ಸಂಗೊಳ್ಳಿ ರಾಯಣ್ಣ ಉತ್ಸವಕ್ಕೆ ಅದ್ಧೂರಿ ಚಾಲನೆ

KannadaprabhaNewsNetwork |  
Published : Jan 13, 2026, 03:30 AM IST
ರಾಯಣ್ಣ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲ ವೀರರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026 ಜಾನಪದ ಕಲಾಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿರುವ ಉತ್ಸವಕ್ಕೆ ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಾಪಂ ಇಒ ಸಂಜೀವ ಜುನ್ನೂರ, ತಹಸೀಲ್ದಾರ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ವೀರರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣನ ಹುಟ್ಟೂರು ಸಂಗೊಳ್ಳಿಯಲ್ಲಿ ಸೋಮವಾರ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ-2026 ಜಾನಪದ ಕಲಾಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿರುವ ಉತ್ಸವಕ್ಕೆ ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಗ್ರಾಮ ಪಂಚಾಯತಿ ಅಧ್ಯಕ್ಷ್ಯೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಾಪಂ ಇಒ ಸಂಜೀವ ಜುನ್ನೂರ, ತಹಸೀಲ್ದಾರ ಹನುಮಂತ ಶಿರಹಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಡೊಳ್ಳು ಬಾರಿಸುವ ಮೂಲಕ ಜಾನಪದ ಕಲಾ ಮೇಳದ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು.ಬ್ರಿಟಿಷರ ವಿರುದ್ಧ ವೀರಪರಾಕ್ರಮ ಮೆರೆದ ರಾಯಣ್ಣನ ತ್ಯಾಗಬಲಿದಾನಗಳನ್ನು ಕಲಾಮೇಳ ನೆನಪಿಸುವಂತೆ ಮಾಡಿತು. ಉತ್ಸವದ ಢಮರುಗಗಳು ಕಿತ್ತೂರು ಇತಿಹಾಸದ ರಣಕಹಳೆಯ ಸಂಕೇತವಾಗಿ ಭಾಸವಾದವು. ಡೊಳ್ಳುಗಳು ಕ್ರಾಂತಿಯ ಧ್ವನಿಯನ್ನು ಹೊರ ಹಾಕಿದವು. ಸತ್ಯದ, ಶೌರ್ಯದ ನೀನಾದವನ್ನೂ ವ್ಯಕ್ತಗೊಳಿಸಿದವು. ಸಂಗೊಳ್ಳಿ ಉತ್ಸವದ ಅಂಗವಾಗಿ ರಾಯಣ್ಣ ಪ್ರತಿಮೆಗೆ, ಹುತಾತ್ಮ ವೀರಯೋಧ ರಾಜು ಮಲಬನ್ನವರ ಪ್ರತಿಮೆಗೆ ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ಎಸಿ ಪ್ರವೀಣ ಜೈನ್, ತಹಸೀಲ್ದಾರ್‌ ಹಣಮಂತ ಶಿರಹಟ್ಟಿ, ಗ್ರಾಪಂ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಪಿಡಿಒ ಗೌರವ, ಸಮರ್ಪಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಲಾವಿದರಿಗೆ ಗ್ರಾಮಸ್ಥರು ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಗ್ರಾಮದ ಪ್ರತಿಯೊಂದು ಬೀದಿಗಳು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಡಿಜೆ ಸೌಂಡ್‌ಗೆ ಯುವ ಪಡೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ಬಿಇಒ ಎ.ಎನ್.ಪ್ಯಾಟಿ, ಪಿಡಿಒ ಅಡಿವೆಪ್ಪ ತಳವಾರ, ಸಾಹಿತಿ ಬಸವರಾಜ ಕಮತ, ಗ್ರಾಪಂ ಸದಸ್ಯರಾದ ಬಸವರಾಜ ಕೊಡ್ಲಿ, ಇಮಾಮಹುಸೇನ ಖುದ್ದುನ್ನವರ, ರತ್ನಾ ಆನೆಮಠ, ಈರಣ್ಣಾ ಹಳೇಮನಿ, ಶಿವಕುಮಾರ ಪೂಜೇರ, ಬಾಬು ತಳವಾರ, ಸಂಗನಗೌಡ ಪಾಟೀಲ, ದೀಪಾ ಬಡವನ್ನವರ, ಗಂಗವ್ವ ಹೊಳೆಪ್ಪನವರ, ಮಂಜುಳಾ ಕುಡೋಳ್ಳಿ, ಸನಾ ಖುದ್ದುನ್ನವರ, ಮಹಾಂತೇಶ ಬೆನ್ನಿ, ಬಾಬು ಕುಡೊಳ್ಳಿ, ಗಂಗವ್ವ ಪೂಜೇರ, ಗ್ರಾಮದ ಮುಖಂಡರು, ಮಲ್ಲಿಕಾರ್ಜುನ ಕುಡೊಳ್ಳಿ, ಮಹೇಶ ಹಿರೇಮಠ, ಡಾ.ಬಿ.ಪಿ.ಹಿರೇಮಠ, ಅನೀಲ ಮೆಕಲಮರ್ಡಿ, ಕಾರ್ಯದರ್ಶಿ ಪ್ರಭು ನರಗಟ್ಟಿ, ಉಪನ್ಯಾಕ ಚನ್ನಪ್ಪ ಹಕ್ಕಿ, ಬಸನಗೌಡ ಅಗಸಿಮನಿ, ಸುನೀಲ ಕುಲಕರ್ಣಿ, ಅರುಣ ಯಲಿಗಾರ, ಬಸವರಾಜ ನರಟ್ಟಿ, ಉಮೇಶ ಲಾಳ, ಮಹಾಂತೇಶ ಬೆಣ್ಣಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಾವಿರಾರು ನಾಗರಿಕರು ಇದ್ದರು.------

