ರಾಯಚೂರು: ರಾಜ್ಯ ಸಾರಿಗೆ ವಲಯದ ಸುಧಾರಣೆಯ ಜೊತೆಗೆ ಜನರಿಗೆ ಸುಸಜ್ಜಿತ, ಸುರಕ್ಷಿತ ಸೇವೆಯನ್ನು ಒದಗಿಸುವ ಧ್ಯೇಯವನ್ನು ಸರ್ಕಾರ ಹೊಂದಿದ್ದು, ಆ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸ್ಥಳೀಯ ಗ್ರಾಮೀಣ ಬಸ್ ಘಟಕ 1ರಲ್ಲಿ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ನಿಗಮದವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರದ 100 ಕೋಟಿ ರು.ಗಳ ಅನುದಾನದಲ್ಲಿ ಖರೀದಿಸಿದ 250 ಹೊಸ ಬಸ್‌ಗಳ ಲೋಕಾರ್ಪಣೆ, ರಾಯಚೂರು ಗ್ರಾಮೀಣ ಬಸ್ ಘಟಕ ಉದ್ಘಾಟನೆ ಹಾಗೂ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಸರ್ಕಾರದಿಂದ ಜಾರಿಗೆ ತರಲಾದ ಶಕ್ತಿ ಯೋಜನೆಯಿಂದ ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದ್ದು, ಶಕ್ತಿ ಯೋಜನೆಯು ಜಾರಿಯಾದ ನಂತರ ರಾಜ್ಯದ ಜನರ ಆರ್ಥಿಕತೆ ಸ್ಥಿರವಾಗಿದೆ. ಕೆಕೆಆರ್ ಟಿಸಿ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 9.05 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಕಳೆದ 2023 ಜೂ.11ರಿಂದ 2024 ಫೆ.29ರವರೆಗೆ ಒಟ್ಟು 23 ಕೋಟಿ ಮಹಿಳೆಯರು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಕರ್ನಾಟಕ ರಾಜ್ಯದ 4 ನಿಗಮ ಸೇರಿ 162.88 ಕೋಟಿ ಮಹಿಳೆಯರು ಪ್ರಯಾಣಿಸಿದ್ದು ಇದರ ಮೌಲ್ಯ 3894 ಕೋಟಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 23.89 ಕೊಟಿ ಮಹಿಳೆಯರು ಪ್ರಯಾಣಿಸಿದ್ದು ಒಟ್ಟು 789 ಕೋಟಿ ಮೌಲ್ಯವಾಗಿದೆ ಎಂದು ವಿವರಿಸಿದರು.ಶಕ್ತಿ ಯೋಜನೆಯು ಜಾರಿಯಾದ ನಂತರ ರಾಯಚೂರು ಜಿಲ್ಲೆಯಲ್ಲಿ 56 ಹೊಸ ಅನುಸೂಚಿಗಳನ್ನು ಪ್ರಾರಂಭಿಸಲಾಗಿದ್ದು, ಶಕ್ತಿ ಯೋಜನೆಯ ಮೊದಲು 1.40 ಲಕ್ಷ ಪ್ರಯಾಣಿಕರ ಸಂಖ್ಯೆಯಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2.14 ಕೋಟಿ ಜನರು ಶಕ್ತಿ ಯೋಜನೆಯ ನಂತರ ಬಸ್ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿದರು. ಸಮಾರಂಭದಲ್ಲಿ ಅಪಘಾತ ರಹಿತ ಚಾಲನೆಯನ್ನು ಮಾಡಿದ ಚಾಲಕರಿಗೆ ಬೆಳ್ಳಿ ಪದಕವನ್ನು ವಿತರಿಸಿ ಸನ್ಮಾನಿಸಲಾಯಿತು. ನಂತರ ಮೃತಾವಲಂಬಿತರಿಗೆ 10 ಲಕ್ಷ ರು. ಪರಿಹಾರವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಸೀರ್ ಆಹ್ಮದ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಎಚ್ ಸಂತೋಷ, ಸೇರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ,