ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ ವಿವೇಕರು

KannadaprabhaNewsNetwork | Published : Jan 15, 2025 12:45 AM

ಸಾರಾಂಶ

ಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಮೂಢನಂಬಿಕೆ, ಅಂಧಶ್ರದ್ಧೆ, ಮೇಲು-ಕೀಳು, ಅನಕ್ಷರತೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಮಹಾಪುರುಷ ಸ್ವಾಮಿ ವಿವೇಕಾನಂದರು. ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ, ಮೂಢನಂಬಿಕೆಗಳ ದೇಶ ಎಂದು ಹೀಯಾಳಿಸಿದ ದೇಶಗಳಿಗೆ ಆಧ್ಯಾತ್ಮಿಕ ನಡೆಯ ಮೂಲಕ ಬೆಳಕನ್ನು ಚೆಲ್ಲಿ ದೇಶದ ಗೌರವವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಹೆಚ್ಚಿಸಿದವರು ವಿವೇಕರು ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಭಾರತವನ್ನು ಕಾಡುತ್ತಿರುವ ಅಸ್ಪೃಶ್ಯತೆ, ಮೂಢನಂಬಿಕೆ, ಅಂಧಶ್ರದ್ಧೆ, ಮೇಲು-ಕೀಳು, ಅನಕ್ಷರತೆ ಮುಂತಾದ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಮಹಾಪುರುಷ ಸ್ವಾಮಿ ವಿವೇಕಾನಂದರು. ಒಂದು ಕಾಲದಲ್ಲಿ ಭಾರತವನ್ನು ಹಾವಾಡಿಗರ ದೇಶ, ಮೂಢನಂಬಿಕೆಗಳ ದೇಶ ಎಂದು ಹೀಯಾಳಿಸಿದ ದೇಶಗಳಿಗೆ ಆಧ್ಯಾತ್ಮಿಕ ನಡೆಯ ಮೂಲಕ ಬೆಳಕನ್ನು ಚೆಲ್ಲಿ ದೇಶದ ಗೌರವವನ್ನು ಜಗತ್ತಿನಾದ್ಯಂತ ಪಸರಿಸಿದ ಕೀರ್ತಿ ಹೆಚ್ಚಿಸಿದವರು ವಿವೇಕರು ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.

