ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮ

KannadaprabhaNewsNetwork |  
Published : Jan 16, 2025, 12:49 AM IST
೧೫ಕೆಎಂಎನ್‌ಡಿ-೩ಮಂಡ್ಯ ತಾಲೂಕಿನ ಹೊಳಲು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಸೊಗಡನ್ನು ಮರೆಯುತ್ತಿರುವ ಯುವ ಜನಾಂಗವು ಅದಕ್ಕೆ ಪೂರಕವಾಗಿ ಈ ದಿನ ಸಂಕ್ರಾಂತಿ ಸುಗ್ಗಿ ಸಂಭ್ರಮದ ಆಚರಣೆಯ ಬಗ್ಗೆ ತಿಳಿಸುವ ಸಲುವಾಗಿ ದವಸ, ಧಾನ್ಯಗಳ ರಾಶಿ ಪೂಜೆ, ಗೋಪೂಜೆ, ದನ-ಕರುಗಳ ಕಿಚ್ಚು ಹಾಯಿಸುವುದು ಹಾಗೂ ಹಬ್ಬದ ಮಹತ್ವ ಸಾರುವ ಸುಗ್ಗಿ ಹಬ್ಬ ಆಚರಣೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಹೊಳಲು ಗ್ರಾಮದ ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸಿ.ಜೆ.ಜವರೇಗೌಡ ಅವರು ರಾಶಿ ಪೂಜೆ ಮಾಡುವ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು.

ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಸೊಗಡನ್ನು ಮರೆಯುತ್ತಿರುವ ಯುವ ಜನಾಂಗವು ಅದಕ್ಕೆ ಪೂರಕವಾಗಿ ಈ ದಿನ ಸಂಕ್ರಾಂತಿ ಸುಗ್ಗಿ ಸಂಭ್ರಮದ ಆಚರಣೆಯ ಬಗ್ಗೆ ತಿಳಿಸುವ ಸಲುವಾಗಿ ದವಸ, ಧಾನ್ಯಗಳ ರಾಶಿ ಪೂಜೆ, ಗೋಪೂಜೆ, ದನ-ಕರುಗಳ ಕಿಚ್ಚು ಹಾಯಿಸುವುದು ಹಾಗೂ ಹಬ್ಬದ ಮಹತ್ವ ಸಾರುವ ಸುಗ್ಗಿ ಹಬ್ಬ ಹಾಗೂ ಸಂಕ್ರಾಂತಿ ಬಗ್ಗೆ ಮಕ್ಕಳಿಗೆ ಸವಿಸ್ತಾರವಾಗಿ ವಿವರಿಸಿದರು.

ಪ್ರೌಢ ಶಾಲೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಮನರಂಜನೆ ನೀಡಿದರು. ಶಾಲೆಯ ಆಡಳಿತಾಧಿಕಾರಿ ಸುಮಾ, ಸಂಯೋಜನಾಧಿಕಾರಿ ಶೋಭಾ, ಮುಖ್ಯ ಶಿಕ್ಷಕ ವೀಣಾ, ಕುಸುಮ ಹಾಗೂ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.

ಸಿ.ಸುರೇಶ್‌ಗೆ ಪಿಎಚ್‌.ಡಿ ಪದವಿ

ಕೆ.ಎಂ.ದೊಡ್ಡಿ: ಮದ್ದೂರು ಮಹಿಳಾ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ ಸಿ.ಸುರೇಶ್ ಅವರಿಗೆ ಆಂಧ್ರ ಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ.

ಗೌರಿಬಿದನೂರಿನ ಎಇಎಸ್ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಎ.ಇ. ಪರಮೇಶ್ವರಗುಪ್ತ ಅವರ ಮಾರ್ಗದರ್ಶನದಲ್ಲಿ ಟುವೀಲರ್ ಇನ್‌ದ ಇಂಡಿಯನ್ ರೂರಲ್ ಮಾರ್ಕೆಟ್-ಎಕೇಸ್ ಸ್ಟಡಿ ವಿಥ್ ರೆಫ್ರಿರೆನ್ಸ್ ಟು ಚಿಕ್ಕಬಳ್ಳಾಪುರ ಡಿಸ್ಟ್ರಿಕ್ಟ್ ಈ ವಿಷಯದ ಮೇಲೆ ಅಧ್ಯಯನ ನಡೆಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಡಾಕ್ಟ್‌ರೇಟ್ ಲಭಿಸಿದೆ. ಸಿ.ಸುರೇಶ್ ಅವರು ಚಿಕ್ಕರಸಿನಕೆರೆ ಗ್ರಾಮದದವರು. ಭಾರತೀ ಕಾಲೆಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ ಎನ್ನಲಾಗಿದೆ.ಇಂದು ರೈತರ ಬೃಹತ್ ಪ್ರತಿಭಟನೆ

ಪಾಂಡವಪುರ: ರಾಜ್ಯ ರೈತ ಸಂಘದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಮತ್ತು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ.16 ರಂದು ಬೆಳಗ್ಗೆ ಪಟ್ಟಣದ ಐದು ದೀಪ ವೃತ್ತದ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಹೋರಾಟಗಾರರು, ಸಂಘಟನೆ ಮುಖಂಡರು, ಕಾರ್ಯಕರ್ತರು ಪಕ್ಷಭೇಧ ಮರೆತು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್ ಮನವಿ ಮಾಡಿದ್ದಾರೆ.

PREV

Recommended Stories

ಅನನ್ಯಾ ಭಟ್‌ ಅರವಿಂದ್‌-ವಿಮಲಾ ಪುತ್ರಿ, ಕೊ* ಆಗಿದ್ದು ನಿಜ: ಸುಜಾತಾ
ಬುಕರ್‌ ವಿಜೇತ ಬಾನುರಿಂದ ದಸರಾ ಉದ್ಘಾಟನೆ: ಸಿಎಂ