ಕನ್ನಡಪ್ರಭ ವಾರ್ತೆ ಹಾಸನ
ಈ ಯಾತ್ರೆಯ ಅಂಗವಾಗಿ ಗ್ರಾಮದಿಂದ ಸುಮಾರು ೮೦ ಕಿಲೋ ಮೀಟರ್ ದೂರದ ಮಂಡ್ಯ ಜಿಲ್ಲೆಯ ಗಂವಿರಂಗನಾಥ ಸ್ವಾಮಿ ದೇವಾಲಯಕ್ಕೆ ೬೪ ಬಂಡಿಗಳಲ್ಲಿ ಗ್ರಾಮಸ್ಥರು ಭಕ್ತಿಪೂರ್ಣವಾಗಿ ಪ್ರಯಾಣ ಬೆಳೆಸುತ್ತಾರೆ. ಗ್ರಾಮದಿಂದ ಮರಿ ತೆಗೆದುಕೊಂಡು ಹೊರಡುವ ಈ ಬಂಡಿ ಯಾತ್ರೆ ಗ್ರಾಮಸ್ಥರ ಶ್ರದ್ಧೆ ಮತ್ತು ಏಕತೆಯನ್ನು ಪ್ರತಿಬಿಂಬಿಸಿತು. ಶುಕ್ರವಾರದಂದು ಚನ್ನರಾಯಪಟ್ಟಣದಲ್ಲಿ ವಿಶ್ರಾಂತಿ ಪಡೆದ ಯಾತ್ರಿಕರು, ಶನಿವಾರ ಬೆಳಿಗ್ಗೆ ಮತ್ತೆ ಪ್ರಯಾಣ ಮುಂದುವರೆಸಿ ಗಂವಿರಂಗನಾಥ ಸ್ವಾಮೀ ದೇವಾಲಯ ತಲುಪುತ್ತಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮರಿ(ಹೋತ) ಅರ್ಪಿಸಿ ಊಟ ಸೇವಿಸಿದ ಬಳಿಕ ವಾಪಸ್ ಊರಿಗೆ ಮರಳುತ್ತಾರೆ. ಸಂಪ್ರದಾಯ, ಸಂಸ್ಕೃತಿ ಹಾಗೂ ಭಕ್ತಿಭಾವದೊಂದಿಗೆ ನಡೆಯುವ ಈ ಬಂಡಿ ಯಾತ್ರೆ ಗ್ರಾಮಸ್ಥರ ನಡುವೆ ಒಗ್ಗಟ್ಟನ್ನು ಬೆಳೆಸುವ ಪ್ರಮುಖ ಆಚರಣೆಯಾಗಿ ಮುಂದುವರೆದಿದೆ.