ಹರಿಹರ ತುಂಗಭದ್ರಾ ತಟದಲ್ಲಿ ಸಂಕ್ರಾಂತಿ ಸಂಭ್ರಮ

KannadaprabhaNewsNetwork |  
Published : Jan 15, 2025, 12:46 AM IST
14ಎಚ್‍ಆರ್‍ಆರ್ 03ಹರಿಹರದ ತುಂಗಭದ್ರಾ ನದಿಯ ದಡದಲ್ಲಿ ಮೃಷ್ಠಾನ್ನ ಭೋಜನ ಸವಿಯುತ್ತಿರುವ ಕುಟುಂಬ14ಎಚ್‍ಆರ್‍ಆರ್ 03 ಎಹರಿಹರದ ತುಂಗಭದ್ರಾ ನದಿಯ ದಡದಲ್ಲಿ ಸಂಕ್ರಾಂತಿ ಆಚರಿಸಲು ಬಂದಿರುವ ವಿವಿಧ ಊರುಗಳ ಜನತೆ | Kannada Prabha

ಸಾರಾಂಶ

ಸುಗ್ಗಿಯ ಹಬ್ಬವೆಂದೇ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬವು ಮಂಗಳವಾರ ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಹರಿಹರ: ಸುಗ್ಗಿಯ ಹಬ್ಬವೆಂದೇ ಆಚರಿಸಲ್ಪಡುವ ಸಂಕ್ರಾಂತಿ ಹಬ್ಬವು ಮಂಗಳವಾರ ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ತಾಲೂಕಿನ ಜೀವನದಿ ತುಂಗಭದ್ರೆಯಲ್ಲಿ ಉತ್ತರಾಯಣ ಪುಣ್ಯಕಾಲದಲ್ಲಿ ಸ್ನಾನ ಮಾಡುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ, ಹೊಳೆಯಲ್ಲಿ ಮಿಂದೆದ್ದರು.

ದಾವಣಗೆರೆ ಜಿಲ್ಲೆಯ ಸುತ್ತಮುತ್ತಲಿನ ಜನರು ಕುಟುಂಬ ಹಾಗೂ ಬಂಧು ಬಾಂಧವರ ಜೊತೆಗೆ ಆಗಮಿಸಿ ತುಂಗಭದ್ರೆಗೆ ಪೂಜಿಸಿದರು. ಕುಟುಂಬದೊಂದಿಗೆ ಕುಳಿತು ಭೋಜನ ಸವಿದು ನದಿ ದಡದಲ್ಲಿಯೇ ಬೀಡು ಬಿಟ್ಟು ಸಂಜೆ ಎಳ್ಳು ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಕ್ರಾಂತಿ ಆಚರಣೆ ಮಾಡಿದರು.

ನದಿಸಾಲಿನ ಗ್ರಾಮಗಳಾದ ರಾಜನಹಳ್ಳಿ, ಬಿಳಸನೂರು, ನಂದಿಗಾವಿ, ಎಳೆಹೊಳೆ, ಧೂಳೆಹೊಳೆ, ಚಿಕ್ಕಬಿದರಿ, ಸಾರಥಿ, ನಂದಿಗುಡಿ, ಗುತ್ತೂರು, ಹರ್ಲಾಪುರ, ಹಲಸಬಾಳು, ಉಕ್ಕಡಗಾತ್ರಿ ಗ್ರಾಮದ ಬಳಿಯ ನದಿ ದಡಗಳ ಸಮೀಪದ ಗ್ರಾಮಸ್ಥರು ಆಗಮಿಸಿ, ಪುಣ್ಯಸ್ನಾನ, ಪೂಜೆ, ಭೋಜನ ಸಂಪ್ರದಾಯ ನೆರವೇರಿಸಿದರು. - - - -14ಎಚ್‍ಆರ್‍ಆರ್ 03: ಹರಿಹರದ ತುಂಗಭದ್ರಾ ದಡದಲ್ಲಿ ಮೃಷ್ಟಾನ್ನ ಭೋಜನ ಸವಿಯುತ್ತಿರುವ ಕುಟುಂಬ.

-14ಎಚ್‍ಆರ್‍ಆರ್03ಎ: ಹರಿಹರದ ತುಂಗಭದ್ರಾ ನದಿ ದಡದಲ್ಲಿ ಸಂಕ್ರಾಂತಿ ಪುಣ್ಯಸ್ನಾನಕ್ಕಾಗಿ ಬಂದಿರುವ ವಿವಿಧ ಊರುಗಳ ಜನತೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?