ಸಮಾಜದಲ್ಲಿ ಮಹಿಳೆಯರ ಶಕ್ತಿ ಅನಾವರಣವಾಗಲಿ

KannadaprabhaNewsNetwork |  
Published : Jul 17, 2026, 02:00 AM IST
ಯಲಬುರ್ಗಾದಲ್ಲಿ ಹಮ್ಮಿಕೊಂಡಿದ್ದ ೧೫ನೇ ಮಾಸಿಕ ಬಸವಾನುಭವ ಶಿವಶರಣರ ಚಿಂತಾನುಗೋಷ್ಟಿಯಲ್ಲಿ ಬ್ರ.ಕು.ಯೋಗಿನಿ ಅಕ್ಕ, ಬ್ರ.ಕು.ಗೀತಾ ಅಕ್ಕನವರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಮಾತಿನಲ್ಲಿ ವಿನಯ, ನಡೆಯಲ್ಲಿ ನೀತಿ, ಮನದಲ್ಲಿ ಮಾನವೀಯತೆ ಇರುವುದೇ ನಿಜವಾದ ಸಂಸ್ಕಾರ.ಇಂದು ಮೊಬೈಲ್ ಸಂಸ್ಕೃತಿಯಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯರ ಶಕ್ತಿ ಅನಾವರಣವಾಗಲು ಮುಖ್ಯವಾಹಿನಿಗೆ ಬರಬೇಕು ಎಂದು ಕೊಪ್ಪಳದ ಈಶ್ವರಿ ವಿಶ್ವವಿದ್ಯಾಲಯದ ಬ್ರ.ಕು. ಯೋಗಿನಿ ಅಕ್ಕ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬುಧವಾರ ಮಹಿಳಾ ಬಸವ ಶಿವಯೋಗ ಸಮಿತಿಯಿಂದ ಹಮ್ಮಿಕೊಂಡಿದ್ದ ೧೫ನೇ ಮಾಸಿಕ ಬಸವಾನುಭವ ಶಿವಶರಣರ ಚಿಂತನಾಗೋಷ್ಟಿ,ಶರಣ ಕುಂಬಾರ ಗುಂಡಯ್ಯ ಹಾಗೂ ಪಂಡಿತ್ ಪುಟ್ಟರಾಜ ಗವಾಯಿಗಳ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಆತ್ಮಶುದ್ಧಿಯಿಂದ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ಅಹಂಕಾರ ತ್ಯಜಿಸಿ, ಎಲ್ಲರೂ ಒಂದೇ ಎಂಬ ಭಾವ ಮೂಡಿದಾಗ ಮಾತ್ರ ಜೀವನಕ್ಕೆ ಅರ್ಥ ಬರುತ್ತದೆ. ನೆಮ್ಮದಿ ಮತ್ತು ಸುಖ ಸಮೃದ್ಧಿಯಿಂದ ಇರಲು ನಾವು ಆತ್ಮದಿಂದ ಒಳ್ಳೆಯವರಾಗಬೇಕು. ಪ್ರತಿ ತಿಂಗಳ ಇಂತಹ ಗೋಷ್ಠಿ ಆಯೋಜಿಸಿ ಶರಣರ ಚಿಂತನೆ ಬಿತ್ತರಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಭೂನ್ಯಾಯ ಮಂಡಳಿಯ ಸದಸ್ಯೆ ಸಾವಿತ್ರಿ ಗೊಲ್ಲರ್, ಉಪನ್ಯಾಸಕಿ ಸುವರ್ಣ ಕುಂಬಾರ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನರಾಗಿ ಕುಂಬಾರ ಗುಂಡಯ್ಯನವರು ಕಾಯಕಯೋಗಿಯಾಗಿ ಕೆಲಸ ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆಗೆ ಎಲ್ಲ ಶರಣರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಾಡಿನ ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾದ ಪಂ. ಪುಟ್ಟರಾಜ ಗವಾಯಿಗಳವರ ಸಾಮಾಜಿಕ ಕೊಡುಗೆ ಎಂದಿಗೂ ಮರೆಯುವಂತಿಲ್ಲ ಎಂದರು.

ಬಸವ ಶಿವಯೋಗ ಸಮಿತಿ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ,‌‌ ದಿಶಾ ಸಮಿತಿ ಸದಸ್ಯೆ ಡಾ. ನಂದಿತಾ ಶಿವನಗೌಡ ದಾನರಡ್ಡಿ ಮಾತನಾಡಿದರು.

ಈ ಸಂದರ್ಭ ಮಹಿಳಾ ಘಟಕ ಅಧ್ಯಕ್ಷೆ ಜ್ಯೋತಿ ಪಲ್ಲೇದ, ಅನುಸೂಯಾ ತೆಂಗಿನಕಾಯಿ, ಗೀತಾ ಅಕ್ಕ,ನಿರ್ಮಲಾ ಶರಣಪ್ಪ ಗಾಂಜಿ, ಸುನೀತಾ ಪಂತಗರಾಯ, ವಿಜಯಲಕ್ಷ್ಮಿ ತೆಂಗಿನಕಾಯಿ, ಆಶಾರಾಣಿ, ರಚನಾ ತೆಂಗಿನಕಾಯಿ, ಗೌರಮ್ಮ ಕುಂಬಾರ, ಶೋಭಾ ಕಂದಕೂರು, ವೀಣಾ ಹೊಸಮನಿ, ನಂದಾ ತೆಂಗಿನಕಾಯಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ವೀರಣ್ಣ ನಿಂಗೋಜಿ, ಅಶೋಕ ಮಾಲಿಪಾಟೀಲ್, ದೇವಪ್ಪ ವಾಲ್ಮೀಕಿ, ಕಳಕೇಶ ಅರಕೇರಿ, ಗಾಳೇಪ್ಪ ಬಂಡಿಹಾಳ, ಫಕೀರಪ್ಪ ಗಾಣಗೇರ್, ಶರಣಬಸಪ್ಪ ದಾನಕೈ ಹಾಗೂ ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿಲ್ಲಾ ಒಬಿಸಿ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಬಿಜೆಪಿಗೆ ಬೀರಪ್ಪ ಧನ್ಯವಾದ
ಹವಾಮಾನ ವೈಪರೀತ್ಯ: ರೈತರು ಪರ್ಯಾಯ ಬೆಳೆಗಳತ್ತ ಯೋಚಿಸಲು ಡೀಸಿ ಸಲಹೆ