ಕನ್ನಡಪ್ರಭ ವಾರ್ತೆ ಆಳಂದ
ಔರಾದ ಸದಾಶಿವಗಡ ಹೆದ್ದಾರಿ ಮಧ್ಯ ಬರುವ ತಾಲೂಕಿನ ಮಾಡಿಯಾಳ ಸಮೀಪದ ಕುಲಾಲಿ ಸ್ಟೇಷನ್ ಬಳಿ ರೈಲ್ವೇ ಹಳ್ಳಿಗೆ ಇರುವ ಆಂತರೀಕ ಸೇತುವೆ ವಿಸ್ತಾರ ಕಾರ್ಯ ನಡೆಯದೆ, ಎರಡೂ ತಾಲೂಕಿನ ಸಂಪರ್ಕ ಒದಗಿಸುವ ವಾಹನ ಸಂಚಾರಕ್ಕೆ ಪರದಾಟ ಮುಂದುವರಿದಿದೆ.ಹಲವು ದಶಕಗಳಿಂದಲೂ ಆಳಂದ ಮತ್ತು ಅಫಜಲ್ಪುರ ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಅಂಡರ್ ಬ್ರೀಜ್ ಕಾಮಗಾರಿ ನಡೆಯದೆ ಇರುವುದು ವಾಣಿಜ್ಯ ವ್ಯಾಪಾರ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗಿ ದೂರದ ಮಾರ್ಗದಿಂದ ವಾಹನ ಸಂಚಾರ ಕೈಗೊಂಡು ಜನ ಪ್ರಯಾಣಿಸಿ ತೊಂದರೆ ಎದುರಿಸುತ್ತಿದ್ದಾರೆ.
ಮಾಡಿಯಾಳ ಸಮೀಪದ ಕುಲಾಲಿ ರೈಲು ಹಳಿ ಬಳಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಸೇತುವೆ ನಿರ್ಮಿಸದೇ ಇರುವುದರಿಂದ ಸಾವಿರಾರು ಕೋಟಿ ವೆಚ್ಚ ಮಾಡಿ ನಿರ್ಮಾಣ ಮಾಡಿದ ರಾಜ್ಯ ಹೆದ್ದಾರಿ ಸರ್ವಾಜನಿಕ ಸಂಚಾರಕ್ಕೆ ರೈಲು ಹಳಿ ಅಡ್ಡಿಯಾಗಿ ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಅಳಲುತೋಡಿಕೊಂಡಿದ್ದಾರೆ.ಹೆದ್ದಾರಿಗೆ ಅಡ್ಡಲಾದ ರೈಲು ಹಳಿ: ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ ನಿರ್ಮಿಸಿ ದಶಕ ಕಳೆದರೂ ಸಾರ್ವಜನಿಕರಿಗಿಲ್ಲ ಸಂಚಾರಿಸುವ ಭಾಗ್ಯ. ಆದರೆ, ಈ ಹೆದ್ದಾರಿಯೂ ಆಳಂದ ತಾಲೂಕಿನ ಕಿಣಿಸುಲ್ತಾನ, ಆಳಂದ, ಜಿಡಗಾ, ಕೌಲಗಾ, ಭೂಸನೂರ, ದೇವಂತಗಿ, ಮಾಡಿಯಾಳದಿಂದ ಅಪಜಲ್ಪುರ ತಾಲೂಕಿನ ಕುಲಾಲಿ ರೇವೂರ, ಚಿಂಚೋಳಿ, ಮಲ್ಲಾಬಾದ ಗ್ರಾಮಗಳ ಮೂಲಕ ಹಾದು ಹೋಗಲಿದೆ. ಕುಲಾಲಿ ರೈಲು ಹಳಿ ಬಳಿ ಓವರ್ ಬ್ರೀಜ್ ಅಥವಾ ಅಂಡರ್ ಬ್ರೀಜ್ ವಿಸ್ತರಿಸಿ ನಿರ್ಮಿಸಿದರೆ ಆಳಂದ-ಅಪಜಲ್ಪುರ ತಾಲೂಕುಗಳ ವಾಹನಗಳ ಸಂಚಾರಕ್ಕೆ ಸುಲಭವಾಗಲಿದೆ. ಈ ಕಾಮಾಗಾರಿ ತುರ್ತಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಮಾರ್ಗದಿಂದಲೇ ಮಹಾರಾಷ್ಟ್ರದ ಉಮರ್ಗಾ, ಮುರುಮ, ಲಾತ್ತೂರ ಮತ್ತು