ಪಂಚಸೂತ್ರ ಪಾಲಿಸಿದರೆ ಮೋಕ್ಷ ಸಾಧ್ಯ

KannadaprabhaNewsNetwork |  
Published : Jun 08, 2025, 02:06 AM ISTUpdated : Jun 08, 2025, 02:07 AM IST
ಬಕ್ರೀದ್‌ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂರು ಶನಿವಾರ ಶ್ರದ್ಧಾ-ಭಕ್ತಿಯಿಂದ, ಸಡಗರದಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪ್ರಾರ್ಥನೆ ಬಳಿಕ ಎಲ್ಲರೂ ಒಬ್ಬರಿಗೊಬ್ಬರು ಪರಸ್ಪರ ಆಲಂಗಿಸಿ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಇಂಡಿ

ತ್ಯಾಗ ಬಲಿದಾನಗಳ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂರು ಶನಿವಾರ ಶ್ರದ್ಧಾ-ಭಕ್ತಿಯಿಂದ, ಸಡಗರದಿಂದ ಆಚರಿಸಿದರು. ಈದ್ಗಾ ಮೈದಾನದಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಕ್ತಿ ಭಾವ ಮೆರೆದರು. ಪ್ರಾರ್ಥನೆ ಬಳಿಕ ಎಲ್ಲರೂ ಒಬ್ಬರಿಗೊಬ್ಬರು ಪರಸ್ಪರ ಆಲಂಗಿಸಿ ಬಕ್ರೀದ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ತ್ಯಾಗ ಬಲಿದಾನ, ಧರ್ಮ, ಭಾತೃತ್ವ ಸಹೋದರತೆ, ಅನ್ಯೋನ್ಯತೆಗಳ ಮೌಲ್ಯಗಳನ್ನು ಪ್ರತಿಪಾದಿಸುವ ಬಕ್ರೀದ್ ಹಬ್ಬದ ಆಚರಣೆಯನ್ನು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ಧರ್ಮ ಗುರುಗಳು, ಮುಸ್ಲಿಂ ಸಮಾಜದ ಪ್ರತಿಯೊಬ್ಬರು ಬದುಕಿನಲ್ಲಿ ನಮಾಜ್, ಹಜ್, ರೋಜಾ, ಜಕಾತ್‌, ಸಿತ್ರಾ ಈ ಪಂಚ ಸೂತ್ರಗಳನ್ನು ಪಾಲಿಸಿದಾಗ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗಿ ಮೋಕ್ಷ ಪಡೆಯಲು ಸಾಧ್ಯ ಎಂದು ಧರ್ಮ ಸಂದೇಶ ನೀಡಿದರು.ಈ ಹಬ್ಬದಲ್ಲಿ ಶಕ್ತಿಯುಳ್ಳ ಪ್ರತಿಯೊಬ್ಬ ಮುಸ್ಲಿಂ ಬಾಂಧವನು ಹಜ್‌ಯಾತ್ರೆ ಕೈಗೊಂಡು ಇಂದು ಮೆಕ್ಕಾದಲ್ಲಿ ದೇಶದ ಸಮಸ್ತ ಜನರಿಗೆ ಆರೋಗ್ಯ, ಶಾಂತಿ, ಸಹನೆ, ದಾನ ಧರ್ಮದ ಗುಣಗಳನ್ನು ನೀಡಲೆಂದು ಅಲ್ಲಾಹನಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ತಿಳಿಸಿದರು.ಪ್ರವಾದಿಯವರ ಆಣತಿಯಂತೆ ಬಕ್ರೀದ್ ಆಚರಣೆ ವೇಳೆ ಬಲಿದಾನ ನೀಡುವುದು, ಬಡವರಿಗೆ ಹಬ್ಬದ ಊಟ ಕೊಡುವುದು ಆಚರಣೆಯ ಪ್ರಮುಖ ಅಂಶ. ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆಸಿ, ಬಳಿಕ ಖಬರಸ್ತಾನಕ್ಕೆ ತೆರಳಿ ಪೂರ್ವಜರನ್ನು ಸ್ಮರಿಸಲಾಗುತ್ತದೆ. ಬಲಿದಾನದಲ್ಲಿ ಮೂರು ಪಾಲು ಮಾಡಿ ಬಡವರಿಗೆ, ನೆರೆಹೊರೆಯವರಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಮುಖಂಡ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ ಮಾಹಿತಿ ಹಂಚಿಕೊಂಡರು.ಪುರಸಭೆ ಸದಸ್ಯ ಮುಸ್ತಾಕ ಇಂಡಿಕರ, ಮುಫ್ತಿ ಅಬ್ದುಲ್ ರೇಹಮಾನ ಅರಬ, ಅಂಜುಮನ ಅಧ್ಯಕ್ಷ ಮುನ್ನಾ ಬಾಗವಾನ, ಕಾರ್ಯದರ್ಶಿ ಹುಸೇನಿ ಬೇಪಾರಿ, ಮಹಿಬೂಬ ಅರಬ, ಅಯೂಬ ಬಾಗವಾನ, ಅಸ್ಲಮ ಕಡಣಿ, ಶಬ್ಬಿರ ಖಾಜಿ, ಅಬ್ದುಲ್ ರಷಿದ ಅರಬ, ಅಬ್ದುಲ್ ರೆಹಮಾನ ಬಾಗಬಾನ (ಅಂತೋಲೆ), ಅಬ್ದುಲ್ ರಷಿದ ಮುಗಳಿ, ಶಿರಾಫ್ ಪಟೇಲ, ಬಸೀರ ಇನಾಮದಾರ, ಫಾರೂಕ್ ತುರಕಿ, ಹಸನ ಮುಜಾವರ, ರಫಿಕ ಇಂಡಿಕರ, ಯಾಸೀನ ತುರಕಿ, ರೈಸ್ ಅಸ್ಟೆಕರ, ಮುಬಾರಕ ಕೊಲಾರ, ಯೂನಿಸ್ ರೇವೂರಕರ, ನಜೀರ ಪಠಾಣ, ಇಮ್ರಾನ ಮಕಂದಾರ, ಅಸ್ಲಮ ಪಟೇಲ, ಮಹ್ಮದ ಗುಲಬರ್ಗಾ, ಮಹಿಬೂಬ ಮಕಂದಾರ, ಸಲೀಮ ಶೇಖ, ಹಿದಾತುಲ್ ಅಡ್ಡೆವಾಲೆ ಮೊದಲಾದವರು ಬಕ್ರೀದ್‌ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