ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶಾಸಕ ಎಂ.ಆರ್.ಮಂಜುನಾಥ್ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶಾಸಕ ಎಂ.ಆರ್.ಮಂಜುನಾಥ್ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.ಹನೂರು ಪಟ್ಟಣದಲ್ಲಿ ಬಂಜಾರ ಸಮುದಾಯದ ವತಿಯಿಂದ ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳ ನಡೆಯುತ್ತಿರುವ ವಿಭಾಗಿಯ ಮಟ್ಟದ 287ನೇ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮಕ್ಕೆ ಸಾಂಪ್ರದಾಯದಂತೆ ಕಲಾತಂಡಗಳು ವಿವಿಧ ತಾಲೂಕುಗಳಿಂದ ಭಾಗವಹಿಸಿದ್ದರು.
ಬಂಜಾರ ಕಲಾತಂಡಗಳ ನೃತ್ಯ ಪ್ರದರ್ಶನ:
ಬಂಜಾರ ಸಮುದಾಯದ ಹೆಣ್ಣು ಮಕ್ಕಳು ಸೇರಿದಂತೆ ವಿವಿಧ ವೇಷಭೂಷಣಗಳ ಜೊತೆ ಡೊಳ್ಳು ಕುಣಿತ ಬೆದರು ಬೊಂಬೆಗಳು ಸೇರಿದಂತೆ ಸಾಂಪ್ರದಾಯದ ಉಡುಗೆಯನ್ನು ಧರಿಸಿ ಆರ್‌ಎಂಸಿ ಆವರಣದಿಂದ ಮುಖ್ಯರಸ್ತೆಯ ಮೂಲಕ ತೆರಳಿದ ಕಲಾತಂಡಗಳಿಂದ ಆಕರ್ಷಕ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್, ಮಾಜಿ ಶಾಸಕ ನರೇಂದ್ರ, ಢಮರುಗ ಬಾರಿಸುವ ಮೂಲಕ ಗಮನ ಸೆಳೆದರು.
ಸೇವಾಲಾಲ್ ಚಿತ್ರ ಮೆರವಣಿಗೆ:
ಈ ವೇಳೆ ಸರಿಗಮಪ ಗಾಯಕ ರಮೇಶ್ ಹಾಗೂ ಸಮುದಾಯದ ಗುರುಹಿರಿಯರು, ಮೆರವಣಿಗೆಯಲ್ಲಿ ಸಾಗಿ ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣಕ್ಕೆ ವಿಜೃಂಬಣೆಯಿಂದ ಕಲಾತಂಡಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಈ ವೇಳೆ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡ ನಿಶಾಂತ್ ದತ್ತೇಶ್ ಕುಮಾರ್, ಬಂಜಾರ ಸಮುದಾಯದ ಗೌರವ ಅಧ್ಯಕ್ಷ ಶಾಂತರಾಜು ಉಪಸ್ಥಿತರಿದ್ದರು.
---
28ಸಿಎಚ್ಎನ್13
ಹನೂರಿನ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶಾಸಕ ಎಂ.ಆರ್. ಮಂಜುನಾಥ್ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು.
---
28ಸಿಎಚ್ಎನ್14 ಮತ್ತು15
ಹನೂರು ಪಟ್ಟಣದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.