ನಾಲ್ಕು ಸೆಮಿಸ್ಟರ್ ಗಳ ಸಂಸ್ಕೃತ ಭಾಷಾ ಪಠ್ಯಪುಸ್ತಕ ಅನಾವರಣ

KannadaprabhaNewsNetwork |  
Published : Jul 18, 2025, 12:54 AM IST
ಗುರು ಪೂಜೆ | Kannada Prabha

ಸಾರಾಂಶ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಡಾ. ಶ್ರೀಧರ ಭಟ್ಟರ ಸಂಪಾದಕತ್ವದಲ್ಲಿ ರಚನೆಗೊಂಡ ನಾಲ್ಕು ಸೆಮಿಸ್ಟರ್ ಗಳ ಸಂಸ್ಕೃತ ಭಾಷಾ ಪಠ್ಯಪುಸ್ತಕಗಳನ್ನು ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

‘ಗುರೋಸ್ತು ಮೌನಂ ವ್ಯಾಖ್ಯಾನಂ ’ ಎಂಬ ಸಂಸ್ಕೃತದ ಉಕ್ತಿಯಂತೆ ಗುರುವಾದವರು ಶಿಷ್ಯನ ಎದುರಿಗೆ ಮೌನವಾಗಿ ಕುಳಿತರೂ ಶಿಷ್ಯನ ಎಲ್ಲ ಸಂಶಯಗಳೂ ದೂರವಾಗುತ್ತವೆ. ಅಧ್ಯಾಪಕರು ಮಾತನಾಡುವುದಕ್ಕಿಂತ ಹೆಚ್ಚಾಗಿ ತಮ್ಮ ನಡವಳಿಕೆ ಹಾಗೂ ವ್ಯಕ್ತಿತ್ವದಿಂದ ಶಿಷ್ಯನನ್ನು ಪ್ರಭಾವಿಸಬೇಕು. ಯಾವ ವ್ಯಕ್ತಿ ಗುರು ತತ್ವವನ್ನು ಸಾಕ್ಷಾತ್ಕಾರ ಮಾಡಿಕೊಂಡು ಸತತವಾಗಿ ಶಿಷ್ಯರ ಏಳಿಗೆಗಾಗಿ ತನ್ನನ್ನು ಸಮರ್ಪಿಸಿಕೊಳ್ಳುವನೋ, ಅವನು ನಿಜವಾದ ಗುರು ಎಂದು ಪ್ರಶ್ನೋತ್ತರ ಮಾಲಿಕೆ ಗ್ರಂಥದಲ್ಲಿ ಹೇಳಿದೆ ಎಂದು ಉಜಿರೆ ಶ್ರೀ. ಧ. ಮಂ. ಕಾಲೇಜಿನ ಆಡಳಿತ ಕುಲಸಚಿವ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ಹೇಳಿದ್ದಾರೆ.

ಅವರು ಇತ್ತೀಚೆಗೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಡಾ. ಶ್ರೀಧರ ಭಟ್ಟರ ಸಂಪಾದಕತ್ವದಲ್ಲಿ ರಚನೆಗೊಂಡ ನಾಲ್ಕು ಸೆಮಿಸ್ಟರ್ ಗಳ ಸಂಸ್ಕೃತ ಭಾಷಾ ಪಠ್ಯಪುಸ್ತಕಗಳನ್ನು ಅನಾವರಣಗೊಳಿಸಿ ಮಾತನಾಡಿದರು.