ತಾಲೂಕಿನ ಕೆರೂರು ಸರ್ಕಾರಿ ಪಪೂ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೂ ಧರ್ಮದ ವೇದಾಂತ ಸಾರ, ಉಪನಿಷತ್, ಆಗಮಗಳು ಇಲ್ಲಿಯ ಶ್ರೇಷ್ಠ ಸಂಸ್ಕೃತಿಯ ಕುರಿತು ಜಗತ್ತಿಗೆ ಹೆಚ್ಚು ಪ್ರಖರವಾಗಿ ತಿಳಿಸಿಕೊಟ್ಟ ಮಹಾಪುರುಷ ಶ್ರೇಷ್ಠ ಸನ್ಯಾಸಿ ಸ್ವಾಮಿ ವಿವೇಕಾನಂದರು ಎಂದರು.ಜಗತ್ತಿನಲ್ಲಿ ಹೆಚ್ಚು ಯುವಕರನ್ನು ಹೊಂದಿದ ದೇಶ ಭಾರತವಾಗಿದೆ. ಅಂತಹ ಯುವಕರು ದೇಶದ ಆಸ್ತಿಯಾಗಿದ್ದಾರೆ. ಇಂದಿನ ಯುವ ಜನತೆಗೆ ನಿಶ್ಚಿತ ಗುರಿ, ದೃಢ ನಂಬಿಕೆ, ಆತ್ಮವಿಶ್ವಾಸ, ಸ್ವಂತಿಕೆ ರೂಢಿಸಿಕೊಳ್ಳಬೇಕು. ದೇಶಕ್ಕಾಗಿ, ಸಮಾಜಕ್ಕಾಗಿ ಯೋಚಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಾಚಾರ್ಯರಾದ ಎಂ.ಆರ್.ಭಾಗಾಯಿ ಮಾತನಾಡಿ, ದೃಢ ಸಂಕಲ್ಪ, ಛಲ ಇದ್ದರೆ ಗುರಿ ತಲುಪಲು ಸಾಧ್ಯ. ಏಕಾಗ್ರತೆ ನಮ್ಮಲ್ಲಿ ದೃಢ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅನಂತ ಶಕ್ತಿ, ಉತ್ಸಾಹ, ಧೈರ್ಯ, ತಾಳ್ಮೆ ಇದ್ದವರು ಸಾಧನೆ ಮಾಡುತ್ತಾರೆ ಎಂಬುದು ಸ್ವಾಮಿ ವಿವೇಕಾನಂದರ ನಿಲುವಾಗಿತ್ತು ಎಂದರು.ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀಶೈಲ ಕೋಲಾರ ಪ್ರಾಸ್ತಾವಿಕ ಮಾತನಾಡಿ, ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ಮಾದರಿಯಾಗಿದ್ದಾರೆ. ಅಲ್ಪ ವಯಸ್ಸಿನಲ್ಲಿಯೇ ಜಗತ್ತೇ ಭಾರತದತ್ತ ನೋಡುವಂತೆ ಅವರು ಕಾರ್ಯಸಾಧನೆ ಮಾಡಿದ್ದಾರೆ. ಅವರ ಸಾಧನೆ ಪೂರಕವಾಗಿರುವ ಅಂಶಗಳನ್ನು ಯುವಕರು ಮಾದರಿಯಾಗಿಟ್ಟುಕೊಳ್ಳಬೇಕು. ಆ ಮೂಲಕ ದೇಶಕ್ಕೂ ಸೇವೆ ಅರ್ಪಿಸಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್.ಎಂ.ತೇಲಿ, ಎಸ್.ಎಂ.ಕುಲಕರ್ಣಿ, ಎ.ಟಿ.ಬಾನೆ, ಸಂಜೀವ ಮಾನೆ, ಎ.ಡಿ.ದಾನೋಳೆ, ಕೆ.ವಿ.ಮಾಲಬನ್ನವರ, ಪ್ರತಿಭಾ ವಟ್ನಾಳ, ಆರ್.ಎ.ಪಾಟೀಲ ಉಪಸ್ಥಿತರಿದ್ದರು. ಗಾಯತ್ರಿ ಪರಗೌಡ ನಿರೂಪಿಸಿದರು. ಪ್ರೀತಿ ಯಲ್ಲಾಯಿಗೋಳ ವಂದಿಸಿದರು.160 ವಿದ್ಯಾರ್ಥಿಗಳಿಂದ ನೇತ್ರ ದಾನ ವಾಗ್ದಾನ:

ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳು ನೇತ್ರದಾನ ವಾಗ್ದಾನಕ್ಕೆ ಸಹಿ ಹಾಕಿದರು. ಎನ್ಎಸ್ಎಸ್‌ನ 100 ಸ್ವಯಂ ಸೇವಕರು ಹಾಗೂ ಇತರೆ 60 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 160 ವಿದ್ಯಾರ್ಥಿಗಳು ತಮ್ಮ ಮರಣಾ ನಂತರ ನೇತ್ರದಾನದ ಮಾಡಲು ಪ್ರತಿಜ್ಞೆ ಮಾಡಿದರು. ಕಳೆದ ವರ್ಷ ಪುನೀತರಾಜಕುಮಾರ ಅವರಿಂದ ಪ್ರೇರಣೆ ಪಡೆದಿದ್ದ 105 ಜನರು ಇದೆ ಕಾಲೇಜು ಮೂಲಕ ನೇತ್ರದಾನ ವಾಗ್ದಾನ ಮಾಡಿದ್ದರು. ಈಗ ಎನ್‌ಎಸ್‌ಎಸ್‌ ಅಧಿಕಾರಿ ಶ್ರೀಶೈಲ ಕೋಲಾರ ಅವರು ನೇತ್ರದಾನದ ಕುರಿತಾಗಿ ಪ್ರತಿವರ್ಷ ವಿದ್ಯಾರ್ಥಿಗಳಲ್ಲಿ ಪ್ರೇರೇಪಿಸುತ್ತಲೇ ಇದ್ದಾರೆ.

Share this article