ಪಟ್ಟಣದ ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ ಸೇರಿದಂತೆ ವಿವಿಧ ಜನರಲ್ ಸ್ಟೋರ್‌ಗಳಲ್ಲಿ ಕೂಡ ರಾಜಾರೋಷವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿದೆ.
ಮುಂಡಗೋಡ: ನಿಯಮಗಳನ್ನು ಗಾಳಿಗೆ ತೂರಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ಅಪಾಯ ಸಂಭವಿಸುವ ಆತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಪಟ್ಟಣದ ಕಿರಾಣಿ ಅಂಗಡಿ, ಸ್ಟೇಷನರಿ ಅಂಗಡಿ ಸೇರಿದಂತೆ ವಿವಿಧ ಜನರಲ್ ಸ್ಟೋರ್‌ಗಳಲ್ಲಿ ಕೂಡ ರಾಜಾರೋಷವಾಗಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ನಿಗದಿತ ನಿಯಮಗಳು ಹಾಗೂ ಸುರಕ್ಷತಾ ಕ್ರಮಗಳಿದ್ದರೂ ಅವುಗಳನ್ನು ಕಡೆಗಣಿಸಿ ವ್ಯಾಪಾರ ನಡೆಸಲಾಗುತ್ತಿದೆ.
ಪಟಾಕಿಗಳನ್ನು ಸುರಕ್ಷಿತ ಸ್ಥಳ, ಅಗ್ನಿ ಅವಘಡಕ್ಕೆ ಅವಕಾಶವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಮಾತ್ರ ಮಾರಾಟ ಮಾಡಬೇಕು. ಆದರೆ ಪಟ್ಟಣದ ಹಲವು ಕಡೆ ಯಾವುದೇ ಸುರಕ್ಷತಾ ವ್ಯವಸ್ಥೆಯಿಲ್ಲದೆ ಪಟಾಕಿ ಮಾರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪಟಾಕಿ ಅಂಗಡಿಗಳ ಸುತ್ತಮುತ್ತ ಜನಸಂದಣಿ, ವಾಹನ ಸಂಚಾರ ಹಾಗೂ ಇತರ ಅಂಗಡಿಗಳು ಇರುವುದರಿಂದ ಸಣ್ಣ ಪ್ರಮಾಣದ ಅವಘಡವೂ ಸಂಭವಿಸಿದರೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ತಕ್ಷಣ ಸಂಬಂಧಪಟ್ಟ ಕಂದಾಯ, ಪೊಲೀಸ್, ಅಗ್ನಿಶಾಮಕ ಹಾಗೂ ಸ್ಥಳೀಯ ಆಡಳಿತಾಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ, ಪಟಾಕಿ ಮಾರಾಟಕ್ಕೆ ಅಗತ್ಯ ಪರವಾನಗಿ ಹೊಂದಿರುವ ಅಂಗಡಿಗಳನ್ನಷ್ಟೇ ಗುರುತಿಸಬೇಕು. ನಿಯಮಬಾಹಿರವಾಗಿ ಪಟಾಕಿ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ಕೂಡಲೇ ಮಾರಾಟ ನಿಲ್ಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು.ಜನನಿಬಿಡ ಪ್ರದೇಶಗಳಲ್ಲಿ ಪಟಾಕಿ ಸ್ಫೋಟಗೊಂಡು ಕೆಲವೆಡೆ ಅನಾಹುತಗಳು ಸಂಭವಿಸಿವೆ. ಹಾಗಾಗಿ ಪಪಂ ಹಾಗೂ ತಾಲೂಕಾಡಳಿತ ಸೇರಿಕೊಂಡು ಪಟ್ಟಣದಲ್ಲಿ ಖಾಲಿ ಸ್ಥಳ ಗುರುತಿಸಿ ಹಬ್ಬಗಳಲ್ಲಿ ತಾತ್ಪೂರ್ತಿಕ ಮಳಿಗೆ ನಿರ್ಮಾಣ ಮಾಡಿ ಒಂದೇ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಪಪಂ ಮಾಜಿ ಉಪಾಧ್ಯಕ್ಷರಾದ ವಾದಿರಾಜ ರಾವ್ ತಿಳಿಸಿದರು.ರೋಗ ಬರುವ ಮುಂಚೆ ಜಾಗೃತಿ ವಹಿಸಿ
ಮುಂಡಗೋಡ: ಯಾವಾಗಲೂ ರೋಗ ಬರುವ ಮುಂಚೆ ಜಾಗೃತಿ ವಹಿಸಬೇಕು ಎಂದು ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಯೋಗೇಶ್ ಮಡಗಾಂವಕರ ಹೇಳಿದರು.ಸರ್ಕಾರಿ ಆಯುರ್ವೇದ ಆಸ್ಪತ್ರೆ ಮುಂಡಗೋಡ ಮತ್ತು ಲೊಯೋಲಾ ವಿಕಾಸ ಕೇಂದ್ರದ ಆಶ್ರಯದಲ್ಲಿ ವಯೋಮಿತ್ರ ಕಾರ್ಯಕ್ರಮದಡಿಯ ತಾಲೂಕಿನ ಬ್ಯಾನಳ್ಳಿ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡ ಉಚಿತ ಕೀಲು ಮೂಳೆ ವ್ಯಾಧಿಗಳ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ವೈದ್ಯಕೀಯ ಸೇವೆ ಸದಾಕಾಲ ಸಿಗದೇ ಇರುವ ಸಂದರ್ಭದಲ್ಲಿ ಮನೆಯ ಹಿತ್ತಲಲ್ಲಿಯೇ ಸಿಗುವ ಅಡುಸೋಗೆ ಸೊಪ್ಪು, ಎಕ್ಕೆ ಎಲೆ, ತುಳಸಿ, ಅಮೃತಬಳ್ಳಿ, ಲೋಳೆಸರದಂತಹ ಮನೆಮದ್ದುಗಳನ್ನು ಉಪಯೋಗಿಸಿ ರೋಗ ಶಮನ ಮಾಡಿಕೊಳ್ಳಬೇಕು. ಅದಕ್ಕೂ ಮಿಕ್ಕಿದ ಸ್ಥಿತಿಯಲ್ಲಿ ವೈದ್ಯರ ಸಲಹೆ ಸೂಚನೆ ಪಡೆಯಬೇಕು ಎಂದರು.ಡಾ. ನವೀನ ಬಡಿಗೇರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮೋಹನ ಕಲಾಲ, ಪ್ರವೀಣ ಶೇದಿಯಣ್ಣನವರ ಮುಂತಾದವರು ಉಪಸ್ಥಿತರಿದ್ದರು. ಮಲ್ಲಮ್ಮ ನೀರಲಗಿ ನಿರೂಪಿಸಿ, ಸ್ವಾಗತಿಸಿದರು. ಪ್ರವೀಣ ಶೇದಿಯಣ್ಣನವರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.