ಕನ್ನಡಪ್ರಭ ವಾರ್ತೆ ಯಮಕನಮರಡಿ
ತೋಲಗಿ ಗ್ರಾಮದಲ್ಲಿ ವಿಠ್ಠಲ ರುಕ್ಮಾಯಿ ದೇವಸ್ಥಾನದ ವೃದ್ದಾರ್ಪಣೆ ಅಂಗವಾಗಿ ಹಮ್ಮಿಕೊಂಡ ಗ್ರಂಥರಾಜ ಜ್ಞಾನೇಶ್ವರ ಪಾರಾಯಣ ಕಾರ್ಯಕ್ರಮದಲ್ಲಿ ಪ್ರವಚನ ನೀಡಿ ಮಾನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜೀವನ ಪಾವನ ಮಾಡಿಕೊಳ್ಳಬೇಕು ಎಂದರು.
ಮೇ.21 ರಂದು ಶ್ರೀ ಗ್ರಂಥರಾಜ ಜ್ಞಾನೇಶ್ವರ ಪಾರಾಯಣ ಕೀರ್ತನೆ ಭಜನೆ ಪೂಜೆ ಸ್ಥಾಪನೆಯೊಂದಿಗೆ ಹರಿನಾಮ ಸಪ್ತಾಯ ಪ್ರಾರಂಭವಾಯಿತು. ಪೂಜೆ ಸ್ಥಾಪನೆ ಯಳ್ಳೂರದ ಶಿವಾನಂದ ಎಸ್.ಮಠಪತಿ ಮಹಾಸ್ವಾಮಿಗಳು, ಗಂಗಾಧರ ವಾಲೇಕಾರ ಅವರು ಉಪ ಅಧೀಷ್ಠಾನದಲ್ಲಿ ಕಾರ್ಯಕ್ರಮದಲ್ಲಿ ಜರುಗಿತು. ರಾಜಹಂಸಗಡ ಯಳ್ಳೂರ ಸಹಕಾರದಿಂದ ಪರಿಕಿರ್ತನೆ ನಡೆಯಿತು. ಮಾಸ್ತಮರಡಿಯ ಪರಶುರಾಮ ಕುರಂಗಿ ಮಹಾಸ್ವಾಮಿಗಳು ಅವರಿಂದ ಸಾಂಪ್ರದಾಯಿಕ ಕನ್ನಡ ಕಿರ್ತನೆ ಜರುಗಿದವು. ನಂತರ ಗ್ರಾಮಸ್ಥರಿಂದ ಶಿವಭಜನೆ ನಡೆದವು. ಮೇ.22 ರಂದು ಕಾಕಡಾರತಿ ಧ್ವಜಾರೋಹಣ ವಿಠ್ಠಲ ರುಕ್ಮಾಯಿ ಅಭಿಷೇಕ ಮತ್ತು ಆಣೆ ಪೂಜೆಗಳು ನಡೆದವು. ಕುಂಭಮೇಳದೊಂದಿಗೆ ದಿಂಡಿ ಪ್ರದರ್ಶನ ನಂತರ ಮಹಾಪ್ರಸಾದ ನಡೆಯಿತು.