ಬಾಕ್ಸ್ಗಮನ ಸೆಳೆದ ಜಾನಪದ ಕಲಾ ಮೇಳ

ಪ್ರಾತಃ ಕಾಲ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಅರ್ಚಕ ಬಸವರಾಜ ಡೊಳ್ಳಿನ ವಿಶೇಷ ಪೂಜೆ ನೆರವೇರಿಸಿದರು. ಕಿತ್ತೂರು ಸಂಸ್ಥಾನ ಧ್ವಜಾರೋಹಣ ನೆರವೇರಿಸಿದರು. ಜಾನಪದ ಕಲಾ ಮೇಳ ಮೆರವಣಿಗೆಯಲ್ಲಿ ಜಿಲ್ಲೆ, ಹೊರ ಜಿಲ್ಲೆಯ ಕಲಾವಿದರು ತಮ್ಮ ಕಲಾ ಪ್ರದರ್ಶನ ತೋರಿದರು. ವಿಜಯನಗರ ಗೂಳಪ್ಪ ತಂಡದ ಪುರವಂತಿಕೆ, ಶಿವನಪ್ಪ ಚಂದರಗಿ ಹಾಗೂ ಸುರೇಶ ವಾಗಮೋಡೆ ಡೊಳ್ಳು ಕುಣಿತ, ಶಂಕ್ರವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ, ರಾಮಚಂದ್ರ ಕಾಂಬಳೆ ನಾಸಿಕ್ ಡೋಲ್, ಭರತ್ ಕಲಾಚಂದ್ರ ಜಾಂಜ್ ಪಥಕ, ಮಹಾಂತೇಶ ಹೂಗಾರ ಸಂಬಳ ವಾದನ, ಶಿವಪ್ಪ ಕುಂಬಾರ ಕರಡಿ ಮಜಲು, ಮಿಲಿಂದ ಸಂಗಣ್ಣವರ ಹಲಗೆ ವಾದನ, ಬಾಲಪ್ಪ ಭಜಂತ್ರಿ ಅವರ ತಾಸೆ ವಾದನ, ಶಾಂತಿಸಾಗರ ಜಾಂಜ್ ಪಥಕ್, ಮಲ್ಲಿಕಾರ್ಜುನ ನಿಚ್ಚಣ್ಣಿ ಕರಡಿ ಮಜಲು, ಗಂಗಾಧರಯ್ಯ ಅಗೋರಿ, ಯೋಗೇಶ ವೀರಗಾಸೆ, ಲೋಹಿತ್ ಆಂಜನೇಯ ವೇಷ, ರಂಗಸ್ವಾಮಿ ಗೊಂಬೆ, ಲಕ್ಷ್ಮಣ ಡೊಳ್ಳು ಕುಣಿತ, ಸಣ್ಣಸ್ವಾಮಿ ಕಂಸಾಳೆ, ರವಿ ಮತ್ತು ತಂಡ ಕೊಂಬು ಕಹಳೆ, ರಾಜಮ್ಮ ಮತ್ತು ತಂಡ ಪಟಾತ ಕುಣಿತ, ಮಹಾಂತೇಶ ವಾಲಿ ಡೊಳ್ಳು ಕುಣಿತ, ಚಂದ್ರು ಸಾರವಾಡ ಗೊಂಬೆ ಕುಣಿತ, ಸದಾಶಿವ ಮಾಟೊಳ್ಳಿ ಕರಡಿ ಮಜಲು, ವಸಂತ ಆಚಾರ್ಯ ವೀರಗಾಸೆ, ಹಾಗೂ ವಿವಿಧ ನೃತ್ಯಗಳು ನೋಡುಗರ ಗಮನ ಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು 5 ಪಾಲಿಕೆಗೆ ಎಲೆಕ್ಷನ್‌ ನಡೆಸುವುದಕ್ಕೆ ಜೂ.30 ಡೆಡ್ಲೈನ್‌
ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