-ಕುಡಿವ ನೀರಿಗೆ ಮೊದಲ ಆದ್ಯತೆ। ಕನಿಷ್ಠ ಒಂದನೇ ಬೆಳೆಗಾಗಿ ತಕ್ಷಣದಿಂದ ನೀರು
--
ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರು
ಮುನಿರಾಬಾದ್ ಕಾಡಾ ಟಿಬಿಪಿ ಸಭಾಂಗಣದಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನಿರ್ವಹಣೆ ಕುರಿತು ಮಂಗಳವಾರ ಜರುಗಿದೆ 126 ನೇ ನೀರಾವತಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಡೆಸಿದ ಚರ್ಚೆಗಳು ಹಾಗೂ ತೆಗೆದುಕೊಂಡಂತಹ ನಿರ್ಧಾರಗಳು ಜಲಾಶಯದ ವ್ಯಾಪ್ತಿಯ ಜಿಲ್ಲೆಗಳ ಜನರಿಗೆ ಹಾಗೂ ರೈತರಿಗೆ ಬರದ ಭೀತಿಯ ನಡುವೆಯೂ ನೋವನ್ನು ಮರೆಸುವಂತೆ ಮಾಡಿದೆ.
ಈ ವೇಳೆ ಹಲವು ಪ್ರಮುಖ ಸಂಗತಿಗಳನ್ನು ರೈತ ಮುಖಂಡರು ಸಭೆ ಗಮನಕ್ಕೆ ತಂದರು ಅದರಲ್ಲಿ ಮುಖ್ಯವಾಗಿ ತಕ್ಷಣದಿಂದಲೆಯೇ ಕಾಲುವೆಗೆ ನೀರು ಹರಿಸಬೇಕು, ಕನಿಷ್ಠ ಒಂದು ಬೆಳಗಾದರು ನೀರು ಕೊಡಬೇಕು, ಬರ ಹಾಗೂ ಭವಿಷ್ಯದ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಅಗತ್ಯವಿರುವ ನೀರನ್ನು ಸಂಗ್ರಹಿಸಿಟ್ಟುಕೊಂಡು ಉಳಿದ ನೀರನ್ನು ಅಚ್ಚುಕಟ್ಟು ಪ್ರದೇಶದ ಕೆಳಭಾಗಕ್ಕು ನಿಗದಿತ ಪ್ರಮಾಣದಲ್ಲಿ ಸಮರ್ಪಕವಾಗಿ ಹರಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸಹಮತಿ ನೀಡಿದ ಸಭೆ ತಕ್ಷಣದಿಂದ 4,100 ಕ್ಯುಸೆಕ್ ನೀರನ್ನು ಟಿಎಲ್‌ಬಿಸಿ ಮುಖ್ಯಕಾಲುವೆಗೆ ಹರಿಸಲು ತೀರ್ಮಾನಿಸುವುದರ ಮುಖಾಂತರ ಇಷ್ಟು ದಿನ ರೈತರಲ್ಲಿ ಅಡಗಿದ್ದ ಆತಂಕವನ್ನು ದೂರವಾಗುವಂತೆ ಮಾಡಿತು.
ವಿವಿಧ ಕಾಲುವೆಗಳಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸುವುದು ಸೇರಿ ರೈತರ ಕೆಲ ಸಮಸ್ಯೆಗಳು, ಕಾಲುವೆಯ ದುರಸ್ತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಗೇಜ್ ಪ್ರಮಾಣ ಕಾಯ್ದಿರಿಸಲು: ತುಂಗಭದ್ರ ಎಡದಂಡೆ ಮುಖ್ಯ ಕಾಲುವೆಯ ಮೈಲ್ 47 ಹಾಗೂ ಮೈಲ್ 69ರಲ್ಲಿ ಅಗತ್ಯ ಪ್ರಮಾಣದ ನೀರಿನ ಗೇಜನ್ನು ಕಾಯ್ದಿರಿಸಲು ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು, ಕೆಳ ಭಾಗದ ರೈತರಿಗೂ ಸಮರ್ಪಕವಾಗಿ ನೀರು ತಲುಪುವಂತೆ ನೀರಿನ ಹರಿವಿನ ಮೇಲೆ ನಿರಂತರ ನಿಗಾ ವಹಿಸಬೇಕು. ಅಗತ್ಯಕ್ಕೆ ಅನುಗುಣವಾಗಿ ನೀರಿನ ಪ್ರಮಾಣವನ್ನು ಕಾಯ್ದಿರಿಸಿ, ರೈತರಿಗೆ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜನಪ್ರತಿನಿಧೀಗಳು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
...ಬಾಕ್ಸ್....
