ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸಿನಿ ರಸಿಕರ ಮನ ಗೆದ್ದಿದ್ದ ಸಂಜು ವೆಡ್ಸ್ ಗೀತಾ ಚಲನಚಿತ್ರದ ಎರಡನೇ ಭಾಗ ಸೆಟ್ಟೇರಿದ್ದು, ಜ.೧೦ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಚಲವಾದಿ ಕುಮಾರ ಹೇಳಿದರು.ಸಂಜು ವೆಡ್ಸ್ ಗೀತಾ ಭಾಗ-೨ರ ಚಲನಚಿತ್ರದ ಕುರಿತು ಬೆಳಗಾವಿ ಜಿಲ್ಲೆಯಲ್ಲಿ ಪ್ರಚಾರಕ್ಕಿಳಿದ ಸಿನಿ ತಂಡ ಶನಿವಾರ ಪಟ್ಟಣದ ಪದವಿ ಪೂರ್ವ ಸರ್ಕಾರಿ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಚಲನಚಿತ್ರದ ತುಣುಕು ಪ್ರದರ್ಶಿಸಿತು.
ರಾಜ್ಯ ಹಾಗೂ ಹೊರ ರಾಜ್ಯ ಮತ್ತು ವಿದೇಶಗಳ ಹಲವಾರು ಸ್ಥಳಗಳಲ್ಲಿ ಪ್ರೀತಿ, ಪ್ರಣಯದ ಜೊತೆಗೆ ಕ್ಯಾನ್ಸರ್ ಪೀಡಿತರ ಕುರಿತು ಸರ್ಕಾರದ ಕಣ್ತೆರೆಸುವ ಸಮಾಜಿಕ ಕಳಕಳಿ ಹೊಂದಿರುವ ಚಿತ್ರ ಇದಾಗಿದೆ ಎಂದು ಮಾಹಿತಿ ನೀಡಿದರು.ಖ್ಯಾತ ನಿರ್ದೇಶಕರಾದ ರಾಜಶೇಖರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ ಇದಾಗಿದೆ, ಚಿತ್ರದ ನಾಯಕ ನಟ ಶ್ರೀನಗರಕಿಟ್ಟಿ, ನಾಯಕ ನಟಿಯಾಗಿ ರಚಿತಾಮ, ಸಾಧುಕೋಕಿಲ, ರಂಘನ್ ರಘು, ತಬಲಾನಾನಿ, ಸಂಪತ್ತ ಮುಂತಾದ ಕಲಾವಿದರಿಂದ ನಿರ್ಮಿಸಲಾದ ಪ್ರೇಮ ಕಥೆಯನ್ನಾಧರಿಸಿದ ಚಲನ ಚಿತ್ರವಾಗಿದ್ದು, ನಾಡಿನ ಸಮಸ್ತ ಜನತೆ ವೀಕ್ಷಣೆ ಮಾಡಬೇಕೆಂದರು.
ಚಲನಚಿತ್ರದ ನಟ ಶ್ರೀನಗರಕಿಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಚನ್ನಮ್ಮಾಜಿಯ ನಾಡಿನಿಂದ ಚಿತ್ರದ ಪ್ರಚಾರ ಆರಂಭಿಸಿದ್ದು, ಈಗಾಗಲೆ ಹಲವಾರು ಜಿಲ್ಲೆಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಂಡಿದ್ದೇವೆ. ಎಲ್ಲ ಸ್ಥಳಗಳಲ್ಲಿ ಚಲನಚಿತ್ರದ ಬಗ್ಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದ ಅವರು, ಈ ಚಿತ್ರದಲ್ಲಿ ಗಂಡು-ಹೆಣ್ಣು ಪರಸ್ಪರ ಪ್ರೀತಿಸಿ ವಿಶ್ವಾಸವಿಟ್ಟು ಉತ್ತಮ ಬಾಂಧವ್ಯ ಹೊಂದಿದ ಜೀವನ ಎಷ್ಟು ಸುಖಕರಾಗಿರುತ್ತದೆ. ನಂಬಿಕೆ ಎಂಬುದು ಹೇಗಿರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ತಿಳಿಯಪಡಿಸುವ ಉತ್ತಮ ಚಿತ್ರ ಇದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪ್ರಭಾರಿ ಪ್ರಾಚಾರ್ಯ ಎಸ್.ಬಿ. ಪೆಂಟೆದ ಹಾಗೂ ತಂಡದ ಜೊತೆಗಾರರಾದ ಭಾಷಾ, ಇರ್ಫಾನ್, ನಾಗರಾಜ, ಶಂಭು ಕಳಸನ್ನವರ ಸೇರಿದಂತೆ ಇತರರು ಇದ್ದರು.