಖ್ಯ ನಿರ್ವಹಣಾಧಿಕಾರಿ ಮಧುಸೂದನ್ ಘೋಷಣೆ ಮಾಡಿದರು.
ನಂತರ ನೂತನ ಅಧ್ಯಕ್ಷ ಎಸ್.ಮರಿಸ್ವಾಮಿಗೌಡ ಮಾತನಾಡಿ, ಪಕ್ಷಾತೀತವಾಗಿ ಬೆಂಬಲ ನೀಡಿ ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ಸಂಘದ ನಿರ್ದೇಶರು, ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇನೆ ತಿಳಿಸಿದರು.ಸಂಘದಲ್ಲಿ ಷೇರು ಹೆಚ್ಚಿಸುವ ಜತೆಗೆ ರೈತರಿಗೆ ಸೂಕ್ತ ಸಮಯದಲ್ಲಿ ಅಗತ್ಯ ರಸಗೊಬ್ಬರಗಳ ಪೂರೈಕೆ, ಸರ್ಕಾರ ವತಿಯಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ಸಿಗುವಂತೆ ಶ್ರಮಿಸುತ್ತೇನೆ ಎಂದರು.
ಈ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಕರಡಕೆರೆ ಹನುಮಂತೇಗೌಡ, ಸದಸ್ಯ ಸುರೇಂದ್ರ ಸಂಘದ ಉಪಾಧ್ಯಕ್ಷೆ ಟಿ.ಪದ್ಮಮ್ಮ, ಮುಖಂಡರಾದ ನಾಗೇಶ್, ಜೆಸಿಬಿ ಶಿವಲಿಂಗ, ಪುಟ್ಟಸ್ವಾಮಿ, ಶೆಟ್ಟಹಳ್ಳಿ ರಘು, ಸಿದ್ದರಾಜು, ಎಸ್.ಬಿ.ಮನು, ಗಿರೀಶ್, ಕರಡಕೆರೆ ಮನು, ನಿರ್ದೇಶಕರಾದ ಸಿ.ಚನ್ನೇಗೌಡ, ಎಸ್.ಶೇಖರ್, ಬೋಮ್ಮೇಗೌಡ, ಎ.ಎಚ್.ಶಿವಲಿಂಗೇಗೌಡ, ಎಸ್.ಬಿ. ನಂಜುಡೇಗೌಡ, ಬಿ.ಅಂದಾನಿಗೌಡ, ಎಸ್.ಎಚ್. ತಿಮ್ಮರಾಜು, ಕೆ.ಎಚ್.ಇಂದಿರಾ, ಕೆಂಪಮ್ಮ, ಟಿ.ಎಸ್.ಚರಣ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3ರ ಉಪಕಲಂ 3(ಎ) ಮತ್ತು 3(ಎಂ) ರನ್ವಯ ಹಾಗೂ ಕಲಂ 3(4)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರದ ಮುಂದಿನ ಆದೇಶದವರೆಗೆ ಮುಡಾ ಅಧ್ಯಕ್ಷ ಸ್ಥಾನಕ್ಕೆ ಬಿ.ಪಿ.ಪ್ರಕಾಶ್, ನಾಮನಿರ್ದೇಶಕ ಸ್ಥಾನಗಳಿಗೆ ಇದ್ರೀಸ್‌ಖಾನ್, ಕೆ.ಜೆ.ಕಾರ್ತಿಕ್, ಎನ್.ಎಸ್.ಮಹೇಶ್, ಕಮಲಮ್ಮ ಅವರನ್ನು ನೇಮಿಸಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಆದೇಶ ಹೊರಡಿಸಿದ್ದಾರೆ.