ಮೊನ್ನೆಯಷ್ಟೇ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ವಾಸ್ತವ್ಯ ಹೂಡಿ ಬರ ಅಧ್ಯಯನ ನಡೆಸಿದ್ದ ಸಚಿವ ಡಾ.ಅಜಯ ಧರ್ಮಸಿಂಗ್ ಅವರು ಐಸಿಸಿ ಸಭೆಗೆ ಹೋಗುವುದಾಗಿ ತಿಳಿಸಿದ್ದರು. ಆದರೆ, ಸಭೆಗೆ ಗೈರು ಹಾಜರಾಗಿದ್ದ ಸಚಿವರು ಬೆಂಗಳೂರಿನಲ್ಲಿ ಇಡೀ ರಾಜ್ಯದ ಸರ್ಕಾರಿ ನೌಕರರೊಂದಿಗೆ ಸಿಎಂ ನಡೆಸಿದ ವಿಡಿಯೋ ಸಂವಾದದ ಸಮಾರಂಭದ ವೇದಿಕೆಯಲ್ಲಿ ಭಾಗವಹಿಸಿದ್ದರು. ಉಸ್ತುವಾರಿ ಜವಾಬ್ದಾರಿಯನ್ನು ಹೊಂದಿರುವ ಸಚಿವರು ಐಸಿಸಿಗೆ ಹೋಗುವುದಾಗಿ ತಿಳಿಸಿದ್ದ ಅವರು ಇದೀಗ ಕೈಕೊಟ್ಟಿರುವುದು ಜಿಲ್ಲೆ ಜನರ ಅದರಲ್ಲಿಯೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
-------------------ನೀರು ಬಿಡುಗಡೆ ವೇಳಾಪಟ್ಟಿ: ಸದ್ಯದ ಬರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡುಮ ಕುಡಿಯುವ ನೀರು ಹಾಗೂ ಕೃಷಿ ಅಗತ್ಯಕ್ಕೆ ಅನುಗುಣವಾಗಿ ತುಂಗಭದ್ರಾ ಯೋಜನೆಯ ವಿವಿಧ ಕಾಲುವೆಗಳಿಗೆ ನೀರು ಹರಿಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ.
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಅ.11 ರಿಂದ ನ.10 ರವರೆಗೆ ದಿನಕ್ಕೆ 4100 ಕ್ಯೂಸೆಕ್ ನಂತೆ ನೀರು ಹರಿಸಲಾಗುವುದು.ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನ.10 ರವರೆಗೆ ದಿನಕ್ಕೆ 1200 ಕ್ಯೂಸೆಕ್ ನಂತೆ,ಬಲದಂಡೆ ಕೆಳಮಟ್ಟದ ಕಾಲುವೆಗೆ ಆ. 11 ರಿಂದ ನ.10 ರವರೆಗೆ ದಿನಕ್ಕೆ 650 ಕ್ಯೂಸೆಕ್ ನಂತೆ ಹಾಗೂ ರಾಯ ಬಸವಣ್ಣ ಕಾಲುವೆಗೆ ಡಿ.10 ರವರೆಗೆ ಸರಾಸರಿ 180 ಕ್ಯುಸೆಕ್ ನಂತೆ ನೀರು ಒದಗಿಸಲಾಗುವುದು.
ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ. 11 ರಿಂದ ನ.10 ರವರೆಗೆ ದಿನಕ್ಕೆ 25 ಕ್ಯುಸೆಕ್ ನಂತೆ (ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳವರೆಗೆ ಮಾತ್ರ) ನೀರು ಬಿಡಲಾಗುವುದು.ನದಿ ಪೂರಕ (ಕೆರೆಗಳಿಗೆ) ಆ. 11 ರಿಂದ ಆ. 17 ರವರೆಗೆ ನೀರು ಒದಗಿಸಲಾಗುವುದು.ಈ ಎಲ್ಲ ಕಾಲುವೆಗಳಲ್ಲಿ ನೀರಿನ ಲಭ್ಯತೆ ಇರುವವರೆಗೆ ಅಥವಾ ನಿಗದಿಪಡಿಸಿದ ದಿನಾಂಕದವರೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯಿಸುತ್ತದೆ. ಮುಂದೆ ಬರುವ ಒಳಹರಿವಿನ ವ್ಯತ್ಯಾಸಕ್ಕೆ (ಹೆಚ್ಚು ಅಥವಾ ಕಡಿಮೆ) ಅನುಗುಣವಾಗಿ, ಸೆ.10 ರಂದು ಮತ್ತೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲು ಎಂದು 126ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.
---------------...ಕೋಟ್...
ಮುನಿರಾಬಾದ್ ನಲ್ಲಿ ನಡೆದ 126 ನೇ ಐಸಿಸಿ ಸಭೆಯಲ್ಲಿ ರೈತರ ಬೇಡಿಕೆಗಳನ್ನು ಹಾಲಿಸಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಕುಡಿಯಲು ಅಗತ್ಯವಾದ ನೀರನ್ನಿಟ್ಟುಕೊಂಡು ತಕ್ಷಣ ನೀರು ಹರಿಸುವುದು, ಕೆಳಭಾಗಕ್ಕೆ ನೀರು ಬಿಡುವುದು, ಅಚ್ಚುಕಟ್ಟು ಪ್ರದೇಶದಲ್ಲಿನ ಕಾಲುವೆಗಳ ದುರಸ್ತಿ, ಅಕ್ರಮ ನೀರಾವರಿ, ನೀರಿನ ಕಳವು ಸೇರಿದಂತೆ ಹಲವಾರು ಸಭೆಗಳ ಕುರಿತು ಚರ್ಚಿಸಲು ಸಿಎಂ, ಹಾಲಿ ಮತ್ತು ಸಚಿವರು, ಶಾಸಕರು, ರೈತರ ಮುಖಂಡರೊಂದಿಗೆ ಸಭೆಯನ್ನು ಏರ್ಪಾಡು ಮಾಡಬೇಕು ಎಂದು ಐಸಿಸಿ ಸಭೆಯ ಗಮನಕ್ಕೆ ತಂದು ಒತ್ತಾಯಿಸಲಾಗಿದೆ.-ಚಾಮರಸ ಮಾಲಿಪಾಟೀಲ್, ರೈತ ಮುಖಂಡ
---------------11ಕೆಪಿಆರ್‌ಸಿಆರ್ 01
ಮುನಿರಾಬಾದ್ ಕಾಡಾ ಟಿಬಿಪಿ ಸಭಾಂಗಣದಲ್ಲಿ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನಿರ್ವಹಣೆ ಕುರಿತು ಮಂಗಳವಾರ ನಡೆದ 126 ನೇ ನೀರಾವತಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಯಿತು.