ಭಾವೈಕ್ಯತೆಗೆ ಸಾಕ್ಷಿಯಾಗುತ್ತಿರುವ ಸದ್ಭಾವನಾ ಪಾದಯಾತ್ರೆ

KannadaprabhaNewsNetwork |  
Published : Dec 04, 2024, 12:35 AM IST
ಗಜೇಂದ್ರಗಡ ಮಾಲ್ದಾರ ಓಣಿಯಲ್ಲಿನ ಒಂಟಿ ಮಸೀದಿಯಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಮುಪ್ಪಿನ ಬಸವಲಿಂಗ ಶ್ರೀಗಳು ಪುಷ್ಪಾರ್ಚನೆ ಸಲ್ಲಿಸಿದರು. | Kannada Prabha

ಸಾರಾಂಶ

ಬಸವ ಪುರಾಣ ಪ್ರವಚನ ಆಲಿಸಲು ಸಾವಿರಾರು ಸರ್ವ ಧರ್ಮಿಯರು ಭಾಗವಹಿಸುತ್ತಿದ್ದು, ದಾಸೋಹಕ್ಕೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಜನತೆ ಬಸವ ಬುತ್ತಿಯನ್ನು ತರುತ್ತಿದ್ದಾರೆ

ಗಜೇಂದ್ರಗಡ: ಪಟ್ಟಣದ ಮಾಲ್ದಾರ್ ಓಣಿಯಲ್ಲಿನ ಒಂಟಿ ಮಸೀದಿಯಲ್ಲಿ ಹಾಲಕೆರೆ ಅನ್ನದಾನ ಸಂಸ್ಥಾನಮಠದ ಪೀಠಾಧ್ಯಕ್ಷ ಮುಪ್ಪಿನ ಬಸವಲಿಂಗ ಸ್ವಾಮೀಜಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಬಣಗಾರ ಓಣಿಯ ಜಡೇ ಶಂಕರಲಿಂಗ ದೇವಸ್ಥಾನ ಮುಂಭಾಗದಲ್ಲಿ ಶ್ರೀಗಳು ಧರ್ಮ ಸಭೆ ನಡೆಸಿದರು.

ಸ್ಥಳೀಯ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿ ನಡೆಯುತ್ತಿರುವ ಬಸವ ಪುರಾಣ ನಿಮಿತ್ತ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಶ್ರೀಗಳು ಹಮ್ಮಿಕೊಂಡಿರುವ ಸದ್ಭಾವನಾ ಪಾದಯಾತ್ರೆಯು ಭಾವೈಕ್ಯತೆಗೆ ಸಾಕ್ಷಿಯಾಗುತ್ತಿದ್ದು ಬಸವ ಪುರಾಣ ಪ್ರವಚನ ಆಲಿಸಲು ಸಾವಿರಾರು ಸರ್ವ ಧರ್ಮಿಯರು ಭಾಗವಹಿಸುತ್ತಿದ್ದು, ದಾಸೋಹಕ್ಕೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಜನತೆ ಬಸವ ಬುತ್ತಿಯನ್ನು ತರುತ್ತಿದ್ದಾರೆ.

ಪಟ್ಟಣದ ೧೩ನೇ ವಾರ್ಡ್‌ನ ಅನ್ನದಾನೇಶ್ವರ ಮಠದಿಂದ ಆರಂಭವಾದ ಸದ್ಭಾವನಾ ಪಾದಯಾತ್ರೆಯಲ್ಲಿ ವೀರಗಾಸೆ ಸಮ್ಮಳ ಹಾಗೂ ವಿವಿಧ ವಾಧ್ಯಗಳೊಂದಿಗೆ ಸಾಗಿದ ಮೆರವಣಿಗೆಯು ಚುರ್ಚಿಹಾಳರವರ ಮನೆ, ಕೆಜಿಎಂಎಸ್ ಶಾಲೆ, ಅಂದಪ್ಪ ಸಂಕನೂರ ಮನೆ ಮಾರ್ಗವಾಗಿ ಬಸವೇಶ್ವರ ವೃತ್ತದಿಂದ ಮೌಲಾಲಿ ಮಸೀದಿ, ಕಲಾಲ್‌ರ ಓಣಿ, ಟಗರಿಗಲ್ಲಿ ಮೂಲಕ ಅನ್ನದಾನೇಶ್ವರ ಮಠದಲ್ಲಿ ಧರ್ಮ ಸಭೆ ನಡೆಸಿದರು.