ಬಿಜಾಪೂರ, ಬೆಳಗಾವಿ, ಹುಬ್ಬಳಿ, ದಾರವಾಡ ಹಾಗೂ ಸದಾಶಿವಗಡ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತದೆ. ಪ್ರಯಾಣಿಕರ ಓಡಾಟಕ್ಕೂ ಹಾಗೂ ರೈತರು ವ್ಯಾಪಾರ ವಹಿವಾಟುಗಳ ಜತೆಗೆ ತಮ್ಮಗೆ ಅನೂಕುಲವಾದ ಕಡೆ ದವಸಧಾನ್ಯಗಳನ್ನು ಸಾಗಾಣಿಕೆ ಸಂಬಂಧಿತರು ಅನುಕೂಲ ಕಲ್ಪಿಸಬೇಕು ಎನ್ನುತ್ತಾರೆ ಜನರು.ಅಂಡರ್ ಸೇತುವೆ ವಿಸ್ತರಿಸಿ: ಕುಲಾಲಿ ಗ್ರಾಮದ ರೈಲು ಹಳಿ ಬಳಿ ಸುಮಾರು ವರ್ಷಗಳ ಹಿಂದೆ ನಿರ್ಮಿಸಿದ ಹಳೆಯದಾದ ಚಿಕ್ಕ ಕೆಳ ಸೇತುವೆಯಿದೆ. ಬೇಸಿಗೆಯಲ್ಲಿ ದ್ವೀಚಕ್ರ, ಜೀಪ, ಟಂಟಂ ವಾಹನಗಳು ಮಾತ್ರ ಹೋಗುತ್ತವೆ. ಆದರೆ, ಮಳೆಗಾಲ ಬಂದರೆ ಸೇತುವೆ ಸಂಪೂರ್ಣ ಕೇಸರುಮಯವಾಗಿ ವಾಹನಗಳು ಕೇಸರಿನಲ್ಲಿ ಸಿಲುಕಿ ಒದ್ದಾಡುತ್ತವೆ. ಹೀಗಾಗಿ ಆರು ತಿಂಗಳು ಕಾಲ ಸಾರ್ವಜನಿಕರು ಬೇರೆ ಮಾರ್ಗಗಳ ಮೂಲಕ ಹಾದು ಹೋಗುತ್ತಾರೆ. ಆದರೆ, ಸೇತುವೆ ಚಿಕ್ಕದಾಗಿದ್ದರಿಂದ ದೊಡ್ಡ ಗ್ರಾತ್ರದ ಲಾರಿ, ಕಬ್ಬಿನ ಟ್ರ್ಯಾಕ್ಟರ್, ಬಸ್, ಟ್ರಕ್ ವಾಹನಗಳು ಸಂಚಾರಕ್ಕೆ ಅವಕಾಶವಿಲ್ಲವಾಗಿದೆ.
ಹೀಗಾಗಿ ಈಗಲಾದರೂ ಸಂಬಂಧಿತರು ಎಚ್ಚೇತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಕುಲಾಲಿ ಬಳಿ ಕೇಳ ಸುತುವೇ ನಿರ್ಮಿಸವರೇ ಎಂಬುದನ್ನು ಜನರು ಕಾದು ನೋಡವಂತಾಗಿದೆ.ಮಳೇಗಾಲ ಬಂದರೆ ನಮ್ಮ ವ್ಯಾಪಾರ, ಕೃಷಿ ಚಟುವಟಿಗೆಳು ಸ್ಥಗಿತಗೊಳ್ಳತ್ತವೆ. ವಾಹನಗಳನ್ನು ಸಾಗಿಸಲು ಸೂಕ್ತವಾದ ರಸ್ತೆ ಇಲ್ಲ. ಅಧಿಕಾರಿ, ಜನಪ್ರತಿನೀದಿಗಳು ಮುಂದಾಗಿ ಕುಲಾಲಿ ಬಳಿ ಓವರ್ ಬ್ರೀಜ್ ನಿರ್ಮಿಸಿದರೆ ಅನುಕೂಲವಾಗುತ್ತದೆ.- ಗುಂಡಪ್ಪ ಕುಲಾಲಿ, ಹಣ್ಣಿನ ವ್ಯಾಪಾರಿ ಮಾಡಿಯಾಳ
--ಈ ಭಾಗದ ಬೀದರ್, ಕಲಬುರಗಿ ಸಂಸದರ ವ್ಯಾಪ್ತಿಯಲ್ಲಿರುವ ಈ ರೈಲು ಹಳಿ ಸುತುವೆ ನಿರ್ಮಾಣ ಕಾಮಗಾರಿ ಬರುವುದರಿಂದ ಆದಷ್ಟು ಬೇಗ ಸೇತುವೆ ಮಂಜೂರಾತಿ ಮಾಡಿಸಬೇಕು. ಇದರಿಂದ ರೈತರು ತಮ್ಮಗೆ ಅನುಕೂಲವಾದ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡಬಹುದು.
- ಸಂಗಣ್ಣಾ ಮುದ್ದಡಗಿ, ಮಾಜಿ ಗ್ರಾಪಂ ಅಧ್ಯಕ್ಷ ಮಾಡಿಯಾಳ.