ನಾಪೋಕ್ಲು: ಇಲ್ಲಿಯ ಜನರಲ್ ತಿಮ್ಮಯ್ಯ ಆಟದ ಮೈದಾನ ಚರಿಯ ಪರಂಬುನಲ್ಲಿ ನಡೆದ ವಲಯ ಮಟ್ಟದ ಕಾಲ್ಚೆಂಡು ಕ್ರೀಡಾಕೂಟದಲ್ಲಿ ಕುಂಜಿಲ ಆಕ್ಸ್ಫರ್ಡ್ ಶಾಲೆಯನ್ನು ಫೈನಲ್‌ನಲ್ಲಿ ಮೂರು ಸೊನ್ನೆ ಅಂತರದಲ್ಲಿ ಗೋಲು ಬಾರಿಸಿ ಪಂದ್ಯವನ್ನು ಗೆದ್ದು ಬೇತು ಗ್ರಾಮದ ಸೆಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದಿಂದ ಶಹಿಂ ಎಂ ಎಸ್ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು, ರೋಹನ್ ರೈ ಬಿ ಆರ್ ಹತ್ತನೇ ತರಗತಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಿಂದ ಜಿಯಾ ಫಾತಿಮಾ 6ನೇ ತರಗತಿ ವಿದ್ಯಾರ್ಥಿಯು ಚದುರಂಗದಾಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.