ಬಳಿಕ ಅನ್ನದಾನೇಶ್ವರ ಮಠದಿಂದ ಬಿ.ಎಂ. ಸಜ್ಜನರ ಮನೆಯ ಮಾರ್ಗವಾಗಿ ಮ್ಯಾಕಲ್, ಕನಕೇರಿ, ಕೊಳ್ಳಿಯವರ ಕತ್ರಿ ಮಾರ್ಗವಾಗಿ ಸುರೇಂದ್ರಸಾ ರಾಯಬಾಗಿ, ಒಂಟಳ್ಳಿವರ ಮಸೀದಿಯಿಂದ ಎನ್.ಟಿ. ಶಿವಳ್ಳಿ ಅವರ ಮನೆ, ಕುಂಬಾರ ಓಣಿಯಿಂದ ಬಣಗಾರ ಓಣಿಯಲ್ಲಿ ಶ್ರೀಗಳು ಸಭೆ ನಡೆಸಿ ಆರ್ಶೀವಚನ ನೀಡಿದರು. ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಶ್ರೀಧರಗಡ್ಡೆಯ ಮರಿಕೊಟ್ಟೂರು ದೇಶಿಕರು, ಸಂಗನಾಳದ ವಿಶ್ವೇಶ್ವರ ದೇವರು ಶ್ರೀಗಳೊಂದಿಗೆ ಸದ್ಭಾವನಾ ಪಾದಯಾತ್ರೆಯಲ್ಲಿದ್ದರು.

ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸದಸ್ಯರಾದ ಮುರ್ತುಜಾ ಡಾಲಾಯತ್, ರಾಜು ಸಾಂಗ್ಲೀಕರ, ವಿರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಅಮರೇಶ ಗಾಣಿಗೇರ, ಶೇಖರಪ್ಪ ಚನ್ನಿ, ಬಿ.ಎಂ. ಸಜ್ಜನ, ಅಂದಪ್ಪ ಸಂನಕೂರ, ಹೂವಾಜಿ ಚಂದುಕರ, ಅಮರೇಶ ಅರಳಿ, ಬಸವರಾಜ ಚನ್ನಿ, ಪ್ರಭು ಚವಡಿ, ರಾಜೇಸಾಬ್‌ ಮಾಲ್ದಾರ್, ಸಿದ್ದಲಿಂಗಪ್ಪ ಕನಕೇರಿ, ಸುನೀಲ್ ನಂದಿಹಾಳ, ಶೇಖಣ್ಣ ಇಟಗಿ, ಮಂಜುನಾಥ ಚನ್ನಿ, ಇಸ್ಮಿಲ್‌ಸಾಬ ಡಾಲಾಯಾತ್‌, ಸಂಗಪ್ಪ ಕುಂಬಾರ, ಮುತ್ತಣ್ಣ ಚಟ್ಟೇರ, ಶಾಮೀದ್ ಮಾಲ್ದಾರ್, ಖಾಸೀಮಸಾಬ್‌ ರಾಂಪೂರ, ಬಡೇಸಾಬ್‌ ಊಟಗೂರ, ಬಸಣ್ಣ ವಾಲಿ, ಶಂಕರ ಸವಣೂರ, ಸಿದ್ದಪ್ಪ ಚೋಳಿನ, ಸೇರಿದಂತೆ ಇತರರು ಇದ್ದರು.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