ಇತಿಹಾಸ ವಿಭಾಗದ ಉಪನ್ಯಾಸಕಿ ಅಭಿಜ್ಞಾ ಮಾತನಾಡುತ್ತ ನಾವು ಈ ಭೂಮಿಯಲ್ಲಿ ಹುಟ್ಟಿದಾಗ ಕೇವಲ ಮಾನವರಾಗಿರುತ್ತೇವೆ. ನಮ್ಮನ್ನು ಸಂಪೂರ್ಣ ಮನುಷ್ಯರನ್ನಾಗಿ ಮಾಡುವವರು ಗುರುಗಳು. ಭಾರತವು ವಿಶ್ವಕ್ಕೆ ಗುರು. ನಾವು ಹುಟ್ಟಿದಾಗಿಂದಲೂ ದೇವಋಣ, ಪಿತೃಋಣ ಹಾಗೂ ಋಷಿಋಣ ಗಳಿಗೆ ಬದ್ಧರಾಗಿರುತ್ತೇವೆ. ಜ್ಞಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ ಋಣಗಳ ಋಣ ವಿಮೋಚನೆ. ನಮ್ಮಲ್ಲಿ ಗುರುವಿನಿಂದ ಬಂದ ವಿದ್ಯೆಗೆ ಗುರುದಕ್ಷಿಣೆ ನೀಡುವ ಪದ್ಧತಿ ಇದೆ. ಭಾರತದ ಶ್ರೇಷ್ಠ ಶಿಷ್ಯರ ಶ್ರೇಣಿಯಲ್ಲಿ ಉಪಮನ್ಯು ಹಾಗೂ ಏಕಲವ್ಯ ಶ್ರೇಷ್ಠ ಶಿಷ್ಯ ವೃಂದದವರಲ್ಲದೆ ವಿಶ್ವಕ್ಕೆ ಶ್ರೇಷ್ಠ ಗುರುಗಳನ್ನು ನೀಡಿರುವುದು ಭಾರತದ ಕೊಡುಗೆಯಾಗಿದೆ ಎಂದರು.ಜೈವಿಕ ತಂತ್ರಜ್ಞಾನ ವಿಭಾಗದ ಉಪನ್ಯಾಸಕ ದೀಕ್ಷಿತ್ ರೈ ಮಾತನಾಡಿ , ಮಹಾಭಾರತದಲ್ಲಿ ಘೃತ (ತುಪ್ಪ) ಪಾತ್ರೆಗಳಲ್ಲಿ ಮಾಂಸದ ಮುದ್ದೆಗಳನ್ನು ಹಾಕಿ ಕೌರವರ ಜನನಕ್ಕೆ ಕಾರಣವಾಗಿ ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಅಂಗಾಂಶ ಕೃಷಿಯನ್ನು ಪರಿಚಯಿಸಿದವರು ವೇದವ್ಯಾಸರು. ಆದರೆ ನಮ್ಮ ಭಾರತೀಯರ ಮಹತ್ವ ಹಾಗೂ ಅವರ ಕೊಡುಗೆ ನಮಗೆ ತಿಳಿಯದಿರುವುದು ವಿಷಾದಕರ ಎಂದರು. ಒಬ್ಬ ವಿದ್ಯಾರ್ಥಿಯನ್ನು ಸಂಪೂರ್ಣವಾಗಿ ರೂಪಿಸುವವರು ಗುರು ಎಂದು ಕಾಲೇಜಿನ ಉಪಪ್ರಾಚಾರ್ಯೆ ನಂದಾಕುಮಾರಿ ಹಾಗೂ ಪರೀಕ್ಷಾಂಗ ಕುಲ ಸಚಿವ ಗಣೇಶ ನಾಯ್ಕ ಗುರುವಿನ ಮಹತ್ವದ ಬಗ್ಗೆ ತಿಳಿಸಿ ಶುಭಾಶಯ ಕೋರಿದರು.ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಅಭಿಲಾಷ್ ಕೆ.ಎಸ್. , ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕ ಗುರುರಾಜ್, ಇತಿಹಾಸ ವಿಭಾಗದ ಉಪನ್ಯಾಸಕಿ ಕುಮಾರಿ ಅಭಿಜ್ಞಾ ಉಪಸ್ಥಿತರಿದ್ದು, ಶಿಷ್ಯರ ಜೀವನದಲ್ಲಿ ಗುರುವಿನ ಪಾತ್ರದ ಕುರಿತು ಮಾತನಾಡಿದರು. ಸಂಸ್ಕೃತ ವಿಭಾಗದ ಅಧ್ಯಾಪಕ ಶ್ರೇಯಸ್ ಪಾಳಂದೆಯವರು ಸ್ವಾಗತಿಸಿ, ದ್ವಿತೀಯ ವರ್ಷದ ವಿಜ್ಞಾನ ವಿದ್ಯಾರ್ಥಿಗಳಾದ ಅಲಕಾ ಮತ್ತು ಬಳಗ ಪ್ರಾರ್ಥಿಸಿ, ಚಿನ್ಮಯ ಅನಂತ ಹೆಗಡೆ ಗುರು ಅಷ್ಟಕಂ ಸ್ತೋತ್ರ ಪಠಿಸಿದರು. ಪ್ರೀತಾ ಕಾರ್ಯಕ್ರಮ ನಿರ್ವಹಿಸಿದರು.

PREV

Latest Stories

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಸಂಸ್ಕಾರ ಅಗತ್ಯ
ಕುಮ್ಕಿ ಹಕ್ಕು ರದ್ದುಪಡಿಸಿ ದಲಿತರಿಗೆ ಹಂಚಿ: ಶ್ಯಾಮರಾಜ್‌ ಬಿರ್ತಿ ಆಗ್ರಹ
ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