ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಬಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಬಿ.ಸಾಗರ್ ಅವಿರೋಧವಾಗಿ ಆಯ್ಕೆಯಾದರು.ಕಾರ್ಯಕಾರಿಣಿ ಮಂಡಳಿ ಸದಸ್ಯರ ಮತ್ತು ರಿಟೇನಿಂಗ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಚುನಾವಣೆ ಆಯ್ಕೆಯಲ್ಲಿ ಒಟ್ಟು 9 ನಿರ್ದೇಶಕರಲ್ಲಿ ಬಿಜೆಪಿ ಬೆಂಬಲಿತ 4, ಕಾಂಗ್ರೆಸ್ ಬೆಂಬಲಿತ ೪ ಹಾಗೂ ಜೆಡಿಎಸ್ ಬೆಂಬಲಿತ ಓರ್ವ ನಿರ್ದೇಶಕರು ಇದ್ದರು.
ಅಧ್ಯಕ್ಷ ಸ್ಥಾನಕ್ಕೆ ಬಿ.ಸಾಗರ್ ಒಬ್ಬರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್ ಮಹೇಂದ್ರ ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಘೋಷಣೆ ಮಾಡಿದರು.ಈ ವೇಳೆ ಸಂಘದ ನಿರ್ದೇಶಕರಾದ ಮಹೇಶ, ಮಹಾಲಕ್ಷ್ಮಿ, ಬೆಟ್ಟಮ್ಮ, ಲೋಕೇಶ, ಆ.ಕಡಷ್ಣೇಗೌಡ, ಲೋಕೇಶ, ಬಿ.ಎಸ್. ಸೋಮಶೇಖರ್, ಚೆಲುವರಾಜು, ಕಾರ್ಯದರ್ಶಿ ಡಿ. ಮಂಜುನಾಥ್ ಹಾಜರಿದ್ದರು. ಗ್ರಾಮದ ಮುಖಂಡರುಗಳಾದ ಪಿಕಾರ್ಡ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ಬಿ. ಸಿ.ಕೃಷ್ಣೇಗೌಡ, ಬಿ.ಎನ್.ಪದ್ಮನಾಭ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ. ಬೆಟ್ಟೇಗೌಡ, ಮಾಜಿ ಸದಸ್ಯ ಬಿ.ಭಾಸ್ಕರ್, ಬನಹಳ್ಳಿ ವಿಎಸ್ಎಸ್ಎಲ್ ಅಧ್ಯಕ್ಷ ರಾಮಚಂದ್ರು , ಟಿ.ಕೃಷ್ಣೇಗೌಡ, ನಾಗರಾಜ, ಬಿ.ಕೃಷ್ಣೇಗೌಡ, ರಾಮೇಗೌಡ, ಶ್ರೀರಾಮ, ,ದಿಲೀಪ, ಪ್ರಕಾಶ, ಹೇಮಂತ್ ಕುಮಾರ್, ಪ್ರಕಾಶ, ಸಚಿನ್, ಕಷ್ಣಾನಂದ, ಶ್ರೀನಿವಾಸ್ ಸೇರಿ ಇತರರು ಇದ್ದರು.
ಸಹಕಾರ ಸಂಘದ ಅಧ್ಯಕ್ಷರಾಗಿ ಕೃಷ್ಣಪ್ಪ ಆಯ್ಕೆಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ವ್ಯವಸಾಯ ಕೃಷಿ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಚಂದಗಾಲು ಗ್ರಾಮದ ಎಸ್.ಕೃಷ್ಣ ಅವಿರೋಧವಾಗಿ ಆಯ್ಕೆಯಾದರು.ನಿಕಟ ಪೂರ್ವ ಅಧ್ಯಕ್ಷೆ ಚಿಕ್ಕತಾಯಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಒಟ್ಟು 11 ಮಂದಿ ನಿರ್ದೇಶಕರಲ್ಲಿ ಕೃಷ್ಣ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿಡಿಒ ರವಿ ಘೋಷಣೆ ಮಾಡಿದರು.ಈ ವೇಳೆ ಮಾಜಿ ಅಧ್ಯಕ್ಷ ಸಾಮಿಯಾನ ಪುಟ್ಟರಾಜು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟೆಗೌಡ, ಲೋಕೇಶ್, ಹಿರಿಯ ಮುಖಂಡರಾದ ರಾಮಚಂದ್ರ , ಶೇಖರ್ , ಸಂಘದ ನಿರ್ದೆಶಕರು, ಮೇಳಾಪುರ ಮತ್ತು ಚಂದಗಾಲು ಗ್ರಾಮಸ್ಥರು ಇದ್ದರು.